20 ಭಾಷೆಗಳಲ್ಲಿ ಚೌಪದಿ ಸಾದರ ಪಡಿಸಿದ ಸಂತ ಅಲೋಶಿಯಸ್ ಕಾಲೇಜು ವಿದ್ಯಾರ್ಥಿಗಳು

Upayuktha
0





ಮಂಗಳೂರು: ಸಂತ ಅಲೋಶಿಯಸ್ ಕಾಲೇಜು ‌ಪರಿಗಣಿತ ವಿಶ್ವವಿದ್ಯಾನಿಲಯದ ವಿದ್ಯಾರ್ಥಿಗಳ ಕ್ರಿಸ್ಮಸ್ ಸಂದೇಶ ಸಾರುವ ರೇಮಂಡ್ ಡಿಕೂನಾ ತಾಕೊಡೆ ವಿರಚಿತ ಚಾರೊಳಿ ನಾಲ್ಕು ಸಾಲಿನ ಒಂದೇ ಚೌಪದಿ ಕವಿತೆ ಭಾರತೀಯ 20 ವಿವಿಧ ಭಾಷೆಯಲ್ಲಿ ಈ ಕೆಳಗಿನ ವಿದ್ಯಾರ್ಥಿಗಳು ಪ್ರಸ್ತುತ ಪಡಿಸಿದರು.



ಇಂಗ್ಲಿಷ್ ‌ನಲ್ಲಿ ಅನ್ವಿತಾ ಡಿಕೂನಾ, ಹಿಂದಿ ಅನ್ಸಿಲ್ಲಾ ಕೆರೊ, ಒಡಿಯಾ ಪ್ರಿಯದರ್ಶಿನಿ, ತೆಲಗು ಅನುಷಾ ಬಲಮಾಲ, ಕೊಂಕಣಿ ಜೆನಿತ ರೇಗೊ, ಮಲಯಾಳಂ ಎಮಿನ್ ಬಿನೊಯ್, ಝೊಮಿರ್ ಲಿಂಡಾ, ಬೆಂಗಾಲಿ ಸಿ. ರೊಶ್ನಿ ಲಕ್ರಾ, ಕನ್ನಡ ನವ್ಯಾ ಪಿ, ಮಿಝೊ ಸಿ. ಜೆಸಿಂತಾ, ಮರಾಠಿ ಶಾರ್ಲೆಟ್, ಖಾಸಿ ಇಸುಕ್, ಖಾಂಡಿಯ ರಂಜಿತ್, ಸಂಸ್ಕೃತ ಅನುಪ್ ಆರ್‌ ಐತಳ್, ಸಿನ್ನಾಳ  ಥಿವಿಂಡಾ ಜುಡ್ ಕೂರ್ವೆ, ತಮಿಳು ಸೊನಾಲಿ ಆರ್, ಉರ್ದು ಉಮರ್ ಫರೂಕ್, ತುಲು ನಿಹಾರಿಕಾ ಎಂ ಬಂಗೇರಾ, ಬ್ಯಾರಿ ಮೊಹಮ್ಮದ್ ಮಫಾಜ್, ಪ್ರೆಂಚ್ ವಂದನ್.



ಈ ಸಂದರ್ಭದಲ್ಲಿ ಕೇಕ್ ಕತ್ತರಿಸಿ ಕ್ರಿಸ್ಮಸ್ ಸಂಭ್ರಮದ ಸಿಹಿ ತಿಂಡಿ ತಿನಿಸುಗಳು ನೆರೆದ ಕವಿಗಳು ಮತ್ತು ಆಮಂತ್ರಿತರಿಗೆ ಹಂಚಲು ಅನುವು ಮಾಡಿಕೊಟ್ಟ ಸಂತ ಅಲೋಶಿಯಸ್ ಸ್ವಾಯತ್ತ ಕಾಲೇಜಿನ ರಿಜಿಸ್ಟ್ರಾರ್ ಡಾಕ್ಟರೇಟ್ ಆಲ್ವಿನ್ ಡೆಸಾ ಮಾತನಾಡಿ ಕ್ರಿಸ್ಮಸ್ ಸಿಹಿಯು ಸಹನೆ, ಭ್ರಾತೃತ್ವ, ಕ್ಷಮೆ ಮತ್ತು ಯಾವುದೇ ಸಂಶಯಾತೀತ ಪ್ರೀತಿಯ ಸಂಕೇತ ಆಗಿದೆ. ನಾವು ಸಿಹಿಯಾದ ಸಂಭ್ರಮ, ಸಡಗರ, ಸಂತೋಷದಿಂದ ಇದ್ದಾಗ ಕ್ಷಮಿಸಲು ಅನುವು ಆಗುತ್ತದೆ ಎಂದರು.



ಈ ಸಂದರ್ಭದಲ್ಲಿ ಅಖಿಲ ಭಾರತೀಯ ಚಾರೊಳಿ ಸಾಹಿತ್ಯ ಪರಿಷತ್ತಿದ್ ಇದರ ರಾಷ್ಟೀಯ ಅಧ್ಯಕ್ಷ ರೇಮಂಡ್ ಡಿಕೂನಾ ತಾಕೊಡೆ, ಕರ್ನಾಟಕ ಕನ್ನಡ ಸಾಹಿತ್ಯ ಪರಿಷತ್ತಿನ ದ.ಕ ಅಧ್ಯಕ್ಷ ಎಂ.ಪಿ ಶ್ರೀನಾಥ್, ಉದ್ಯಮಿ ಚಂದ್ರಹಾಸ ಶೆಟ್ಟಿ, ಕವಿ ಗೋಷ್ಟಿ ಸಂಚಾಲಕ ಡಾ ಸುರೇಶ್ ನೆಗಳಗುಳಿ, ತುಳುವೆರೆ ಕಲಾ ಬಳಗದ ಎಡ್ಮಿನ್ ಗೀತಾ ಲಕ್ಷ್ಮೀಶ್, ಪ್ರಾಧ್ಯಾಪಕರಾದ ಸೆವ್ರಿನ್, ಲವ್ಲಿನ್, ಕೊಂಕಣಿ ವಿಭಾಗ ಮುಖ್ಯಸ್ಥೆ ಪ್ಲೊರಾ ಕಾಸ್ತೆಲಿನೊ, ಕೊಂಕಣಿ ಸಂಘದ ಕಾರ್ಯದರ್ಶಿ ರಾಹುಲ್ ಮೆಂಡೋನ್ಸಾ, ರುಸ್ಸೇಲ್ ಡಿಮೆಲ್ಲೋ, ವಿದ್ಯಾರ್ಥಿ ಸಂಯೋಜಕರು ಅನ್ವಿತಾ ಡಿಕುನ್ಹಾ ಮತ್ತು ಮಿಶೆಲ್ ಫೆರ್ನಾಂಡಿಸ್ ಪದಾಧಿಕಾರಿಗಳು ವೇದಿಕೆಯ ಮೇಲಿದ್ದರು.



ಈ ಸಂದರ್ಭದಲ್ಲಿ ಬಹುಭಾಷಾ ಕವಿಗೋಷ್ಠಿ ನಡೆಯಿತು. ಡಾ ಸುರೇಶ ನೆಗಳಗುಳಿ, ಆಯೇಶಾ ಪೆರ್ನೆ, ಚೇತನ್ ಎಚ್ ಎಂ, ಅನರ್ಕಲಿ ಸಲೀಮ್, ಗೋಪಾಲಕೃಷ್ಣ ಶಾಸ್ತ್ರಿ, ಡಾಕ್ಟರೇಟ್ ಮೈತ್ರಿ ಭಟ್ ವಿಟ್ಲ, ವೆಂಕಟೇಶ ಗಟ್ಟಿ, ಗೀತಾ ಲಕ್ಮೀಶ್, ರತ್ನಾ ಭಟ್, ವಿಲಿಯಂ ಅಲ್ಲಿಪಾದೆ, ರಾಣಿ ಪುಷ್ಪ ಲತಾ ದೇವಿ, ಗಂಗಾಧರ್ ಗಾಂಧಿ, ನಂತರ ಎಲ್ಲಾ ಜನರಿಗೆ ಬೇಕಾದಷ್ಟು ಕ್ರಿಸ್ಮಸ್ ಸಿಹಿ ತಿಂಡಿಯನ್ನು ಹಂಚಲಾಯಿತು.



ಸಂತ ಅಲೋಶಿಯಸ್ ಕಾಲೇಜಿನ ಕೊಂಕಣಿ ಸಂಘದ ವಿದ್ಯಾರ್ಥಿಗಳು ಯೇಸುವಿನ ಜನನ, ಸಾಂತಕ್ಲೊಸ್ ಪ್ರದರ್ಶನ, ಸಹಿ ಹಂಚಿಕೆಯ ಜವಾಬ್ದಾರಿ ಯಶಸ್ವಿಯಾಗಿ ನಿರ್ವಹಿಸಿದರು. ಮೊದಲಿಗೆ ರೇಮಂಡ್ ಡಿಕೂನಾ ತಾಕೊಡೆ ಸ್ವಾಗತಿಸಿ ಸೆವ್ರಿನ್ ವಂದಿಸಿದರು. ಜೀತನ್, ಲಿವಿಯ ರೊಡ್ರಿಗಸ್ ನಿರ್ವಹಿಸಿದರು.



ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್‌ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್‌ ಆಗಿ

ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಉಪಯುಕ್ತ ನ್ಯೂಸ್‌ ವಾಟ್ಸಪ್‌  ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ


web counter 

إرسال تعليق

0 تعليقات
إرسال تعليق (0)
Mandovi Motors Presents MONSOON BONANZA
Mandovi Motors Presents MONSOON BONANZA
To Top