ಎಸ್‌ಡಿಎಂ ಮಹಿಳಾ ಐಟಿಐಯಲ್ಲಿ 'ಸೈಬರ್ ಅಪರಾಧ ತಡೆ ಮಾಹಿತಿ' ಕಾರ್ಯಾಗಾರ

Upayuktha
0


ಉಜಿರೆ: ಇಲ್ಲಿನ ಎಸ್‌ಡಿಎಂ ಮಹಿಳಾ ಕೈಗಾರಿಕಾ ತರಬೇತಿ ಸಂಸ್ಥೆಯಲ್ಲಿ ಬೆಳ್ತಂಗಡಿ ರೋಟರಿ ಕ್ಲಬ್ ವತಿಯಿಂದ ‘ಸೈಬರ್ ಅಪರಾಧಗಳ ತಡೆಗಟ್ಟುವಿಕೆ ಕುರಿತು ಮಾಹಿತಿ ಕಾರ್ಯಾಗಾರ’ ಇಂದು (ಡಿ. 30) ನಡೆಯಿತು.


ಕಾಲೇಜಿನ ವಿದ್ಯಾರ್ಥಿನಿಯರು ಹಾಗೂ ಮಂಜುಶ್ರೀ ಪ್ರಿಂಟರ್ಸ್ ನೌಕರರಿಗಾಗಿ ಆಯೋಜಿಸಿದ್ದ ಕಾರ್ಯಕ್ರಮವನ್ನು ಮಂಗಳೂರಿನ ಸಿಇಎನ್ (ಸೈಬರ್ ಎಕನಾಮಿಕ್ಸ್ ಆ್ಯಂಡ್ ನಾರ್ಕೋಟಿಕ್ಸ್ ಕ್ರೈಮ್ಸ್) ಪೊಲೀಸ್ ಠಾಣಾ ಡಿ.ವೈ.ಎಸ್.ಪಿ. ಮಂಜುನಾಥ್ ಆರ್.ಜಿ. ಉದ್ಘಾಟಿಸಿದರು. 


ಬಳಿಕ ಅವರು ಮಾತನಾಡಿ, ಸೈಬರ್ ಅಪರಾಧಗಳಿಗೆ ಯುವ ಜನಾಂಗ ಬಲಿಯಾಗುತ್ತಿರುವ ಕುರಿತು ಕಳವಳ ವ್ಯಕ್ತ ಪಡಿಸಿದರು.


ಸೈಬರ್ ತೊಂದರೆಗೆ ಒಳಗಾದಾಗ ಧೃತಿಗೆಡದೆ, ಧೈರ್ಯದಿಂದ ಎದುರಿಸುವ ಸಾಮರ್ಥ್ಯ ಬೆಳೆಸಿಕೊಂಡು, ನಡೆದ ಅಪರಾಧದ ಕುರಿತ ಮಾಹಿತಿಯನ್ನು, ದಾಖಲೆಗಳನ್ನು ಜಿಲ್ಲಾ ಅಪರಾಧ ವಿಭಾಗಕ್ಕೆ ನೀಡಬೇಕು ಎಂದು ಅವರು ತಿಳಿಸಿದರು.


ಸಬ್ ಇನ್ಸ್‌ಪೆಕ್ಟರ್ ಮಂಜುನಾಥ್ ಡಿ. ಮಾತನಾಡಿ, ವಿವಿಧ ಸೈಬರ್ ಅಪರಾಧ ಪ್ರಕರಣಗಳ ಬಗ್ಗೆ ವಿವರವಾದ ಮಾಹಿತಿಗಳನ್ನು ವಿವರವಾಗಿ ತಿಳಿಸಿದರು ಹಾಗೂ ಸೈಬರ್ ವಂಚನೆಗೆ ಒಳಗಾದಾಗ (1930 ಅಥವಾ 112 ಗೆ ಕರೆ ಮಾಡಿದಾಗ 5 ನಿಮಿಷದ ಒಳಗೆ ಹತ್ತಿರದ ಪೋಲೀಸರ ಬರುವು ಕುರಿತು ಹಾಗೂ ಅಲ್ಲಿಯವರೆಗೆ) ಕೈಗೊಳ್ಳಬೇಕಾದ ಮುಂಜಾಗೃತಾ ಕ್ರಮ ಕುರಿತು ಮಾಹಿತಿ ನೀಡಿದರು.


ಕಾಲೇಜಿನ ಪ್ರಾಂಶುಪಾಲ ವಿ. ಪ್ರಕಾಶ್ ಕಾಮತ್, ರೋಟರಿ ಕ್ಲಬ್ ಕಾರ್ಯದರ್ಶಿ ಸಂದೇಶ್ ರಾವ್, ಮಂಜುಶ್ರೀ ಪ್ರಿಂಟರ್ಸ್ ವ್ಯವಸ್ಥಾಪಕ ಶೇಖರ್ ಟಿ. ಉಪಸ್ಥಿತರಿದ್ದರು. ಅಸಿಸ್ಟಂಟ್ ಮೇನೇಜರ್ ರವಿ ಪರಕ್ಕಜೆ ಕಾರ್ಯಕ್ರಮ ನಿರೂಪಿಸಿದರು.


ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್‌ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್‌ ಆಗಿ

ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಉಪಯುಕ್ತ ನ್ಯೂಸ್‌ ವಾಟ್ಸಪ್‌  ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ


web counter 

إرسال تعليق

0 تعليقات
إرسال تعليق (0)
Maruti Suzuki Festival of Colours
Maruti Suzuki Festival of Colours
To Top