ನೆರಳು ಬೆಳಕಿನ ಜೀವನ

Upayuktha
0


ಜೀವನವೆಂದರೇನೇ ಸುಖ ದುಃಖಗಳ ಸಮ್ಮೇಳನ,  ಒಮ್ಮೆ ನೆರಳು ಒಮ್ಮೆ ಬಿಸಿಲು ಅನುಭವಾಗುವ ಹಾಗೆಯೆ ಈ ಸುಖ ದುಃಖಗಳು.. 


ದುಃಖ ಬಂತೆಂದು ಅಳುತ್ತಾ ಕುಳಿತುಕೊಂಡರೆ, ಮುಂದಿನ ಜೀವನ ಎದುರಿಸುವ ಶಕ್ತಿಯೇ ಹೊರಟುಹೋಗುತ್ತದೆ. ಧೈರ್ಯಗೆಡದೆ,  ದುಃಖವನ್ನೂ ಬಾಳಿನ ಒಂದು ಮಗ್ಗುಲು, ಇದು ಕೂಡ ಬದಲಿಸುತ್ತದೆ ಆಶಾಭಾವನೆ ಹೊಂದಿದರೆ, ದುಃಖಗಳು ತಂತಾನೆ ಓಡಿಹೋಗುತ್ತವೆ. ಒಬ್ಬ ವ್ಯಕ್ತಿ ಇಂದು ಎತ್ತರದ ಸ್ಥಾನದಲ್ಲಿದ್ದಾನೆ ಎಂದರೆ, ಅವನು ಮೇಲೇರಲು, ಕಷ್ಟಗಳನ್ನೂ ಎದುರಿಸಿಯೇ ಗೆದ್ದಿರುತ್ತಾನೆ. ಗೆಲುವು ಅಷ್ಟು ಸುಲಭವಾಗಿ ಸಿಗುವ ಮಾತಲ್ಲ.  


ಕಷ್ಟದಲ್ಲಿದ್ದಾಗ, ಮನುಷ್ಯ ತನ್ನ ವಿವೇಚನಾ ಶಕ್ತಿಯ ಸದುಪಯೋಗ ಮಾಡಿಕೊಂಡರೆ, ಸುಖವೂ ದಕ್ಕುತ್ತದೆ. 


ಜೀವನವೇ ಸುಖ ದುಃಖಗಳ 

ರಂಗಿನ ಲೋಕ, 

ಸುಖ ಬಂದಾಗ ಹಿಗ್ಗದೇ, 

ದುಃಖ ಬಂದಾಗ ಕುಗ್ಗದೆ, 

ತನ್ನ ಬಣ್ಣವನ್ನು ಇನ್ನೂ 

ಮೆರಗುಗೊಳಿಸಿದವನೇ 

ನಿಜವಾದ ಜಾಣ 

ಅವನೇ ಸದುಪಯೋಗ 

ಪಡಿಸಿಕೊಳ್ಳುವನು 

ದುಃಖಗಳ ಹೂರಣ 


ಎಲ್ಲರ ಬಾಳಿನಲ್ಲೂ ಸುಖ ದುಃಖಗಳ ಮಿಶ್ರಣವಿದೆ. ಅವನ್ನು ಸಮನಾಗಿ ಸ್ವೀಕರಿಸಿ ಮುಂದುವರಿದರೆ ಜೀವನ ಸಂತೋಷಭರಿತವಾಗುತ್ತದೆ.


- ರೇಖಾ ಮುತಾಲಿಕ್


ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್‌ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್‌ ಆಗಿ

ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಉಪಯುಕ್ತ ನ್ಯೂಸ್‌ ವಾಟ್ಸಪ್‌  ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ


web counter 

إرسال تعليق

0 تعليقات
إرسال تعليق (0)
Mandovi Motors Presents MONSOON BONANZA
Mandovi Motors Presents MONSOON BONANZA
To Top