ಸಾಧಕರ ಸಾಧನೆ ವಿದ್ಯಾರ್ಥಿಗಳಿಗೆ ಸ್ಫೂರ್ತಿಯಾಗಲಿ: ಪಿ.ಜಿ ಸತ್ಯನಾರಾಯಣ ಪ್ರಸಾದ್

Upayuktha
0





ಪುತ್ತೂರು:  ಚದುರಂಗದಲ್ಲಿ ಅಂತರಾಷ್ಟ್ರೀಯ ಮಟ್ಟದಲ್ಲಿ ಹಲವಾರು ಮಂದಿ ಸಾಧನೆಯನ್ನು ಮೆರೆದಿದ್ದಾರೆ. ಇದಕ್ಕೆ ಡಿ. ಗುಕೇಶ್ ಅವರು ಜಲ್ವಂತ ಸಾಕ್ಷಿಯಾಗಿದ್ದಾರೆ. ಸಾಧಕರನ್ನು ಆದರ್ಶವಾಗಿಟ್ಟುಕೊಂಡು ವಿದ್ಯಾರ್ಥಿಗಳು ಚದುರಂಗಾಟದಲ್ಲಿ ಶೌರ್ಯವನ್ನು ಮೆರೆಯಬೇಕು ಎಂದು ಸುಳ್ಯದ ಕಲ್ಮಡ್ಕದ ಬಿಎಫ್‌ಸಿಎ ನಿರ್ದೇಶಕ ಪಿ. ಜಿ. ಸತ್ಯನಾರಾಯಣ ಪ್ರಸಾದ್ ಹೇಳಿದರು. 



ಅವರು ಪುತ್ತೂರಿನ ವಿವೇಕಾನಂದ  ಕಲಾ, ವಿಜ್ಞಾನ ಮತ್ತು ವಾಣಿಜ್ಯ (ಸ್ವಾಯತ್ತ) ಕಾಲೇಜಿನ ದೈಹಿಕ ಶಿಕ್ಷಣ ಮತ್ತು ಐಕ್ಯುಎಸಿ ಘಟಕ ಹಾಗೂ ಸುಳ್ಯದ ಕಲ್ಮಡ್ಕದ ಬಾಬಿ ಫಿಶರ್ಸ್ ಚೆಸ್ ಅಸೋಸಿಯೇಶನ್ ನ ಆಶ್ರಯದಲ್ಲಿ ಜಿಲ್ಲಾ ಮಟ್ಟದ ವಿವೇಕಾನಂದ ಜ್ಯೂನಿಯರ್ ಚೆಸ್ ಪಂದ್ಯಾಟದ ಸಮಾರೋಪ ಸಮಾರಂಭದಲ್ಲಿ ಮಾತನಾಡಿದರು. 



ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಕಾಲೇಜಿನ ಆಡಳಿತ ಮಂಡಳಿ ಸಂಚಾಲಕ ಮುರಳಿಕೃಷ್ಣ ಕೆ. ಎನ್ ಮಾತನಾಡಿ,  ವಿದ್ಯಾರ್ಥಿಗಳು ಪುಸ್ತಕಕ್ಕೆ ಮಾತ್ರ ಸೀಮಿತರಾಗದೆ, ಕ್ರೀಡೆಯಲ್ಲೂ ತಮ್ಮನ್ನು ತಾವು ತೊಡಗಿಸಿಕೊಳ್ಳಬೇಕು. ಆಗ ಮಾತ್ರ ಮಕ್ಕಳು ಸರ್ವಾಂಗೀಣ ಬೆಳೆಯಲು ಸಾಧ್ಯ. ಚದುರಂಗ ಕ್ಷೇತ್ರಕ್ಕೆ ಕೊಡುಗೆಯನ್ನು ಕೊಟ್ಟವರನ್ನು ಅವಲೋಕನ ಮಾಡಬೇಕು. ಅಂತಹ ಸಾಧಕರ ಮಾರ್ಗವನ್ನು ಇಂದಿನ ವಿದ್ಯಾರ್ಥಿಗಳು ಪ್ರೇರಣೆಯಾಗಿ ಪಡೆದುಕೊಳ್ಳಬೇಕು ಎಂದರು.



ಚೆಸ್ ಪಂದ್ಯಾಟವು ಹಲವು ವಿಭಾಗಗಳಲ್ಲಿ ನಡೆದಿದ್ದು, ಕಿರಿಯ ಪ್ರಾಥಮಿಕ ಶಾಲಾ ವಿಭಾಗದಲ್ಲಿ ವಿವೇಕಾನಂದ ಇಂಗ್ಲಿಷ್ ಮಾಧ್ಯಮದ  ಸಾನಿಧ್ಯ ಎಸ್ ರಾವ್ , ಹಿರಿಯ ಪ್ರಾಥಮಿಕ ಶಾಲಾ ವಿಭಾಗದಲ್ಲಿ ಸುಬ್ರಮಣ್ಯದ ಕುಮಾರಸ್ವಾಮಿ ಸ್ಕೂಲ್ ನ  ಅಭಿನವ್. ಪಿ ,  ಎಸ್ ಡಿ ಎಂ ಪಿಯುಸಿ ಕಾಲೇಜಿನ ಶ್ರೇಯಸ್ ಎಂ.ಎಸ್ ಪ್ರೌಢ ಮತ್ತು ಪದವಿ ಪೂರ್ವ ವಿಭಾಗದಲ್ಲಿ ವಿಜೇತರಾದರು. ವಿಜೇತ ವಿದ್ಯಾರ್ಥಿಗಳನ್ನು ಅಭಿನಂದಿಸಲಾಯಿತು.



ಕಾರ್ಯಕ್ರಮದಲ್ಲಿ ಬಾಬಿ ಫಿಶರ್ಸ್ ಚೆಸ್ ಅಸೋಸಿಯೇಶನ್ ನ ಹಿರಿಯ ಸದಸ್ಯ, ಚದುರಂಗ ಆಟಗಾರ ಮೋಹನ್ ಕುಮಾರ್ ಕಲ್ಮಡ್ಕ ಅವರನ್ನು ಸನ್ಮಾಯಿಸಲಾಯಿತು. 


ಕಾರ್ಯಕ್ರಮದಲ್ಲಿ ಬಿ. ಎಫ್. ಸಿ ಯ ದೈಹಿಕ ಶಿಕ್ಷಣ ನಿರ್ದೇಶಕ ಯತೀಶ್ ಸ್ವಾಗತಿಸಿ, ಕಾಲೇಜಿನ ದೈಹಿಕ ಶಿಕ್ಷಣ ನಿರ್ದೇಶಕ ರವಿಶಂಕರ್ ವಿ. ಎಸ್.  ವಂದಿಸಿದರು. ಕಾಲೇಜಿನ ಪತ್ರಿಕೋದ್ಯಮ ವಿಭಾಗದ ಉಪನ್ಯಾಸಕಿ ಹವ್ಯಾ ಕಾರ್ಯಕ್ರಮವನ್ನು ನಿರೂಪಿಸಿದರು.



ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್‌ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್‌ ಆಗಿ

ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಉಪಯುಕ್ತ ನ್ಯೂಸ್‌ ವಾಟ್ಸಪ್‌  ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ


web counter 



Post a Comment

0 Comments
Post a Comment (0)
Mandovi Motors Presents MONSOON BONANZA
Mandovi Motors Presents MONSOON BONANZA
To Top