ಶಿರಸಿ: ಉತ್ತರ ಕನ್ನಡ ಜಿಲ್ಲಾ 24 ನೇ ಕನ್ನಡ ಸಾಹಿತ್ಯ ಸಮ್ಮೇಳನ ಸಿರ್ಸಿ ರಂಗಧಾಮ ನೆಮ್ಮದಿ ಆವರಣದಲ್ಲಿ ಡಿ. 3 ಮತ್ತು 4ರಂದು ಅತ್ಯಂತ ಸಂಭ್ರಮ, ಸಡಗರದಿಂದ ಅದ್ದೂರಿಯಾಗಿ ನಡೆಯಿತು.
ಈ ಸಮ್ಮೇಳನದಲ್ಲಿ ಎರಡನೇ ಅವಧಿಯಲ್ಲಿ ಜಿಲ್ಲೆಯ 26 ಕವಿಗಳು ಕವಿಗೋಷ್ಠಿಯಲ್ಲಿ ಭಾಗವಹಿಸಿದ್ದರು.
ಮಿರ್ಜಾನದ ಜನತಾ ವಿದ್ಯಾಲಯದ ಶಿಕ್ಷಕ ರಾಜು ರಾಮ ನಾಯ್ಕ ಇವರು ಕನ್ನಡವೇ ನಮ್ಮಮ್ಮ ಶೀರ್ಷಿಕೆಯ ಕವನ ವಾಚನ ಮಾಡಿ ಎಲ್ಲರ ಮೆಚ್ಚುಗೆಗೆ ಪಾತ್ರರಾದರು.
ಕವನದಲ್ಲಿ ನಮ್ಮ ನಾಡು, ಭಾಷೆ, ಜಲ ನೆಲ, ಶಿಲ್ಪ ಕಲೆ, ರಂಜನೆ, ಹಳಗನ್ನಡ, ನಡುಗನ್ನಡ, ನವ್ಯ ಕನ್ನಡ ಮುಂತಾದ ಸಾಹಿತ್ಯ ಅಭಿರುಚಿಯನ್ನು ಬಿಂಬಿಸಿದರು.
ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್ ಆಗಿ
ಉಪಯುಕ್ತ ನ್ಯೂಸ್’ ಫೇಸ್‌ಬುಕ್ ಪುಟ ಲೈಕ್ ಮಾಡಿ
ಉಪಯುಕ್ತ ನ್ಯೂಸ್ ವಾಟ್ಸಪ್ ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ