ಬೀಚ್ ಸ್ವಚ್ಛತೆಗೆ ಸ್ಮಾರ್ಟ್ ಸಿಟಿಯಿಂದ ಆದ್ಯತೆ

Upayuktha
0

ಮಂಗಳೂರು ಸ್ಮಾರ್ಟ್ ಸಿಟಿ ಜಿಎಂ ಅರುಣ್ ಪ್ರಭಾ



ಮಂಗಳೂರು: ಬೀಚ್‌ಗಳು ಪ್ರವಾಸೋದ್ಯಮದ ಪ್ರಮುಖ ಆಕರ್ಷಣೆಯಾಗಿದ್ದು, ಮಂಗಳೂರು ಸ್ಮಾರ್ಟ್ ಸಿಟಿ ಯೋಜನೆಯಡಿ  ನಗರದ ಬೀಚ್‌ಗಳ ಸ್ವಚ್ಚತೆಗೂ ಆದ್ಯತೆ ನೀಡಲಾಗುವುದು ಎಂದು ಮಂಗಳೂರು ಸ್ಮಾರ್ಟ್ ಸಿಟಿ ಯೋಜನೆಯ ಜನರಲ್ ಮ್ಯಾನೇಜರ್ ಅರುಣ್ ಪ್ರಭಾ ತಿಳಿಸಿದರು.


ದ.ಕ  ಜಿಲ್ಲಾಡಳಿತ, ಮಂಗಳೂರು ನಗರ ಪೊಲೀಸ್ ಕಮಿಷನರೆಟ್, ಕ್ರೆಡೈ ಮಂಗಳೂರು, ಸ್ಮಾರ್ಟ್ ಸಿಟಿ ಮಂಗಳೂರು, ದ.ಕ. ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘ, ಸ್ವಸ್ತಿಕ ನ್ಯಾಷನಲ್ ಬ್ಯುಸಿನೆಸ್ ಸ್ಕೂಲ್ ನ ಎನ್ ಎಸ್ ಎಸ್ ಘಟಕದ ಹಾಗೂ ಪಣಂಬೂರು ಕುಳಾಯಿ ಮೊಗವೀರ ಸಭಾದ ಸಹಯೋಗದಲ್ಲಿ ರವಿವಾರ ಚಿತ್ರಾಪುರ ಬೀಚ್ ನಲ್ಲಿ ನಡೆದ ಸ್ವಚ್ಚತಾ ಅಭಿಯಾನ ಉದ್ಘಾಟಿಸಿ ಅವರು ಮಾತನಾಡಿದರು.

 

ಚಿತ್ರಾಪುರ ಬೀಚ್ ಕರಾವಳಿಯವ ಸ್ವಚ್ಛ, ಸುಂದರ ಬೀಚ್ ಆಗಿದ್ದು ಇದಕ್ಕೆ  ಸ್ಥಳೀಯರ ಮುತುವರ್ಜಿ ಕಾರಣವಾಗಿದೆ ಎಂದು ಅವರು ಹೇಳಿದರು.


ಮಂಗಳೂರು ಮಹಾನಗರ ಪಾಲಿಕೆಯ ಉಪ ಆಯುಕ್ತ ಚಂದ್ರಶೇಖರ್, ಕ್ರೆಡೈ ಮಂಗಳೂರು ಘಟಕದ ಅಧ್ಯಕ್ಷ ವಿನೋದ್ ಪಿಂಟೊ,  ಪಣಂಬೂರು ಕುಳಾಯಿ ಮೊಗವೀರ ಸಭಾದ ಅಧ್ಯಕ್ಷ ಮಾಧವ ಸುವರ್ಣ, ಡಿಸಿಪಿ ಸಿದ್ದಾರ್ಥ ಗೋಯಲ್ ಮುಖ್ಯ ಅತಿಥಿಗಳಾಗಿ ಭಾಗವಹಿಸಿದ್ದರು.


ದ.ಕ.ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷ ಶ್ರೀನಿವಾಸ ನಾಯಕ್ ಇಂದಾಜೆ, ಮಂಗಳೂರು ಪ್ರೆಸ್ ಕ್ಲಬ್ ಅಧ್ಯಕ್ಷ ಪಿ.ಬಿ. ಹರೀಶ್ ರೈ, ಸ್ವಸ್ತಿಕ ನ್ಯಾಷನಲ್ ಬ್ಯುಸಿನೆಸ್ ಸ್ಕೂಲ್ ಅಧ್ಯಕ್ಷ ರಾಘವೇಂದ್ರ ಹೊಳ್ಳ, ಜಿಲ್ಲಾ ರೆಡ್ ಕ್ರಾಸ್ ಸೊಸೈಟಿ ನಿರ್ದೇಶಕ  ಯತೀಶ್ ಬೈಕಂಪಾಡಿ, ಪತ್ರಕರ್ತರ ಸಂಘದ ಕೋಶಾಧಿಕಾರಿ ಪುಷ್ಪರಾಜ್ ಬಿ.ಎನ್, ಕಾರ್ಯಕಾರಿ ಸಮಿತಿ ಸದಸ್ಯ ರಾಜೇಶ್ ದಡ್ಡಂಗಡಿ, ಮೊಗವೀರ ಸಭಾದ ಕಾರ್ಯದರ್ಶಿ ನಾಗೇಶ್ ಪುತ್ರನ್, ಉಪಾಧ್ಯಕ್ಷ ಕೇಶವ ಅಮೀನ್, ಜಗನ್ನಾಥ ಪುತ್ರನ್, ಕೋಶಾಧಿಕಾರಿ ಪುರು ಷೋತ್ತಮ ಕೋಟ್ಯಾನ್, ಸದಸ್ಯರಾದ  ಪಿ.ದೇವೇಂದ್ರ, ರಮೇಶ್, ಕೆ.ಎಲ್. ಬಂಗೇರ, ಯೋಗೀಶ್ ಸಾಲ್ಯಾನ್, ಸ್ವಸ್ತಿಕ ನ್ಯಾಷನಲ್ ಬ್ಯುಸಿನೆಸ್ ಸ್ಕೂಲ್ ನ ಎನ್‌ಎಸ್‌ಎಸ್ ವಿದ್ಯಾರ್ಥಿ ಕಾರ್ಯದರ್ಶಿಗಳಾದ ಸಿಂಧು, ಸುದೀಪ್ ಉಪಸ್ಥಿತರಿದ್ದರು.



ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್‌ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್‌ ಆಗಿ

ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಉಪಯುಕ್ತ ನ್ಯೂಸ್‌ ವಾಟ್ಸಪ್‌  ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ


web counter 

إرسال تعليق

0 تعليقات
إرسال تعليق (0)
To Top