ವಿರಾಟ್ ಪದ್ಮನಾಭ ವಿರಚಿತ 'ಬೆಟ್ಟದ ಹೂವು' ಕೃತಿಯ ರಕ್ಷಾ ಪುಟ ಅನಾವರಣ

Upayuktha
0





ಉಜಿರೆ: ಎಸ್‍ಡಿಎಂ ಸ್ನಾತಕೋತ್ತರ ಕೇಂದ್ರದ ಪತ್ರಿಕೋದ್ಯಮ ಮತ್ತು ಸಮೂಹ ಸಂವಹನ ವಿಭಾಗದ ಸಹಾಯಕ ಪ್ರಾಧ್ಯಾಪಕ ವಿರಾಟ್ ಪದ್ಮನಾಭ ಬರೆದಿರುವ 'ಬೆಟ್ಟದ ಹೂವು: ಆಧುನಿಕ ಭಾರತದ ಸಾಮಾಜಿಕ ರಾಮಾಯಣ' ಶೀರ್ಷಿಕೆಯ ರಕ್ಷಾಪುಟವನ್ನು ಬೆಂಗಳೂರಿನ ಕ್ಷೇಮವನದ ಮುಖ್ಯಕಾರ್ಯ ನಿರ್ವಹಣಾಧಿಕಾರಿ ಶ್ರದ್ಧಾಅಮಿತ್ ಶನಿವಾರ ಬಿಡುಗಡೆಗೊಳಿಸಿದರು.



ಈ ಸಂದರ್ಭದಲ್ಲಿ ಕೃತಿಯ ಲೇಖಕ ವಿರಾಟ್ ಪದ್ಮನಾಭ 'ಬೆಟ್ಟದ ಹೂವು' ಸಿನಿಮಾದ ಮಹತ್ವವನ್ನು ವಿವರಿಸಿದರು. 'ಬೆಟ್ಟದ ಹೂವು' ಚಲನಚಿತ್ರವು  ರಾಮನನ್ನು ಸಾಕ್ಷಾತ್ಕರಿಸುತ್ತಲೇ ವ್ಯಕ್ತಿತ್ವ ರುಪಿಸಿಕೊಳ್ಳುವ  ಅವಕಾಶಗಳನ್ನು ತೆರೆದಿಡುತ್ತದೆ. ಗ್ರಾಮೀಣಅಭ್ಯುದಯದ ಸಾಧ್ಯತೆಗಳ ಎಳೆಗಳು ಈ ಸಿನೆಮಾದಲ್ಲಿವೆ. ಗುಣಾತ್ಮಕ ವಿಶ್ಲೇಷಣಾ ಸಂಶೋಧನಾ ವಿಧಾನವನ್ನು ಅನ್ವಯಿಸಿ ಈ ಕೃತಿಯನ್ನು ರಚಿಸಲಾಗಿದೆ ಎಂದು ತಿಳಿಸಿದರು.



ಸಿನಿಮಾಕ್ಕಾಗಿಯೇ ಸಾಹಿತ್ಯಕವಾದ  ಜ್ಞಾನಪೀಠ ಪ್ರಶಸ್ತಿ ನೀಡುವ ಆಡಳಿತಾತ್ಮಕ ಸಂಪ್ರದಾಯ ಶುರುವಾದರೆ ಅದಕ್ಕೆ ಮೊಟ್ಟಮೊದಲ ಅರ್ಹ ಸಿನಿಮಾ ಕಲಾಕೃತಿಯಾಗಿ ಆಯ್ಕೆಯಾಗುವಷ್ಟರ ಮಟ್ಟಿಗೆ 'ಬೆಟ್ಟದ ಹೂವು'  ಸಿನಿಮಾ ಶ್ರೇಷ್ಠ ಗುಣಮಟ್ಟ  ಹೊಂದಿದೆ. ಆ ಪ್ರಶಸ್ತಿ ಇದ್ದಿದ್ದರೆ ಎನ್.ಲಕ್ಷ್ಮೀನಾರಾಯಣ್‍ ಅವರಿಗೇ ಅಂಥದ್ದೊಂದು ಮೊಟ್ಟಮೊದಲ ಮಾನ್ಯತೆ ಲಭ್ಯವಾಗುತ್ತಿತ್ತು ಎಂದರು.



ಗ್ರಾಮೀಣಾಭಿವೃದ್ಧಿ  ಯೋಜನೆಗಳ ಮೂಲಕ ಸಮಾಜಕ್ಕೆ ಕೊಡುಗೆ ನೀಡುತ್ತಿರುವ ಧರ್ಮಸ್ಥಳದ ಧರ್ಮಾಧಿಕಾರಿ ಡಿ.ವೀರೇಂದ್ರ ಹೆಗ್ಗಡೆ ಮತ್ತುತರಗತಿಯ ಭೋದನೆಯ ಕ್ಷಣಗಳನ್ನು ಅಮೂಲ್ಯಗೊಳಿಸುವ ವಿದ್ಯಾರ್ಥಿಗಳಿಗೆ ಪುಸ್ತಕವನ್ನು ಅರ್ಪಿಸಿದ್ದೇನೆ ಎಂದು ಅವರು ಹೇಳಿದರು.



ಸ್ನೇಹ ಬುಕ್ ಹೌಸ್‍ನ ಕೆ.ವಿ ಪರಶಿವಪ್ಪ ಈ ಕೃತಿಯನ್ನು ಶೀಘ್ರದಲ್ಲಿ ಹೊರತರಲಿದ್ದಾರೆ. ಕೃತಿಯ ಮುಖಪುಟದ ಚಿತ್ರ ವಿನ್ಯಾಸವನ್ನು ಸ್ಯಾನ್ರಿಟಾ ಮಾಡ್ತಾ ರೂಪಿಸಿದ್ದಾರೆ. ಮುಖಪುಟ ಮತ್ತು ರಕ್ಷಾಪುಟ ವಿನ್ಯಾಸ ಕೇಶವ ಕುಡುವಳ್ಳಿ ಅವರದ್ದಾಗಿದೆ ಎಂದರು. 



ಉಜಿರೆ ಎಸ್‍ಡಿಎಂ ಕಾಲೇಜಿನ ಪ್ರಾಂಶುಪಾಲ ಡಾ.ಬಿ.ಎಕುಮಾರ ಹೆಗ್ಡೆ,  ಸ್ನಾತಕೋತ್ತರ ಕೇಂದ್ರದ  ಡಾ. ವಿಶ್ವನಾಥ ಪಿ ಮತ್ತು ಪತ್ರಿಕೋದ್ಯಮ ಮತ್ತು ಸಮೂಹ ಸಂವಹನ ವಿಭಾಗ ಮುಖ್ಯಸ್ಥ ಡಾ. ಭಾಸ್ಕರ ಹೆಗಡೆ ಉಪಸ್ಥಿತರಿದ್ದರು.



ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್‌ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್‌ ಆಗಿ

ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಉಪಯುಕ್ತ ನ್ಯೂಸ್‌ ವಾಟ್ಸಪ್‌  ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ


web counter 

Post a Comment

0 Comments
Post a Comment (0)
Maruti Suzuki Festival of Colours
Maruti Suzuki Festival of Colours
To Top