ಶ್ರೀ ಕುಪ್ಪೆಟ್ಟು ಪಂಜುರ್ಲಿ ಮೂಲಸ್ಥಾನ ಕುಪ್ಪೆಟ್ಟು ಲಾಂಛನ ಬಿಡುಗಡೆ

Chandrashekhara Kulamarva
0


ಬಂಟ್ವಾಳ: ಶ್ರೀ ಕುಪ್ಪೆಟ್ಟು ಪಂಜುರ್ಲಿ ಮೂಲಸ್ಥಾನ ಕುಪ್ಪೆಟ್ಟು ಬರ್ಕೆ ಕರ್ಪೆ ಇದರ ಜೀರ್ಣೋದ್ಧಾರ, ಪ್ರತಿಷ್ಠಾ ಮಹೋತ್ಸವದ ಅಂಗವಾಗಿ ಲಾಂಛನ ಬಿಡುಗಡೆ ಕಾರ್ಯಕ್ರಮ ಕುಪ್ಪೆಟ್ಟು ಬರ್ಕೆ ಚಾವಡಿಯಲ್ಲಿ ನಡೆಯಿತು.


ಪ್ರತಿಷ್ಠಾ ಮಹೋತ್ಸವ ಅಧ್ಯಕ್ಷ ಭುವನೇಶ್ ಪಚ್ಚಿನಡ್ಕ ಲೋಗೋ ಅನಾವರಣಗೊಳಿಸಿದರು. ಲೋಗೋ ಬಿಡುಗಡೆ ಸಂದರ್ಭದಲ್ಲಿ ಕುಪ್ಪೆಟ್ಟು ಪಂಜುರ್ಲಿ ದೈವಸ್ಥಾನ ಜೀರ್ಣೋದ್ಧಾರ ಸಮಿತಿ ಅಧ್ಯಕ್ಷ ಪ್ರಭಾಕರ್ ಪ್ರಭು, ಕಾರ್ಯದರ್ಶಿ ನವೀನ್ ಪೂಜಾರಿ ಹೊಸಹೊಕ್ಲು ಪ್ರತಿಷ್ಠಾ ಮಹೋತ್ಸವ ಸಮಿತಿ ಉಪಾಧ್ಯಕ್ಷರುಗಳಾದ ಕಿರಣ್ ಕುಮಾರ್ ಮಂಜಿಲ, ಜಯಪ್ರಕಾಶ್ ಜೆ.ಎಸ್ ಬಂಟ್ವಾಳ, ಸತೀಶ್ ಪೂಜಾರಿ ಅಲಕ್ಕೆ, ಹೊರೆಕಾಣಿಕೆ ಸಮಿತಿ ಸಂಚಾಲಕರಾದ ದೇವಪ್ಪ ಪೂಜಾರಿ ನೆಕ್ಕರೆಗುಳಿ, ಮಹಿಳಾ ಸಮಿತಿ ಸಂಚಾಲಕಿ ರಂಜಿನಿ ದಿವಾಕರ್ ಪೂಜಾರಿ ಕುಪ್ಪೆಟ್ಟು ಬರ್ಕೆ ಮನೆತನದ ಉಮೇಶ್ ಪೂಜಾರಿ, ಆಡಳಿತ ಸಮಿತಿ ಕೋಶಾಧಿಕಾರಿ ಜಯ ಪೂಜಾರಿ ಉಪಸ್ಥಿತರಿದ್ದರು. 


ಸಂಘಬೆಟ್ಟು ಗ್ರಾಮ ಪಂಚಾಯತ್ ಸದಸ್ಯ ದಾಮೋದರ ಪೂಜಾರಿ, ಪ್ರಮುಖರಾದ ಯೋಗೀಶ್ ಪೂಜಾರಿ ಕೆರ್ನಡೇ, ಇಂಜಿನಿಯರ್ ಸಂತೋಷ ಪೂಜಾರಿ, ವಾಮನ ಬುಣ್ಣನ್, ಪ್ರತಿಷ್ಠಾ ಮಹೋತ್ಸವ ಪ್ರಧಾನ ಕಾರ್ಯದರ್ಶಿ ರತ್ನಾಕರ್ ಪೂಜಾರಿ ಮದoಗೋಡಿ ಸ್ವಾಗತಿಸಿ, ಪ್ರಚಾರ ಸಮಿತಿ ಸಂಚಾಲಕ ದಿನೇಶ್ ಸುವರ್ಣ ರಾಯಿ ಲೋಗೋ ಬಿಡುಗಡೆಯ ಸಮಗ್ರ ಮಾಹಿತಿ ಹಾಗೂ ಮುಂದಿನ ಕಾರ್ಯ ವೈಖರಿಗಳ ಬಗ್ಗೆ ಮಾಹಿತಿ ನೀಡಿದರು. ಪ್ರತಿಷ್ಠಾ ಮಹೋತ್ಸವ ಸಮಿತಿ ಕೋಶಾಧಿಕಾರಿ ಪ್ರವೀಣ್ ಕುಪ್ಪೆಟ್ಟು ಧನ್ಯವಾದ ಅರ್ಪಿಸಿದರು.


ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್‌ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್‌ ಆಗಿ

ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಉಪಯುಕ್ತ ನ್ಯೂಸ್‌ ವಾಟ್ಸಪ್‌  ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ


web counter 

إرسال تعليق

0 تعليقات
إرسال تعليق (0)
To Top