ಉಜಿರೆ ಎಸ್.ಡಿ.ಎಂ. ಕಾಲೇಜು ಎನ್ನೆಸ್ಸೆಸ್ ವಾರ್ಷಿಕ ವಿಶೇಷ ಶಿಬಿರ

Upayuktha
0

  ಶೈಕ್ಷಣಿಕ ಕಾರ್ಯಕ್ರಮ ಉದ್ಘಾಟನೆ 



 

ಉಜಿರೆ: ಬಂಗಾಡಿಯ ಇಂದಬೆಟ್ಟು (ಕಲ್ಲಾಜೆ) ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ನಡೆಯುತ್ತಿರುವ ಉಜಿರೆ ಶ್ರೀ ಧ. ಮಂ. ಕಾಲೇಜಿನ ಎನ್ನೆಸ್ಸೆಸ್ ಘಟಕಗಳ ಒಂದು ವಾರದ ವಾರ್ಷಿಕ ವಿಶೇಷ ಶಿಬಿರದಲ್ಲಿ ಎರಡನೇ ದಿನ (ಡಿ. 6) ಶೈಕ್ಷಣಿಕ ಕಾರ್ಯಕ್ರಮದ ಉದ್ಘಾಟನೆಯನ್ನು ಶಾಲೆಯ ನಿವೃತ್ತ ಮುಖ್ಯೋಪಾಧ್ಯಾಯಿನಿ ಜ್ಯೋತಿ ಎನ್. ಕೆ. ನೆರವೇರಿಸಿದರು.

ಬಳಿಕ ಮಾತನಾಡಿದ ಅವರು, ಎನ್ನೆಸ್ಸೆಸ್ ಶಿಬಿರದಿಂದ ಶಾಲೆಗೆ ಪ್ರಯೋಜನಕಾರಿ ಕೆಲಸಗಳು ಮೂಡಿಬರಲಿ ಎಂದು ಆಶಿಸಿದರು.“ನಾನು ಮುಖ್ಯೋಪಾಧ್ಯಾಯಿನಿ ಯಾಗಿ ಸೇವೆ ಸಲ್ಲಿಸಿದ ಶಾಲೆಯಲ್ಲಿ ಇಂದು ನೀವೆಲ್ಲರೂ ಸೇರಿರುವುದು ನನಗೆ ಬಹಳ ಖುಷಿಯ ವಿಚಾರ. ಯಾರೇ ಬರಲಿ ಈ ಊರಿನವರು ಅವರನ್ನು ಸ್ವಂತದವರಂತೆ ಕಾಣುತ್ತಾರೆ. ಇದುವೇ ಇಲ್ಲಿನ ವಿಶೇಷತೆ” ಎಂದು ಅವರು ಸಂತಸ ವ್ಯಕ್ತಪಡಿಸಿದರು.


ಶಿಕ್ಷಕಿ ಮೇಘ ಎಂ.ಕೆ. ಮಾತನಾಡಿ, “ಬೃಹತ್ ಶಿಕ್ಷಣ ಸಂಸ್ಥೆಯಾದ ಎಸ್ ಡಿ ಎಂ ಕಾಲೇಜಿನ ವತಿಯಿಂದ ಇಲ್ಲಿ ಶಿಬಿರ ನಡೆಯುತ್ತಿರುವುದು ಖುಷಿಯ ವಿಚಾರ. ಎನ್ನೆಸ್ಸೆಸ್ ಸ್ವಯಂಸೇವಕರು ಇಲ್ಲಿನ ಎಲ್ಲ ವಿದ್ಯಾರ್ಥಿಗಳನ್ನು ನಿಮ್ಮ ಸ್ವಂತ ತಮ್ಮ ತಂಗಿಯರಂತೆ ಕಂಡು ಶಿಬಿರವನ್ನು ಉತ್ತಮವಾದ ರೀತಿಯಲ್ಲಿ ಮುನ್ನಡೆಸಿಕೊಂಡು ಹೋಗಿ” ಎಂದರು.


ರಾಷ್ಟ್ರೀಯ ಸೇವಾ ಯೋಜನಾಧಿಕಾರಿ ಡಾ. ಮಹೇಶ್ ಕುಮಾರ್ ಶೆಟ್ಟಿ ಹೆಚ್. ಮಾತನಾಡಿ, “ಹಳ್ಳಿಯಲ್ಲಿರುವ ಜನರನ್ನು, ಗ್ರಾಮ ಪ್ರದೇಶಗಳನ್ನು ಕೇಂದ್ರವಾಗಿಟ್ಟುಕೊಂಡು ಕಾರ್ಯ ನಿರ್ವಹಿಸುವುದು ಎನ್ ಎಸ್ ಎಸ್. ನಮ್ಮ ಧ್ಯೇಯ ಗ್ರಾಮಗಳ ಉದ್ಧಾರ. ನಮ್ಮ ಜೊತೆ ನಮಗೆ ಪೂಜ್ಯ ಹೆಗ್ಗಡೆ ಅವರ ಮಾರ್ಗದರ್ಶನ ನಮಗೆ ಇರುವುದೇ ನಮಗೆ ಬಲ” ಎಂದರು. 

“ಏಳು ವರ್ಷಗಳ ಹಿಂದೆ ಇದೇ ಊರಿನಲ್ಲಿ ನಾವು ಶಿಬಿರ ನಡೆಸಿದ್ದೆವು. ಆದರೆ ಅಂದು ಇಂದಿನ ಹಾಗೆ ಸೌಲಭ್ಯಗಳು ಇರಲಿಲ್ಲ. ಆದರೆ ಇಂದು ಹಾಗಲ್ಲ. ಈ ಶಿಬಿರದಿಂದ ಈ ಶಾಲೆ ಇನ್ನೂ ಅಭಿವೃದ್ಧಿ ಹೊಂದಲಿದೆ” ಎಂದರು.ಇದೇ ಸಂದರ್ಭದಲ್ಲಿ ‘ಶಿಬಿರವಾಣಿ’ ಭಿತ್ತಿಪತ್ರಿಕೆಯ ಎರಡನೇ ಸಂಚಿಕೆಯನ್ನು ಬಿಡುಗಡೆಗೊಳಿಸಲಾಯಿತು. ಯೋಜನಾಧಿಕಾರಿ ಪ್ರೊ. ದೀಪ ಆರ್.ಪಿ., ಶಿಬಿರಾಧಿಕಾರಿಗಳಾದ ಅಮಿತ್ ಕುಮಾರ್, ಶೃತಿ ಮಣಕೀಕರ್, ಸ್ವಯಂಸೇವಕರು ಮತ್ತು ಶಾಲೆಯ ವಿದ್ಯಾರ್ಥಿಗಳು ಉಪಸ್ಥಿತರಿದ್ದರು.


ಸ್ವಯಂಸೇವಕರಾದ ವರುಣ್ ಸ್ವಾಗತಿಸಿ, ವೈಷ್ಣವಿ ನಿರೂಪಿಸಿ, ಆಶ್ರಿತ ವಂದಿಸಿದರು.



ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್‌ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್‌ ಆಗಿ

ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಉಪಯುಕ್ತ ನ್ಯೂಸ್‌ ವಾಟ್ಸಪ್‌  ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ


web counter 

 


Post a Comment

0 Comments
Post a Comment (0)
Maruti Suzuki Festival of Colours
Maruti Suzuki Festival of Colours
To Top