ಪುತ್ತೂರು: ಬಿ. ವಿ ಸೂರ್ಯನಾರಾಯಣ ಅವರ ಕವನ ಸಂಕಲನ 'ಪದ ಪಲ್ಲವಿ' ಶನಿವಾರ ಸಂಜೆ ಸುಧಾನ ವಿದ್ಯಾ ಸಂಸ್ಥೆಯ ಅಡ್ವರ್ಡ್ ಸಭಾಂಗಣದಲ್ಲಿ ಡಾ.ನರೇಂದ್ರ ರೈ ದೇರ್ಲ ಅವರು ಲೋಕಾರ್ಪಣೆ ಮಾಡಿದರು.
ಬಿ. ವಿ ಸೂರ್ಯನಾರಾಯಣ ಅವರು ಕಳೆದ ಮೂರು ದಶಕಗಳಿಂದ ಶಿಕ್ಷಣ ಕ್ಷೇತ್ರದಲ್ಲಿ ಅಪಾರ ಸೇವೆಯನ್ನು ಸಲ್ಲಿಸಿ, ಸಾವಿರಾರು ವಿದ್ಯಾರ್ಥಿಗಳ ಜೀವನ ರೂಪಿಸುವಲ್ಲಿ ಪ್ರಮುಖ ಪಾತ್ರ ವಹಿಸಿ, ಇದೀಗ ನಿವೃತ್ತಿಗೊಂಡು ಸಮಾಜಮುಖಿಯಾಗಿ ತನ್ನನ್ನ ತಾನು ತೊಡಗಿಸಿಕೊಂಡು ಸಾಹಿತ್ಯ ಕ್ಷೇತ್ರದಲ್ಲೂ ಅಪಾರ ಖ್ಯಾತಿಯನ್ನು ಪಡೆದ ಶಿಕ್ಷಣ ತಜ್ಞ, ಉತ್ತಮ ವಾಗ್ಮಿಗಳು.
ಡಾ ರಾಜೇಶ್ ಬೆಜ್ಜಂಗಳ ಕೃತಿಯ ಕುರಿತು ಮಾತನಾಡಿದರು. ರೇ. ವಿಜಯ ಹಾರ್ವಿನ್ ಅವರು ಅಧ್ಯಕ್ಷತೆ ವಹಿಸಿದ್ದರು. ಶ್ರೀಮತಿ ಸುನಿತಾ ಅವರು ಕಾರ್ಯಕ್ರಮದ ನಿರೂಪಣೆಗೈದರು. ವಿ.ಬಿ ಸೂರ್ಯನಾರಾಯಣ ಅವರ ಕೃತಿಯಿಂದ ಆಯ್ದ ಕೆಲವು ಹಾಡುಗಳನ್ನು ಡಾ. ಪವಿತ್ರ ರೂಪೇಶ್, ಶ್ರೀಮತಿ ಅಪರ್ಣ ನಿಟಿಲಾಪುರ, ಶ್ರೀಮತಿ ರಾಮ ಹೆಬ್ಬಾರ್, ಪ್ರೊ. ದತ್ತಾತ್ರೇಯ ರಾವ್, ಶ್ರೀಮತಿ ಚೈತ್ರಿಕ ಕೋಡಿಬೈಲು ಇವರು ಅತ್ಯಂತ ಸುಶ್ರಾವ್ಯವಾಗಿ ಹಾಡಿದರು.
ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್ ಆಗಿ
ಉಪಯುಕ್ತ ನ್ಯೂಸ್’ ಫೇಸ್‌ಬುಕ್ ಪುಟ ಲೈಕ್ ಮಾಡಿ
ಉಪಯುಕ್ತ ನ್ಯೂಸ್ ವಾಟ್ಸಪ್ ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ