ಜಿಲ್ಲಾ ಮಟ್ಟದಲ್ಲಿ ಮಿಂಚಿದ 'ವಿನಾಶ ಗೃಹಂ' ಸಂಸ್ಕೃತ ನಾಟಕ

Chandrashekhara Kulamarva
0


ಕುಂಬಳೆ: ಕಾಸರಗೋಡು ಕಂದಾಯ ಜಿಲ್ಲಾ ಶಾಲಾ ಕಲೋತ್ಸವದ ವೇದಿಕೆಯಲ್ಲಿ ಧರ್ಮತ್ತಡ್ಕದ ಶ್ರೀ ದುರ್ಗಾ ಪರಮೇಶ್ವರಿ ಪ್ರೌಢ ಶಾಲೆಯ ವಿದ್ಯಾರ್ಥಿಗಳು ಅಭಿನಯಿಸಿದ ಸಂಸ್ಕೃತ ನಾಟಕವಾದ 'ವಿನಾಶ ಗೃಹಂ' ದ್ವಿತೀಯ ಸ್ಥಾನದಿಂದಿಗೆ ಎ ಗ್ರೇಡ್ ಗಳಿಸಿತು.


ಮಕ್ಕಳ ರಂಗ ನಿರ್ದೇಶಕ ಸದಾಶಿವ ಬಾಲಮಿತ್ರ ಅವರು ನಾಟಕವನ್ನು ರಚಿಸಿ ನಿರ್ದೇಶಿಸಿ ಶಿವಪ್ರಸಾದ್ ಚೆರುಗೋಳಿ ಸಹನಿರ್ದೇಶನ ಮಾಡಿದ್ದಾರೆ. ಮಾನವನ ಸ್ವಾರ್ಥ ಮನೋಭಾವದಿಂದ ಪ್ರಕೃತಿಯಲ್ಲಿ ಉಂಟಾಗುವ ಏರುಪೇರಿನ ದುರಂತಗಳಲ್ಲಿ ಬಲಿಯಾಗುವ ಮುಗ್ಧ ಜೀವಿಗಳ ಚಿತ್ರಣವನ್ನು ಈ ನಾಟಕದುದ್ದಕ್ಕೂ ಪ್ರಾಣಿ ಪಕ್ಷಿಗಳ ಸಂಕೇತದ ಮೂಲಕ ನೀಡಲಾಗಿದೆ.


ಪಾತ್ರವರ್ಗದಲ್ಲಿ ವಿದ್ಯಾರ್ಥಿಗಳಾದ ನೂತನ್ ಎಡಕ್ಕಾನ, ಚೇತನ್ ಎಡಕ್ಕಾನ, ಅನನ್ಯ ಭಟ್ ಎಸ್, ಸ್ತುತಿ ಎಂ, ಸಮನ್ವಿತ ಎನ್, ಪವನ್ ರಾಮ್ ಎನ್, ಅವಿನಾಶ್ ಪಿ, ಭವಿಶ್ ಶೆಟ್ಟಿ, ಸ್ಕಂದ ಪ್ರಸಾದ್ ಅಭಿನಯಿಸಿದರು.


ರಂಗಸಜ್ಜಿಕೆಯಲ್ಲಿ ಅಧ್ಯಾಪಕರಾದ ವಸಂತ ಮೂಡಂಬೈಲ್, ಪ್ರಕಾಶ್ ಕುಂಬಳೆ, ಎ.ಪಿ ರಾವ್, ಶಿವನಾರಾಯಣ ಭಟ್, ರಾಜಕುಮಾರ್ ಕೆ, ಪ್ರಶಾಂತ ಹೊಳ್ಳ ಎನ್, ಪ್ರದೀಪ್ ಕೆ, ಅಭಿಲಾಶ್ ಪೆರ್ಲ, ಹರ್ಷಿತ್ ಐಲ್, ಉಷಾಪದ್ಮ ಟೀಚರ್ ಸಹಕರಿಸಿದರು.


ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್‌ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್‌ ಆಗಿ

ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಉಪಯುಕ್ತ ನ್ಯೂಸ್‌ ವಾಟ್ಸಪ್‌  ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ


web counter 

Post a Comment

0 Comments
Post a Comment (0)
To Top