ಎಸ್‍ಡಿಎಂ ಕಾಲೇಜು: ಸಸ್ಯಶಾಸ್ತ್ರ ವಿಭಾಗದಿಂದ ನೇಜಿ ನಾಟಿ ಕಾರ್ಯಕ್ರಮ

Chandrashekhara Kulamarva
0


ಉಜಿರೆ: ಉಜಿರೆಯ ಎಸ್‍ಡಿಎಂ ಕಾಲೇಜಿನ ಸಸ್ಯಶಾಸ್ತ್ರ ವಿಭಾಗದ ಇಕೋ ಕ್ಲಬ್ ವತಿಯಿಂದ ದೊಂಪದ ಪಲ್ಕೆಯಲ್ಲಿ ಡಿಸೆಂಬರ್ 12ರಂದು ನೇಜಿ ನಾಟಿ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿತ್ತು.  


ದೊಂಪದ ಪಲ್ಕಿಯ ಡೀಕಯ್ಯ ಪೂಜಾರಿ ಅವರ ಗದ್ದೆಯಲ್ಲಿ ಈ ಕಾರ್ಯಕ್ರಮವು ನಡೆಯಿತು. ಅವರು  ಮಕ್ಕಳಿಗೆ ನೇಜಿ ನಡುವ ವಿಧಾನ, ಮಾಹಿತಿಗಳನ್ನು ನೀಡಿದರು.  ದ್ವಿತೀಯ ಮತ್ತು ತೃತೀಯ ಬಿಎಸ್ಸಿ ತರಗತಿಯ 23 ವಿದ್ಯಾರ್ಥಿಗಳು ನೇಜಿ ನಾಟಿ ಮಾಡಿದರು.  ವೇಗವಾಗಿ ಓಡುತ್ತಿರುವ ಜಗತ್ತಿನಲ್ಲಿ ಪರಿಸರಕ್ಕೆ ಹತ್ತಿರವಾಗುವಂತಹ ಇಂತಹ ಕಾರ್ಯಕ್ರಮಗಳು ತಮ್ಮ ವಿಕಸನಕ್ಕೆ ಬೇಕೇ ಬೇಕು ಎಂದು ವಿದ್ಯಾರ್ಥಿಗಳುತಮ್ಮ ಆಶಯವನ್ನು ವ್ಯಕ್ತಪಡಿಸಿದರು.


ಸಾಂಪ್ರದಾಯಿಕವಾಗಿ ನೇಜಿ ನಾಟಿ ಪ್ರಕ್ರಿಯೆಗಳ ಬಗ್ಗೆ ವಿದ್ಯಾರ್ಥಿಗಳಿಗೆ ಮಾಹಿತಿ ನೀಡುವ ಉದ್ದೇಶದಿಂದ ಕಾರ್ಯಕ್ರಮ ಈ ಹಮ್ಮಿಕೊಳ್ಳಲಾಗಿತ್ತು.  ವಿಭಾಗದ ಪ್ರಾಧ್ಯಾಪಕಿ ಶಕುಂತಲರವರು ಕಾರ್ಯಕ್ರಮ ಸಂಯೋಜಿಸಿದರು. ವಿಭಾಗದ ಪ್ರಾಧ್ಯಾಪಕ ಅಭಿಲಾಶ್ ಕೆ.ಎಸ್,  ಹಾಗೂ ರಸಾಯನಶಾಸ್ತ್ರ ವಿಭಾಗದ ಲ್ಯಾಬ್ ಅಸಿಸ್ಟೆಂಟ್  ಪರಮೇಶ್ವರ್ ಅವರು ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದರು. ಪ್ರಾಂಶುಪಾಲರಾದ ಡಾ. ಬಿ.ಎ. ಕುಮಾರ ಹೆಗ್ಡೆ ಶುಭ ಹಾರೈಸಿದರು.



Post a Comment

0 Comments
Post a Comment (0)
To Top