ಬಳ್ಳಾರಿ: ಭಾರತೀಯ ಜನತಾ ಪಾರ್ಟಿಯ ಬಳ್ಳಾರಿ ಜಿಲ್ಲಾಧ್ಯಕ್ಷರಾಗಿ ಎರಡನೇ ಅವಧಿಗೆ ಅನಿಲ್ ನಾಯ್ಡು ಅವಿರೋಧವಾಗಿ ಆಯ್ಕೆಯಾಗಿದ್ದಾರೆ ಎಂದು ಜಿಲ್ಲಾಧ್ಯಕ್ಷರ ಚುನಾವಣೆಯ ಉಸ್ತುವಾರಿ ಅರುಣ್ ಶಹಾಪುರರವರು ಹೇಳಿದರು. ನಗರದ ಮೋಕಾ ರಸ್ತೆಯ ವಾಜಪೇಯಿ ಬಡಾವಣೆಯಲ್ಲಿರುವ ಬಿಜೆಪಿ ಜಿಲ್ಲಾ ಕಾರ್ಯಾಲಯದಲ್ಲಿ ಏರ್ಪಡಿಸಿದ್ದ ಸುದ್ದಿಗೋಷ್ಠಿಯನ್ನು ಅವರು ಉದ್ದೇಶಿಸಿ ಮಾತನಾಡಿ ಅಧಿಕೃತವಾಗಿ ಜಿಲ್ಲಾಧ್ಯಕ್ಷ ಘೋಷಣೆ ಮಾಡಿದರು.
ಅನಿಲ್ ನಾಯ್ಡು ಅವರು ಎಪಿವಿಪಿಯಿಂದ ಹಾಗೂ ಸಂಘ ಪರಿವಾರದಿಂದ ಬಂದಂತಹ ಸಂಘಟನಾ ಚತುರರು ಸಧ್ಯ ಬಳ್ಳಾರಿಯಲ್ಲಿ ನಡೆಯುತ್ತಿರುವ ಎಲ್ಲಾ ವಿದ್ಯಾಮಾನಗಳನ್ನು ಅವಲೋಕಿಸಿದ್ದೇನೆ ಎಲ್ಲವನ್ನೂ ಸರಿದೂಗಿಸಿಕೊಂಡು ಹೋಗುವ ಶಕ್ತಿ ಅನಿಲ್ ನಾಯ್ಡುರಿಗೆ ಇದೆ ಹಾಗಾಗಿ ಪಕ್ಷ ಅವರ ಸಂಘಟನೆ ಚತುರತೆ ಹಾಗೂ ಪಕ್ಷ ನಿಷ್ಠೆಯನ್ನು ಅರಿತು, ಅಲ್ಲದೇ ಜಿಲ್ಲೆಯ ಎಲ್ಲಾ ನಾಯಕರ ಅಭಿಪ್ರಾಯ ಪಡೆದು ಅವಿರೋಧವಾಗಿ ಅನಿಲ್ ನಾಯ್ಡು ಅವರನ್ನು ಬಳ್ಳಾರಿ ಜಿಲ್ಲಾ ಬಿಜೆಪಿ ಜಿಲ್ಲಾಧ್ಯಕ್ಷರಾಗಿ ಆಯ್ಕೆ ಮಾಡಲಾಗಿದೆ ಎಂದರು.
ಜಿಲ್ಲಾಧ್ಯಕ್ಷರ ಸ್ಥಾನಕ್ಕೆ ಅನಿಲ್ ನಾಯ್ಡು ಅವರ ನಾಮಪತ್ರಯೊಂದೆ ಸಲ್ಲಿಕೆಯಾದ ಕಾರಣ ಅವರನ್ನು ಅವಿರೋಧವಾಗಿ ಆಯ್ಕೆ ಮಾಡಲಾಗಿದೆ ಎಂದು ಹೇಳಿದರು. ಜಿಲ್ಲಾಧ್ಯಕ್ಷರಾಗಿ ಘೋಷಣೆಯಾದ ಬಳಿಕ ಮಾತನಾಡಿದ ಅನಿಲ್ ನಾಯ್ಡು ಪಕ್ಷದ ರಾಷ್ಟ್ರೀಯ ನಾಯಕರು ರಾಜ್ಯ ನಾಯಕರು ಹಾಗೂ ಜಿಲ್ಲೆಯ ಎಲ್ಲಾ ನಾಯಕರು ನನ್ನ ಮೇಲೆ ವಿಶ್ವಾಸ ನಂಬಿಕೆಯನ್ನ ಇಟ್ಟು ಮತ್ತೊಮ್ಮೆ ನನ್ನನ್ನು ಎರಡನೇ ಅವಧಿಗೆ ಜಿಲ್ಲಾಧ್ಯಕ್ಷರಾಗಿ ಅವಿರೋಧವಾಗಿ ಆಯ್ಕೆಯಾಗಲು ಸಹಕರಿಸಿದ ಎಲ್ಲಾ ನಾಯಕರಿಗೆ ನಾನು ಅಭಾರಿಯಾಗಿದ್ದೇನೆ ಎಂದರು ಈ ಹಿಂದೆ ಪಕ್ಷಕ್ಕೆ ಎಲ್ಲಿ ಹಿನ್ನಡೆಯಾಗಿದೆ ಅನ್ನೋದನ್ನ ನೋಡಿ ಮುಂದೆ ಪಕ್ಷವನ್ನು ಅಧಿಕಾರಕ್ಕೆ ತರುವ ನಿಟ್ಟಿನಲ್ಲಿ ಪಕ್ಷ ಸಂಘಟನೆಯನ್ನ ಮಾಡುವುದಾಗಿ ತಿಳಿಸಿದರು.
ಈ ಸಂದರ್ಭದಲ್ಲಿ ಅರುಣ್ ಶಹಪುರ, ಗಂಗಾವತಿ ಶಾಸಕರಾದ ಜಿ.ಜನಾರ್ದನರೆಡ್ಡಿ, ಮಾಜಿ ಶಾಸಕ ಎಸ್.ಸೋಮಲಿಂಗಪ್ಪ, ಕೆ.ಎ.ರಾಮಲಿಂಗಪ್ಪ, ಡಾ.ಮಹಿಪಾಲ್, ಯರಿಂಗಳಿ ತಿಮ್ಮಾರೆಡ್ಡಿ, ಗುತ್ತಿಗನೂರು ವಿರುಪಾಕ್ಷಪ್ಪ, ಬಿಜೆಪಿ ಜಿಲ್ಲಾಧ್ಯಕ್ಷ ಅನಿಲ್ ನಾಯ್ಡು, ಮುಖಂಡರಾದ ಕೆ. ಎಸ್.ದಿವಾಕರ್, ಗುರುಲಿಂಗನಗೌಡ, ನೂರುಬಾಷ, ಮುರಾರಿಗೌಡ, ಸಾಧನಾ ಹೀರೆಮಠ, ಸುಗುಣ, ಡಾ.ಅರುಣಾ, ಮಲ್ಲಿಕಾರ್ಜುನ ಆಚಾರ್, ಮಾಜಿ ಬುಡಾ ಅಧ್ಯಕ್ಷ ಮಾರುತಿ ಪ್ರಸಾದ್, ವಿಜಯಲಕ್ಷ್ಮಿ, ಡಾ.ಬಿ.ಕೆ.ಸುಂದರ್, ಉಜ್ವಲ ಶ್ರೀಧರ್, ಕೆ.ಎ.ಮಧು, ಸೋಮನಗೌಡ, ಸಿದ್ದೇಶ್ ಊಳೂರು, ಅಡವಿಸ್ವಾಮಿ, ಮಲ್ಲೇಶ್ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.
ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್ ಆಗಿ
ಉಪಯುಕ್ತ ನ್ಯೂಸ್’ ಫೇಸ್‌ಬುಕ್ ಪುಟ ಲೈಕ್ ಮಾಡಿ
ಉಪಯುಕ್ತ ನ್ಯೂಸ್ ವಾಟ್ಸಪ್ ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ