ಮಂತ್ರಾಲಯ ಕ್ಷೇತ್ರದಲ್ಲಿ ಗಾಯನ ಸೇವೆ

Upayuktha
0




ಬೆಂಗಳೂರು:  ಮಂತ್ರಾಲಯ ಕ್ಷೇತ್ರದಲ್ಲಿ ಪರಮಪೂಜ್ಯ ಶ್ರೀ ಶ್ರೀ ಸುಬುಧೇಂದ್ರತೀರ್ಥ ಶ್ರೀಪಾದಂಗಳವರ ಅನುಗ್ರಹ ಆಶೀರ್ವಾದದೊಂದಿಗೆ ಬೆಂಗಳೂರಿನ ಯುವ ಗಾಯಕಿ ಕು|| ರಚನಾ ಶರ್ಮಾ ಜನವರಿ 2, ಗುರುವಾರದಂದು ಸಲ್ಲಿಸಿದ ಗಾಯನ ಸೇವೆಯಲ್ಲಿ ಅಪರೋಕ್ಷ ಜ್ಞಾನಿಗಳಿಂದ ರಚಿಸಲ್ಪಟ್ಟ ಹಲವಾರು ಅಪರೂಪದ ಹರಿದಾಸರ ಪದಗಳನ್ನು ಪ್ರಸ್ತುತ ಪಡಿಸಿದರು. 


ವಾದ್ಯ ಸಹಕಾರದಲ್ಲಿ ಬೆಂಗಳೂರಿನವರೇ ಆದ ವಿದ್ವಾನ್ ಮೈಸೂರು ಸಂಜೀವ್ ಕುಮಾರ್ ಪಿಟೀಲು ವಾದನದಲ್ಲಿ ಹಾಗೂ ವಿದ್ವಾನ್ ಮುರಳಿ ನಾರಾಯಣರಾವ್ ಮೃದಂಗದಲ್ಲಿ ಸಾಥ್ ನೀಡಿದರು. ಕಾರ್ಯಕ್ರಮದ ನಂತರ ಶ್ರೀಪಾದಂಗಳವರು ಎಲ್ಲಾ ಕಲಾವಿದರಿಗೂ ಫಲ ಮಂತ್ರಾಕ್ಷತೆ ಮತ್ತು ಅನುಗ್ರಹ ಪತ್ರ ನೀಡಿ ಆಶೀರ್ವದಿಸಿದರು. ಈ ಕಾರ್ಯಕ್ರಮವನ್ನು ಪದ್ಮನಾಭಾಚಾರ್ ಅಚ್ಚುಕಟ್ಟಾಗಿ ವ್ಯವಸ್ಥೆ ಮಾಡಿದ್ದರು.


  ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್‌ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್‌ ಆಗಿ

ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಉಪಯುಕ್ತ ನ್ಯೂಸ್‌ ವಾಟ್ಸಪ್‌  ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ


web counter 

Post a Comment

0 Comments
Post a Comment (0)
Maruti Suzuki Festival of Colours
Maruti Suzuki Festival of Colours
To Top