ಮೇೂದಿಯವರಿಗೆ ಭ್ರಷ್ಟಾಚಾರ ತಡೆಯಲು ಯಾಕೆ ಸಾಧ್ಯವಾಗುತ್ತಿಲ್ಲ?

Upayuktha
0


ಮೇೂದಿಯಂತಹ ಒಬ್ಬ ಅತ್ಯಂತ ಪ್ರಾಮಾಣಿಕ ವ್ಯಕ್ತಿ ಪ್ರಧಾನಿ ಪಟ್ಟವನ್ನು ಅಲಂಕರಿಸಿರುತ್ತಾರೆ ಅನ್ನುವ ವಿಷಯ ಬಿಂಬಿಸುತ್ತಿರುವಾಗ ಭ್ರಷ್ಟಾಚಾರ ದಂತಹ ಪೆಡಂಭೂತವನ್ನು ಬುಡ ಸಮ್ಮೇತವಾಗಿ ಕಿತ್ತು ಹಾಕಲು ಅವರಿಗೆ ಯಾಕೆ ಸಾಧ್ಯವಾಗುತ್ತಿಲ್ಲ ಅನ್ನುವ ಪ್ರಶ್ನೆ ನಮ್ಮಂತವರನ್ನು ಸದಾ ಕಾಡುತ್ತಿರುವುದು ಸಹಜ. ಇದನ್ನು ಇವರು ಮಾಡದೇ ಇನ್ನಾರಿಂದಲೂ ಸಾಧ್ಯವಿಲ್ಲ ಅನ್ನುವುದು ಅಷ್ಟೇ ಸತ್ಯ. ಹಾಗಾದರೆ ಮೇೂದಿಯವರು ಈ ದಿಕ್ಕಿನಲ್ಲಿ ಯಾಕೆ ಯೇೂಚಿಸುತ್ತಿಲ್ಲ? ಆದುದರಿಂದ ಈ ನಿಟ್ಟಿನಲ್ಲಿ ಮೇೂದಿಯವರಿಗೆ ಜನಸಾಮಾನ್ಯರಾದ ನಾವು ಕೆಲವೊಂದು ಪ್ರಶ್ನೆಗಳನ್ನು ನೇರವಾಗಿ ಕೇಳಬೇಕಾದ ಅನಿವಾರ್ಯತೆಯ ಕಾಲ ಕೂಡಿ ಬಂದಿದೆ.


1. ಮೇೂದಿಯವರು ಯಾವತ್ತೂ ಕೂಡ ರಾಜಕೀಯ ಭ್ರಷ್ಟಾಚಾರವನ್ನು ಪಕ್ಷ ಮೀರಿ ಸಾವ೯ತ್ರಿಕವಾಗಿ ನೇರವಾಗಿ ಬೊಟ್ಟು ಮಾಡಿ ತೇೂರಿಸಿದ್ದು ತೀರ ಕಡಿಮೆ.


2. ನೀವು ಭ್ರಷ್ಟಾಚಾರದ ಕುರಿತಾಗಿ ನೇರ ಪ್ರಶ್ನೆ ಮಾಡದಿರುವುದಕ್ಕೂ ಒಂದು ಕಾರಣವಿರಬಹುದು; ತನ್ನ ಪಕ್ಷದೊಳಗೆ ಈ ಪೆಡಂಭೂತ ಕೂತಿರುವಾಗ ಬೇರೆಯವರ ಮನೆಯಲ್ಲಿ ಮಲಗಿರುವ ಪೆಡಂಭೂತದ ಬಗ್ಗೆ ಹೇಗೆ ಪ್ರಶ್ನಿಸಲಿ ಅನ್ನುವ ನೈತಿಕತೆ ಆತ್ಮಸಾಕ್ಷಿ ಪ್ರಜ್ಞೆ ಕಾಡುತ್ತಿರಬಹುದೇ?


3. ನಿಮಗೆ ಭ್ರಷ್ಟಾಚಾರ ಬುಡ ಸಮ್ಮೇತವಾಗಿ ಕಿತ್ತು ಹಾಕಬೇಕೆಂಬ ದೃಢ ಸಂಕಲ್ಪವಿದ್ದರೆ ಅದನ್ನು ಮೊದಲು ನಿಮ್ಮ ಪಕ್ಷದಿಂದಲೇ ಪ್ರಾರಂಭಿಸಿ. ಇದರಿಂದಾಗಿ ನಿಮ್ಮ ಮೇಲೆ ಜನಕ್ಕೆ ಇನ್ನಷ್ಟು ಪ್ರೀತಿ ನಂಬಿಗೆ ಹುಟ್ಟಿ ಬರಲು ಸಾಧ್ಯ. ಯಾವಾಲೂ ಅಷ್ಟೇ ಮೊದಲು ತಮ್ಮಮನೆಯನ್ನು ಶುದ್ಧಗೊಳಿಸಿ ಊರನ್ನು ಶುದ್ದಗೊಳಿಸಲು ಹೊರಡಬೇಕಂತೆ.


4. ಇ.ಡಿ./ಐ.ಟಿ/ಸಿಬಿಐ ಅಂತಹ ಬ್ರಹ್ಮಾಸ್ತ್ರಗಳನ್ನು ತಮ್ಮ ಪಕ್ಷದಲ್ಲಿ ಭ್ರಷ್ಟಾಚಾರದಲ್ಲಿ ತೊಡಗಿರುವ ಕೆಲವು ಕರಿಹೆಗ್ಗಣಗಳ ಮೇಲೆ ಮೊದಲು ಪ್ರಯೇೂಗಿಸಿ ನೇೂಡಿ. ವಿಪಕ್ಷದ ಕರಿ ಹೆಗ್ಗಣಗಳು ತಾವಾಗಿಯೇ ಬಿಲ ಸೇರಿಕೊಳ್ಳುತ್ತಾವೆ. ಮಾತ್ರವಲ್ಲ ನಿಮ್ಮ ವಿರುದ್ಧ ಚಕಾರವೆತ್ತುವರೇ ಇಲ್ಲ. ಇದರಿಂದಾಗಿ ನಿಮ್ಮ ವ್ಯಕ್ತಿತ್ವದ ನಡೆ ಸವ೯ರಿಂದಲೂ ಪೂಜನೀಯಗೊಳ್ಳುವುದರ ಜೊತೆಗೆ ಮಹಾತ್ಮನೆನ್ನಿಸಿಕೊಳ್ಳುತ್ತೀರಿ.


5. ಆದರೆ ಒಂದು ಅಪಾಯವಂತೂ ನೀವು ಏದುರಿಸಲೇ ಬೇಕಾಗಬಹುದು. ನಿಮ್ಮನ್ನೆ ಅಧಿಕಾರದಿಂದ ಕಿತ್ತು ಬಿಸಾಡುವ ಸಾದ್ಯತೆಯೂ ಇರ ಬಹುದು. ಇದನ್ನು ಎದುರಿಸಲು ಸಿದ್ಧರಾಗಿರ ಬೇಕು ಅಷ್ಟೇ.


6. ಇದನ್ನು ನೀವು ಮಾಡದೇ ಹೇೂದರೆ ಭ್ರಷ್ಟಾಚಾರಿಗಳ ಕೃಪೆಯಲ್ಲಿ ನೀವು ಅಧಿಕಾರ ಅನುಭವಿಸುತ್ತೀರಿ ಅನ್ನುವ ಕಪ್ಪು ಚುಕ್ಕೆ ನಿಮ್ಮ ಬದುಕಿನ ಚರಿತ್ರೆಯಲ್ಲಿ ದಾಖಲಾಗಬಹುದು ಅನ್ನುವುದು ನಮ್ಮೆಲ್ಲರ ನೇೂವಿನ ಮಾತು. ಇತ್ತೀಚಿನ ಮಹಾರಾಷ್ಟ್ರದ ಉದಾಹರಣೆ ತೆಗೆದುಕೊಂಡಾಗ ಕುಾಡಾ ಅಜಿತ್ ಪವರ್ ನಂತಹಮಹಾ ಭ್ರಷ್ಟಾರು ಕಣ್ಣು ಮುಂದೆ ಬಂದು ನಿಲ್ಲುತ್ತಾರೆ. ಇಂತವರ ಸಹಕಾರದಿಂದಲೇ ಸರ್ಕಾರ ರಚನೆ ಮಾಡುವ ಮತ್ತು ಬೀಳಿಸುವ ತಂತ್ರಗಾರಿಕೆ ಮಾಡಿದರೆ ಭ್ರಷ್ಟಾಚಾರದ ಕುರಿತಾಗಿ ಮಾತನಾಡುವ ಯಾವ ಆರ್ಹತೆ ನಿಮಗೆ ಬರಲು ಸಾಧ್ಯವೇ ಇಲ್ಲ.


7. ಈ ನಿಟ್ಟಿನಲ್ಲಿ ನೀವು ಮೊದಲು ಮಾಡ ಬೇಕಾದ ಕೆಲಸವೆಂದರೆ ಜನಪ್ರತಿನಿಧಿಗಳನ್ನು ಕಾರ್ಯಾಂಗದಿಂದ ದೂರ ಕೂರಿಸುವುದು (American model of saparation of power). ಇದು ಹೇಗೆ ಕೇಳಿದರೆ  ನಮ್ಮೆಲ್ಲ ಶಾಸಕರು /ಸಂಸದರನ್ನು ಶಾಸಕಾಂಗದ ಕೆಲಸಗಳಿಗೆ ಸೀಮಿತ ಪಡಿಸ ಬೇಕೇ ಹೊರತು ಅವರನ್ನು ರಸ್ತೆ ಸೇತುವೆ ಕಟ್ಟಡ ಕಟ್ಟುವ  ಕೆಲಸಗಳಿಗೆ ಕಳುಹಿಸಬಾರದು. ಈಗ ಪರಿಸ್ಥಿತಿ ಎಲ್ಲಿಗೆ ಬಂದಿದೆ ಅಂದರೆ ನಮ್ಮೆಲ್ಲ ಶಾಸಕರು/ಸಂಸದೀಯ ಪ್ರತಿನಿಧಿಗಳಿಗೆ ತಾವು ಶಾಸನ ಸಭೆಯಲ್ಲಿ  ಕೂತು ಶಾಸನಮಾಡಲು ಆಯ್ಕೆಯಾದವರು ಅನ್ನುವುದನ್ನೆ ಮರೆತು ಬಿಟ್ಟಿದ್ದಾರೆ. ಈ ಕಟ್ಟಡ ಕಟ್ಟಿಗೆ ರಸ್ತೆ ರೂಪಿಸಲು ಪ್ರತ್ಯೇಕ ವಾದ ಕಾರ್ಯಾಂಗವಿದೆ. ಇದನ್ನು ಅವರು ನೇೂಡಿ ಕೊಳ್ಳುತ್ತಾರೆ. ಅದು ಸರಿಯಾಗಿ ಜಾರಿಯಾಗದಿದ್ದರೆ ಸಂಬಂಧ ಪಟ್ಟ ಸಚಿವರನ್ನು ಸದನದಲ್ಲಿ ಪ್ರಶ್ನೆ ಮಾಡಲು ಜನಪ್ರತಿನಿಧಿಗಳಿಗೆ ಅವಕಾಶವಿದೆ. ಇದನ್ನು ನಮ್ಮ ಜನಪ್ರತಿನಿಧಿಗಳು ಅನ್ನಿಸಿಕೊಂಡವರು ಮಾಡಿದರೆ ಸಾಕು.


8. ಇಷ್ಟನ್ನು ನೀವು ಮೊದಲು ಮಾಡಿ ಭ್ರಷ್ಟಾಚಾರ ತಾನಾಗಿಯೇ ನಿಮೂ೯ಲನವಾಗುತ್ತದೆ. ಆಗ ನಮ್ಮ ಯಾರು ರಾಜಕಾರಣಿಗಳು ಚುನಾವಣೆಗೆ ಕೇೂಟಿ ಕೇೂಟಿ ಖಚ೯ಮಾಡಿ ಸ್ಪಧಿ೯ಸುವ ಪ್ರಶ್ನೆಯೇ ಬರುವುದಿಲ್ಲ. ಇದು ಭ್ರಷ್ಟಾಚಾರಕ್ಕೆ ಬಿಡುವ ಮೊದಲ ಬ್ರಹ್ಮಾಸ್ತ್ರ.


9. ಈ ಕಠಿಣವಾದ ಅಸ್ತ್ರ ನಿಮ್ಮಿಂದಲೂ ಬಿಡಲೂ ಸಾಧ್ಯವಿಲ್ಲ ಅನ್ನುವುದು ನಮಗೂ ಗೊತ್ತಿದೆ. ಅಂದರೆ "ರಾಜಕೀಯ ಅಂದರೆ ಭ್ರಷ್ಟಾಚಾರ; ಭ್ರಷ್ಟಾಚಾರವೆಂದರೆ ರಾಜಕೀಯ" ಒಂದೇ ನಾಣ್ಯದ ಎರಡು ಮುಖಗಳು ಅನ್ನುವ ಮಟ್ಟಿಗೆ ರಕ್ತಗತವಾಗಿ ನಾವು ಒಪ್ಪಿಕೊಂಡು ಬಿಟ್ಟಿದ್ದೇವೆ. ಬಹು ಹಿಂದೆ ಮಾಜಿ ಪ್ರಧಾನಿ ಇಂದಿರಾ ಗಾಂಧಿಯವರಿಗೆ ಪತ್ರಕರ್ತರು ದೇಶದಲ್ಲಿ ಭ್ರಷ್ಟಾಚಾರ ತುಂಬಿದೆ ಅಂದಾಗ ಅವರು ಹೇಳಿದ ಒಂದೇ ಉತ್ತರ "corruption is a universal phenomena" ಇದರ ಅರ್ಥ ಭ್ರಷ್ಟಾಚಾರ ಊರಿಗೆ ಬಂದ ಕಾಯಿಲೆ. ಹಾಗಾಗಿ ಒಪ್ಪಿಗೊಂಡು ಮಲಗಿ ಬಿಡೇೂಣ ಅನ್ನುವುದೇ ಪರಿಹಾರ.  ಭ್ರಷ್ಟಾಚಾರ ನಿಮೂ೯ಲನ ಅನ್ನುವ ಮಾತು ಇಂತಹ  ರಾಜಕೀಯ ಸಿದ್ಧಾಂತಗಳನ್ನು ಮಾತುಗಳನ್ನು ತರಗತಿಯಲ್ಲಿ ಹೇಳಬೇಕಾದ ಕಲ್ಪನಾ ಯೇೂಗ್ಯವಾದ ಮಾತುಗಳು ಅಷ್ಟೇ ಅಲ್ವೇ?


-ಪ್ರೊ. ಕೊಕ್ಕರ್ಣೆ ಸುರೇಂದ್ರ ನಾಥ ಶೆಟ್ಟಿ.


ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್‌ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್‌ ಆಗಿ

ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಉಪಯುಕ್ತ ನ್ಯೂಸ್‌ ವಾಟ್ಸಪ್‌  ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ


web counter 

Post a Comment

0 Comments
Post a Comment (0)
Mandovi Motors Presents MONSOON BONANZA
Mandovi Motors Presents MONSOON BONANZA
To Top