29ನೇ ವರ್ಷದ ಉಂಡೆಮನೆ ಪ್ರಶಸ್ತಿ ಅತ್ತಾಜೆ ಕೇಶವ ಭಟ್ ದಂಪತಿಗೆ ಪ್ರದಾನ

Chandrashekhara Kulamarva
0


ಉಜಿರೆ: 29 ನೆಯ ವರ್ಷದ ಉಂಡೆಮನೆ ಪ್ರಶಸ್ತಿಯನ್ನು ಪರಮಪೂಜ್ಯ ಶ್ರೀ ರಾಘವೇಶ್ವರ ಭಾರತೀ ಮಹಾಸ್ವಾಮಿಗಳುಅ ರಕ್ತದಾನಿ ಕುಟುಂಬ ಅತ್ತಾಜೆ ಕೇಶವ ಭಟ್ ಮತ್ತು ಅವರ ಮನೆಮಂದಿಗೆ ಪ್ರದಾನ ಮಾಡಿ ಹರಸಿದರು. ಕೇಶವ ಭಟ್ ದಂಪತಿ,ಅಮ್ಮ  ಪದ್ಮಾವತಿ ಅಮ್ಮ, ಸೋದರ ಶ್ಯಾಮ ಭಟ್ ದಂಪತಿ ಮತ್ತು ಮಕ್ಕಳು ಪ್ರಶಸ್ತಿಯನ್ನು ಸ್ವೀಕರಿಸಿದರು. ಉಂಡೆಮನೆ ಶಂಭು ಭಟ್ಟರ ಸವಿನೆನಪಿನ ಶಿಕ್ಷಣ ಪ್ರೋತ್ಸಾಹ ಯೋಜನೆಯ ಸಂಚಾಲಕ ಯು.ಎಸ್. ವಿಶ್ವೇಶ್ವರ ಭಟ್, ಕರ್ತ ಯು. ಶಂಭು ಶರ್ಮಾ ಮತ್ತು ಹವ್ಯಕ ಮಹಾಮಂಡಲದ ಉಜಿರೆ ವಲಯದ ವಿದ್ಯಾ ಕುಮಾರ್ ಉಪಸ್ಥಿತರಿದ್ದರು. ಪ್ರಶಸ್ತಿಯು ₹8000 ನಗದು, ಪ್ರಶಸ್ತಿಪತ್ರ, ಶಾಲು-ಸ್ಮರಣಿಕೆಗಳನ್ನು ಒಳಗೊಂಡಿತ್ತು. ಕಾರ್ಯಕ್ರಮವನ್ನು ಸುಧನ್ವ ಶಾಸ್ತ್ರಿ ಮತ್ತು ಲೋಹಿತ್ ಸಂಯೋಜಿಸಿದ್ದರು.



  ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್‌ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್‌ ಆಗಿ

ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಉಪಯುಕ್ತ ನ್ಯೂಸ್‌ ವಾಟ್ಸಪ್‌  ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ


web counter  

إرسال تعليق

0 تعليقات
إرسال تعليق (0)
To Top