ವೇಣೂರು ನಮ್ಮೂರ ಜಾತ್ರೆ ಕುಂಭಶ್ರೀ ವೈಭವದ ಸಭಾ ಕಾರ್ಯಕ್ರಮ
ಬೆಳ್ತಂಗಡಿ: ವಿದ್ಯಾರ್ಥಿಗಳು ವಿದ್ಯೆಯೆಂಬ ಆಸ್ತಿಯನ್ನು ಜತನದಿಂದ ಸಂಪಾದಿಸಬೇಕು, ಜೊತೆಗೆ ಶಿಸ್ತು, ವಿನಯವನ್ನೂ ರೂಢಿಸಿಕೊಳ್ಳಬೇಕು ಎಂದು ಬೆಳ್ತಂಗಡಿ ಕ್ಷೇತ್ರ ಶಿಕ್ಷಣಾಧಿಕಾರಿ ತಾರಾಕೇಸರಿ ಹೇಳಿದರು.
ಅವರು ವೇಣೂರು ಸನಿಹದ ಕುಂಭಶ್ರೀ ಆಂಗ್ಲಮಾಧ್ಯಮ ವಿದ್ಯಾಸಂಸ್ಥೆಯಲ್ಲಿ ಜರಗಿದ ನಮ್ಮೂರ ಜಾತ್ರೆ ಕುಂಭಶ್ರೀ ವೈಭವ ಮತ್ತು ಮಾತಾ-ಪಿತಾ-ಗುರುದೇವೋಭವ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಭಾಗವಹಿಸಿ ಮಾತನಾಡಿದರು.
ಪೋಷಕರು ತಮ್ಮ ಮಕ್ಕಳನ್ನು ಶಾಲೆಗೆ ಕಳುಹಿಸಿದರಷ್ಟೇ ಸಾಲದು. ಆಗಾಗ್ಗೆ ಶಾಲೆಗೆ ಬಂದು ಮಕ್ಕಳ ವಿದ್ಯಾಭ್ಯಾಸದ ಪ್ರಗತಿಯಕಡೆಗೂ ಗಮನ ನೀಡಬೇಕು. ಎಲ್ಲಕ್ಕಿಂತ ಮುಖ್ಯವಾಗಿ ಮಕ್ಕಳೊಂದಿಗೆ ಆತ್ಮೀಯ ಸಂವಹನ ನಡೆಸುವುದು ಮುಖ್ಯವಾಗುತ್ತದೆ. ಹತ್ತನೇ ತರಗತಿಯಲ್ಲಿರುವ ಮಕ್ಕಳಿಗೆ ಜನವರಿಯಿಂದ ಪುನರಾವರ್ತನೆಯ ಕಾರ್ಯ ನಡೆಸಬೇಕು ಎಂದರು.
ಮಂಗಳೂರು ದಾಸ್ ಚಾರಿಟೇಬಲ್ ಸೇವಾ ಟ್ರಸ್ಟ್‌ನ ಸ್ಥಾಪಕಾಧ್ಯಕ್ಷ ಅನಿಲ್‌ದಾಸ್ ಅವರು ಮಾತನಾಡಿ, ಕುಂಭಶ್ರೀ ವಿದ್ಯಾಲಯವು ಗುರುಕುಲ ಮಾದರಿಯಲ್ಲಿ ಗುಣಮಟ್ಟದ ಶಿಕ್ಷಣವನ್ನು ನೀಡುತ್ತಿರುವುದು ಶ್ಲಾಘನೀಯ ಎಂದರು.
ಕುಂಭಶ್ರೀ ಶಿಕ್ಷಣ ಸಂಸ್ಥೆಗಳ ಸಂಸ್ಥಾಪಕ ಗಿರೀಶ್ ಕೆ.ಹೆಚ್. ಅವರು ಸಮಾರಂಭದ ಅಧ್ಯಕ್ಷತೆ ವಹಿಸಿ, ಸಂಸ್ಥೆಯ ಸಾಧನೆಗೆ ದಾನಿಗಳ, ಪೋಷಕರು ಮತ್ತು ಮಕ್ಕಳ ಹಾಗೂ ಸಿಬ್ಬಂದಿಗಳ ಸಹಕಾರದಿಂಸ ಸಾಧ್ಯವಾಗಿದೆ ಎಂದ ಅವರು ಕಾರ್ಯಕ್ರಮದ ಯಶಶ್ವಿಗೆ ಸಹಕರಿಸಿದ ಎಲ್ಲರಿಗೆ ಕೃತಜ್ಞತೆ ಸಲ್ಲಿಸಿದರು.
ಜಿಲ್ಲಾ ಖಾಸಗಿ ಕಾಲೇಜು ಪ್ರಾಂಶುಪಾಲರ ಸಂಘದ ಅಧ್ಯಕ್ಷ ವಿಠಲ ಅಬುರ, ಕುಕ್ಕೇಡಿ ಗ್ರಾ.ಪಂ. ಅಧ್ಯಕ್ಷೆ ಶ್ರೀಮತಿ ಅನಿತಾ, ವೇಣೂರು ಗ್ರಾ.ಪಂ. ಅಧ್ಯಕ್ಷೆ ಮಲ್ಲಿಕಾ ಕಾಶಿನಾಥ್ ಹೆಗ್ಡೆ, ವೈಭವ ಸಮಿತಿ ಗೌರವಾಧ್ಯಕ್ಷ ಹರೀಶ್ ಕುಮಾರ್ ಪೊಕ್ಕಿ, ಅಧ್ಯಕ್ಷ ಅಶ್ವಿತ್ ಕುಲಾಲ್, ಉಪಾಧ್ಯಕ್ಷರುಗಳಾದ ಸೋಮನಾಥ ಕೆ.ವಿ., ಜಯಂತಿ, ಪಾವನ, ಸೌಮ್ಯ, ಪಿಟಿಎ ಅಧ್ಯಕ್ಷ ಪಿಟಿಎ ಅಧ್ಯಕ್ಷ ಸುರೇಶ್ ಪೂಜಾರಿ, ಉಪಾಧ್ಯಕ್ಷ ವಸಂತ್, ಕಾಲೇಜು ಪ್ರಾಂಶುಪಾಲೆ ಓಮನಾ ಎಂ.ಎ., ಉಪಪ್ರಾಚಾರ್ಯ ವಿನಯ, ಡಾ. ದೀಕ್ಷಾ ಅಶ್ವಿತ್ ಕುಲಾಲ್, ಗುರುಪ್ರಕಾಶ್ ಕಕ್ಕೆಪದವು, ಸಂಸ್ಥೆಯ ಶೈಕ್ಷಣಿಕ ಸಲಹೆಗಾರ್ತಿ ಉಷಾ ಜಿ., ಪೂರ್ವ ಪ್ರಾಥಮಿಕ ಶಾಲೆಯ ಮುಖ್ಯೋಪಾಧ್ಯಾಯಿನಿ ಶೋಭಾ ಎಲ್.ಎನ್. ರಾವ್, ಪ್ರಾಥಮಿಕ ಶಾಲೆಯ ಮುಖ್ಯೋಪಾಧ್ಯಾಯಿನಿ ಶುಭ, ಪ್ರೌಢ ಶಾಲಾ ಮುಖ್ಯಶಿಕ್ಷಕಿ ಶ್ವೇತಾ ಕುಂಭಶ್ರೀ ಶಾಲೆಯ ವಿದ್ಯಾರ್ಥಿ ಸಂಘದ ನಾಯಕ ನಾಯಕ ಅಜೇಶ್, ನಾಯಕಿ ಸಮೀಕ್ಷಾ ವೇದಿಕೆಯಲ್ಲಿದ್ದರು.
ಕುಂಭಶ್ರೀ ವಿದ್ಯಾಗೌರವ ಪ್ರಶಸ್ತಿ ಪ್ರದಾನ
ವಿವಿಧ ಕ್ಷೇತ್ರಗಳಲ್ಲಿ ಸಾಧನೆಗೈದಿರುವ ಉದಯ ಕುಮಾರ್, ಕಾವ್ಯ ಆರ್. ಕುಲಾಲ್, ಮಮತಾ ಶಾಂತಿ, ಶುಭ, ದಿನೇಶ್ ಕುಲಾಲ್, ಓಮನಾ ಎಂ.ಎ., ಹಿಲಾರಿ ಫೆರ್ನಾಂಡಿಸ್, ಸಫನ ವಿ. ಅವರಿಗೆ ಪ್ರಶಸ್ತಿ ಪ್ರದಾನ ಮಾಡಲಾಯಿತು. ಸಾಧಕ ವಿದ್ಯಾರ್ಥಿಗಳು, ಆಟೋಟಗಳಲ್ಲಿ ವಿಜೇತರಾದ ಪೋಷಕರು ಹಾಗೂ ಮಕ್ಕಳಿಗೆ ಬಹುಮಾನಗಳನ್ನು ವಿತರಿಸಲಾಯಿತು. ವಿದ್ಯಾರ್ಥಿಗಳಿಂದ ವಿವಿಧ ಆಕರ್ಷಕ ಸಾಂಸ್ಕೃತಿಕ ಕಾರ್ಯಕ್ರಮಗಳು ಜರಗಿದವು. ಕುಂಭಶ್ರೀ ಸಂಸ್ಥೆಯ ಸಂಚಾಲಕ ಅಶ್ವಿತ್ ಕುಲಾಲ್ ಸ್ವಾಗತಿಸಿದರು. ಶಿಕ್ಷಕಿ ಪವಿತ್ರಾ ವಂದಿಸಿದರು.
ಜನಪ್ರತಿನಿಧಿಗಳ, ದಾನಿಗಳ ಸಹಕಾರವಿರಲಿ
ಊರಿನ ಜನರ ಪ್ರೀತಿ, ಪೋಷಕರು ಮತ್ತು ಮಕ್ಕಳ ಸಹಕಾರದಿಂದ ಕುಂಭಶ್ರೀ ಶಾಲೆ ಈ ಮಟ್ಟದಲ್ಲಿ ಬೆಳೆಯಲು ಸಾಧ್ಯವಾಗಿದೆ ಅನ್ನುವ ಭಾವನೆ ನನ್ನದು. ಗ್ರಾಮೀಣ ಭಾಗದ ಮಕ್ಕಳಿಗೆ ಗುಣಮಟ್ಟದ ಆಂಗ್ಲ ಮಾಧ್ಯಮ ಶಿಕ್ಷಣ ಒದಗಿಸುವುದರ ಜೊತೆಗೆ ಉತ್ತಮ ಪ್ರಜೆಗಳನ್ನು ರೂಪಿಸುವ ಜವಾಬ್ದಾರಿಯನ್ನು ಇಲ್ಲಿನ ಶಿಕ್ಷಕರು ಹೊತ್ತುಕೊಂಡಿರುವುದು ವಿಶೇಷ. ಇಂತಹ ವಿದ್ಯಾ ಸಂಸ್ಥೆಗೆ ಜನಪ್ರತಿನಿಧಿಗಳ, ದಾನಿಗಳ ಹಾಗೂ ಪೋಷಕರ ನಿರಂತರ ಸಹಕಾರ ಅಗತ್ಯ.
ಲ| ಅನಿಲ್‌ದಾಸ್,
ಮ್ಯಾನೇಜಿಂಗ್ ಡೈರೆಕ್ಟರ್
ದಾಸ್ ಪ್ರೊಮೋಶನ್ಸ್, ಮಂಗಳೂರು
ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್ ಆಗಿ
ಉಪಯುಕ್ತ ನ್ಯೂಸ್’ ಫೇಸ್‌ಬುಕ್ ಪುಟ ಲೈಕ್ ಮಾಡಿ
ಉಪಯುಕ್ತ ನ್ಯೂಸ್ ವಾಟ್ಸಪ್ ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ