ಮಂಗಳೂರು: ಯಕ್ಷ ರಂಗ ಸದಾ ಲಾಲಿತ್ಯ ಹೊಂದಿದ್ದು ಭಾರತೀಯ ಲಲಿತಕಲೆಗಳಲ್ಲಿ ಮೇರು ಸ್ಥಾನವನ್ನು ಪಡೆದಿದೆ. ಹಲವು ರಂಗ ಪ್ರಾಕಾರಗಳೂ ಇದರಲ್ಲಿ ಮಿಳಿತವಾಗಿದ್ದು, ಸರ್ವ ಜನಾಂಗಕ್ಕೂ ಒಪ್ಪಿತವಾದ ರಂಗ ಕಲೆ. ಗಡಿನಾಡ ಮೇಳವೊಂದು ಪಣಂಬೂರಿಗೆ ಬಂದು ಈ ಪಂಚಕವನ್ನು ನಡೆಸುತ್ತಿರುವುದು ಕಲೆಯನ್ನು ಕಾಪಾಡಿಕೊಳ್ಳುವಲ್ಲಿ ಉತ್ತಮ ಪ್ರಯತ್ನ ಎಂದು ಪಣಂಬೂರಿನ ನಂದನೇಶ್ವರ ದೇವಸ್ಥಾನದಲ್ಲಿ ಶ್ರೀ ಕೊಲ್ಲಂಗಾನ ಮೇಳದ ಯಕ್ಷ ಪಂಚಕದ ಆರಂಭದಂದು ಗೋವಿಂದದಾಸ ಕಾಲೇಜಿನ ಪ್ರಾಂಶುಪಾಲ ಪ್ರೊ. ಕೃಷ್ಣಮೂರ್ತಿ ಹೇಳಿದರು.
ವೇ.ಮೂ. ಸುಬ್ರಹ್ಮಣ್ಯ ಮಯ್ಯರು ದೀಪ ಬೆಳಗಿಸಿ ಉದ್ಘಾಟಿಸಿದರು. ಬಿಡುಗಡೆಗೊಂಡ ಅತ್ಯಲ್ಪ ಸಮಯದಲ್ಲಿ 60ಕ್ಕೂ ಮಿಕ್ಕಿದ ಪ್ರದರ್ಶನಗಳನ್ನು ಹೊಂದಿದ ತಾನು ನೀಡಿದ ಕಥೆ ಶೂರ್ಪನಖಾ ವಧಾ ಪ್ರಸಂಗ ಈ ಮೇಳದಲ್ಲಿ ಪ್ರದರ್ಶಿತವಾಗುತ್ತಿರುವುದು ಸಂತಸದ ವಿಷಯ ಎಂದು ನಿವೃತ್ತ ಯೋಧ ಹಾಗೂ ಕಲಾ ಸಂಘಟಕ ಪಿ. ಮಧುಕರ ಭಾಗ್ವತ್ ಹೇಳಿದರು.
ಹಿರಿಯ ಕಲಾವಿದ ಶ್ರೀಧರ ಐತಾಳ್, ಪಿ. ಅನಂತ ಐತಾಳ್, ವಿಷ್ಣುಮೂರ್ತಿ ಐಗಳ್ ಮುಖ್ಯ ಅತಿಥಿಗಳಾಗಿ ಭಾಗವಹಿಸಿದ್ದರು. ಮೇಳದ ವಿಶ್ವಸ್ಥ ಬ್ರಹ್ಮಶ್ರೀ ಗಣಾಧಿರಾಜ ತಂತ್ರಿಗಳು ಪ್ರಸ್ತಾವನೆಗೈದರು. ಕಲಾವಿದ ಸುಮನ್ ರಾಜ್ ನೀಲಂಗಳ ಪ್ರಾರ್ಥನೆ ಮಾಡಿದರು. ಯಕ್ಷಗುರು ವರ್ಕಾಡಿ ರವಿ ಅಲೆವೂರಾಯ ನಿರ್ವಹಿಸಿ ವಂದಿಸಿದರು.
ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್ ಆಗಿ
ಉಪಯುಕ್ತ ನ್ಯೂಸ್’ ಫೇಸ್‌ಬುಕ್ ಪುಟ ಲೈಕ್ ಮಾಡಿ
ಉಪಯುಕ್ತ ನ್ಯೂಸ್ ವಾಟ್ಸಪ್ ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ