ಅರಿಯಪ್ಪಾಡಿ ಮಾಡ ದೈವಗಳ ಪ್ರತಿಷ್ಠಾ ದಿನ

Upayuktha
0

ಹಸಿರುವಾಣಿ ಹೊರೆ ಕಾಣಿಕೆ ಮೆರವಣಿಗೆ- ಉಗ್ರಾಣ ಮುಹೂರ್ತ



ಬದಿಯಡ್ಕ: ಮುಂಡಿತ್ತಡ್ಕ ಸಮೀಪದ ಅರಿಯಪ್ಪಾಡಿ ಮಾಡದ ಈರ್ವರು ಉಳ್ಳಾಕ್ಲು ಹಾಗೂ ಪರಿವಾರ ದೈವಸ್ಥಾನದ ಪ್ರತಿಷ್ಠಾ ದಿನ‌ ಹಾಗೂ ದೈವಗಳ ನೇಮೋತ್ಸವ ಮಂಗಳವಾರದಿಂದ ಆರಂಭಗೊಂಡಿದೆ.


ಇದರ ಅಂಗವಾಗಿ ಮಾಡದ ಮಹಾದ್ವಾರದಿಂದ ಹಸಿರುವಾಣಿ ಹೊರೆ ಕಾಣಿಕೆ ಮೆರವಣಿಗೆ ಕ್ಷೇತ್ರಕ್ಕೆ ಸಾಗಿ ಬಂತು. ಕ್ಷೇತ್ರ ಸಮಿತಿಯ ವಿವಿಧ ಪದಾಧಿಕಾರಿಗಳು, ಕಾರ್ಯಕರ್ತರು, ಮಾತೃ ಸಮಿತಿಯವರನ್ನು ಒಳಗೊಂಡ ಮೆರವಣಿಗೆಯು ವಾದ್ಯ ವಾಲಗದೊಂದಿಗೆ ಸಾಗಿ ಬಂತು. ಬಳಿಕ  ಬ್ರಹ್ಮಶ್ರೀ ದೇಲಂಪಾಡಿ ಗಣೇಶ ತಂತ್ರಿಗಳ ನೇತೃತ್ವದಲ್ಲಿ ಗಣಪತಿ ಹವನ, ಉಗ್ರಾಣ ಮುಹೂರ್ತ, ಶ್ರೀ ದೈವಗಳ ಮಹಾ ತಂಬಿಲ ಜರಗಿತು. ಈ ಸಂದರ್ಭದಲ್ಲಿ ಈರ್ವರು ಉಳ್ಳಾಕ್ಲು ಮಹಿಳಾ ಭಜನಾ ಸಂಘದ ಉದ್ಘಾಟನೆ ಹಾಗೂ ಭಜನಾ ಸಂಕೀರ್ತನೆ ಜರಗಿತು.


ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್‌ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್‌ ಆಗಿ

ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಉಪಯುಕ್ತ ನ್ಯೂಸ್‌ ವಾಟ್ಸಪ್‌  ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ


web counter 


Post a Comment

0 Comments
Post a Comment (0)
Mandovi Motors Presents MONSOON BONANZA
Mandovi Motors Presents MONSOON BONANZA
To Top