ಸಿದ್ಧಕಟ್ಟೆ: ಬಂಟ್ವಾಳ ತಾಲೂಕು ಸಂಗಬೆಟ್ಟು ಗ್ರಾಮದ ಸಿದ್ದಕಟ್ಟೆ ಸಮೀಪದ ಮಂಜೋಡಿ ನಿವಾಸಿ ದಿವಂಗತ ಗೋಪಾಲ ಮೆಂಡನ್ ಸ್ಮರಣಾರ್ಥ ಅವರ ಮಕ್ಕಳು ತಮ್ಮ ತಂದೆಯ ಸವಿನೆನಪಿಗಾಗಿ ಸಿದ್ದಕಟ್ಟೆ -ವೇಣೂರು ರಸ್ತೆಯ ಮಂಚಕಲ್ಲು ಎಂಬಲ್ಲಿ ನೂತನವಾಗಿ ಬಸ್ಸು ತಂಗುದಾಣ ನಿರ್ಮಿಸಿ ಸಮಾಜಕ್ಕೆ ಅರ್ಪಿಸಿದರು.
ಬಸ್ಸು ತಂಗುದಾಣವನ್ನು ಸಂಗಬೆಟ್ಟು ಗ್ರಾಮ ಪಂಚಾಯತ್ ಉಪಾಧ್ಯಕ್ಷ ಸುರೇಶ ಕುಲಾಲ್ ಉದ್ಘಾಟಿಸಿದರು.
ಕಾರ್ಯಕ್ರಮದಲ್ಲಿ ಸ್ಥಳೀಯ ಗ್ರಾಮ ಪಂಚಾಯತ್ ಸದಸ್ಯ ಸಂದೇಶ್ ಶೆಟ್ಟಿ ಪೋಡುಂಬ, ಸಿದ್ದಕಟ್ಟೆ ಹಾಲು ಉತ್ಪಾದಕ ಸಹಕಾರ ಸಂಘದ ಅಧ್ಯಕ್ಷ ರತ್ನಕುಮಾರ್ ಚೌಟ, ಸಿದ್ದಕಟ್ಟೆ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಅಧ್ಯಕ್ಷ ಪ್ರಭಾಕರ ಪ್ರಭು, ಮಾಜಿ ಗ್ರಾಮ ಪಂಚಾಯತ್ ಅಧ್ಯಕ್ಷ ಶಿವಾನಂದ ರೈ, ಸಿ.ಎ. ಬ್ಯಾಂಕ್ ನಿರ್ದೇಶಕರಾದ ರಾಜೇಶ್ ಶೆಟ್ಟಿ ಕೊನೆರಬೆಟ್ಟು, ಮಂದಾರತಿ ಶೆಟ್ಟಿ, ವೀರಪ್ಪ ಪರವ, ದೇವರಾಜ್ ಸಾಲಿಯನ್, ಮಾಜಿ ನಿರ್ದೇಶಕರಾದ ಸೀತಾರಾಮ ಶೆಟ್ಟಿ, ದಿವಂಗತ ಗೋಪಾಲ ಮೆಂಡನ್ ಮಕ್ಕಳಾದ ಮಹಾಬಲ ಶೆಟ್ಟಿ, ಕುಶಲ ಶೆಟ್ಟಿ, ಲೀಲಾ ಶೆಟ್ಟಿ, ಜಗದೀಶ್ ಶೆಟ್ಟಿ, ಹರಿಣಾಕ್ಷಿ ಶೆಟ್ಟಿ ಹಾಗೂ ಕುಟುಂಬಸ್ಥರು,ಪ್ರಮುಖರಾದ ರತೀಶ್ ಶೆಟ್ಟಿ ಕೊನೆರಬೆಟ್ಟು, ಡಾ!ಶ್ರೀಧರ್ ಶೆಟ್ಟಿ ರತ್ನಾಕರ್ ಶೆಟ್ಟಿ ಹೊಕ್ಕಾಡಿ, ಪುಷ್ಪರಾಜ್ ಶೆಟ್ಟಿ,ಉಮೇಶ್ ಪೂಜಾರಿ ಹಿಂಗಾಣಿ, ಉಪಸ್ಥಿತರಿದ್ದರು. ಗುಣಪಾಲ ಶೆಟ್ಟಿ ಕರ್ಪೆ ಸ್ವಾಗತಿಸಿ ಕಾರ್ಯಕ್ರಮ ನಿರೂಪಿಸಿದರು.
ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್ ಆಗಿ
ಉಪಯುಕ್ತ ನ್ಯೂಸ್’ ಫೇಸ್‌ಬುಕ್ ಪುಟ ಲೈಕ್ ಮಾಡಿ
ಉಪಯುಕ್ತ ನ್ಯೂಸ್ ವಾಟ್ಸಪ್ ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ