- ಬೆಂಗಳೂರಿನಲ್ಲಿ ಶ್ರೀನಾಟ್ಯಂ ಕಲಾ ಕೇಂದ್ರ ಆಯೋಜನೆ
- ವಿದುಷಿ ಪುಷ್ಪಲತಾ ನೇತೃತ್ವ
ಬೆಂಗಳೂರು: ನಗರದ ಶ್ರೀ ನಾಟ್ಯಂ ಕಲಾ ಕೇಂದ್ರದ 15ನೇ ವಾರ್ಷಿಕೋತ್ಸವದ ಅಂಗವಾಗಿ ರಾಜ್ಯಮಟ್ಟದ ನೃತ್ಯ ಸ್ಪರ್ಧೆ- 2024 ಆಯೋಜಿಸಿದೆ. ಬೆಂಗಳೂರಿನ ಶ್ರೀನಿಧಿ ಬಡಾವಣೆಯ 8 ನೇ ಮುಖ್ಯರಸ್ತೆಯಲ್ಲಿರುವ ಶ್ರೀನಿಧಿ ಸಭಾಂಗಣದಲ್ಲಿ ಡಿ. 22ರ ಬೆಳಗ್ಗೆ 10ಕ್ಕೆ ಸ್ಪರ್ಧೆ ನಡೆಸಲಾಗುತ್ತದೆ ಎಂದು ಶಿವಮೊಗ್ಗ ಮೂಲದ ಖ್ಯಾತ ವಿದುಷಿ ಪುಷ್ಪಲತಾ ತಿಳಿಸಿದ್ದಾರೆ.
ಎರಡು ಪ್ರಕಾರದ ಸ್ಪರ್ಧೆ:
ಭರತನಾಟ್ಯ ಮತ್ತು ಜಾನಪದ ನೃತ್ಯ-ಭಾಗಗಳಲ್ಲಿ ಪ್ರತ್ಯೇಕವಾದ ಸ್ಪರ್ಧೆ ನಡೆಯಲಿದೆ. 8 ವರ್ಷದ ಒಳಗಿನವರು, ಎಂಟರಿಂದ 12ರಿಂದ ವರ್ಷದವರು, 16 ವರ್ಷ ಮೇಲ್ಪಟ್ಟವರ ಒಟ್ಟು ಮೂರು ವಿಭಾಗಗಳಲ್ಲಿ ಪ್ರತ್ಯೇಕ ಬಹುಮಾನಗಳನ್ನು ನೀಡಲಾಗುತ್ತದೆ. ಭಾಗವಹಿಸಿದ ಎಲ್ಲರಿಗೂ ಪ್ರಮಾಣ ಪತ್ರ ಮತ್ತು ಸಮಾಧಾನಕರ ಬಹುಮಾನ ವಿತರಣೆಯೂ ನಡೆಯಲಿದೆ. ಆಸಕ್ತ ಸ್ಪರ್ಧಿಗಳು ಸ್ಪರ್ಧಾ ಸಂದರ್ಭದಲ್ಲಿ ತಮ್ಮ ಜನ್ಮ ದಿನಾಂಕ ಖಾತರಿ ಪಡಿಸುವ ಆಧಾರ್ ಅಥವಾ ಯಾವುದೇ ದಾಖಲೆಗಳ ಪ್ರತಿಗಳನ್ನು ತರಬೇಕು. ಹೆಸರು ನೋಂದಣಿ ಮತ್ತು ವಿವರಗಳಿಗೆ 9900088983 ಮತ್ತು 9513816649 ಸಂಪರ್ಕಿಸಬಹುದು ಎಂದು ವಿದುಷಿ ಪುಷ್ಪಲತಾ ತಿಳಿಸಿದ್ದಾರೆ.
ಸಂಸ್ಥೆಯ ಹಿರಿಮೆ: ಬೆಂಗಳೂರಿನ ಕೋಣನ ಕುಂಟೆಯಲ್ಲಿ 2009ರಲ್ಲಿ ಶಿವಮೊಗ್ಗ ಮೂಲದ ವಿದುಷಿ ಪುಷ್ಪಲತಾ ಅವರಿಂದ ಚಾಲನೆಗೊಂಡ ಶ್ರೀ ನಾಟ್ಯಂ ಕಲಾ ಕೇಂದ್ರವು ಈವರೆಗೆ ಸಾವಿರಾರು ವಿದ್ಯಾರ್ಥಿಗಳಿಗೆ ಭರತನಾಟ್ಯ ಕಲೆಯನ್ನು ಧಾರೆ ಎರೆದಿದೆ. ಮಕ್ಕಳಿಗೆ ಮಹತ್ವದ ಸೇವೆಯನ್ನು ಮಾಡುತ್ತ ಲೇ ರಾಜ್ಯದ ಪ್ರತಿಷ್ಠಿತ ಕರಾವಳಿ ಉತ್ಸವ, ಹಂಪಿ ಉತ್ಸವ, ಪಟ್ಟದಕಲ್ಲು ಉತ್ಸವ ಮತ್ತು ಮೈಸೂರು ದಸರಾ ಸೇರಿದಂತೆ ನೂರಾರು ಕಾರ್ಯಕ್ರಮಗಳಲ್ಲಿ ತನ್ನ ಛಾಪನ್ನು ಒತ್ತಿದೆ. ವಿದುಷಿ ಪುಷ್ಪಲತಾ ನೇತೃತ್ವದ ಈ ತಂಡ ಕಳೆದ ವರ್ಷ ಪಾಂಡಿಚೇರಿ ಮತ್ತು ಚಿದಂಬರಂನಲ್ಲಿ ಹಮ್ಮಿಕೊಂಡಿದ್ದ ಗಿನ್ನಿಸ್ ಮತ್ತು ಲಿಮ್ಕಾ ದಾಖಲೆಯ ಬೃಹತ್ ನೃತ್ಯ ಪ್ರಸ್ತುತಿಗಳಲ್ಲಿ ತನ್ನ ವಿಶೇಷತೆಯನ್ನು ಪ್ರದರ್ಶಿಸಿರುವುದು ವಿಶ್ವ ಮಾನ್ಯತೆಯನ್ನು ತಂದುಕೊಟ್ಟಿದೆ. ರಂಗ ಪ್ರವೇಶವನ್ನೂ ಮಾಡಿಸಿ ನವ, ಯುವ ಕಲಾವಿದರಿಗೆ ಶ್ರೀ ನಾಟ್ಯಂ ಸಂಸ್ಥೆ ಮನ್ನಣೆ ಒದಗಿಸಿದೆ.
ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್ ಆಗಿ
ಉಪಯುಕ್ತ ನ್ಯೂಸ್’ ಫೇಸ್‌ಬುಕ್ ಪುಟ ಲೈಕ್ ಮಾಡಿ
ಉಪಯುಕ್ತ ನ್ಯೂಸ್ ವಾಟ್ಸಪ್ ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ