ಸಂಗೀತ ಸಾಧಕ ವಿದ್ವಾನ್ ಎಸ್ ಆರ್ ಕೃಷ್ಣಮೂರ್ತಿ ಅವರಿಗೆ 'ಸಕ್ಷಮ' ಸನ್ಮಾನ

Upayuktha
0


ಮಂಗಳೂರು: ಸಕ್ಷಮ ದಕ್ಷಿಣ ಕನ್ನಡ ಜಿಲ್ಲಾ ಘಟಕದಿಂದ ಶುಕ್ರವಾರ, ಮಹಾನ್ ಸಂಗೀತ ಸಾಧಕ ವಿದ್ವಾನ್ ಎಸ್ ಆರ್ ಕೃಷ್ಣಮೂರ್ತಿ ಅವರು ತಮ್ಮ ದಿವ್ಯಾಂಗತೆಯನ್ನು ಮೆಟ್ಟಿ ನಿಂತು, ಕರ್ನಾಟಕ ಸಂಗೀತ ಕ್ಷೇತ್ರಕ್ಕೆ ಸಲ್ಲಿಸುತ್ತಿರುವ ಮಹಾನ್ ಸೇವೆಯನ್ನು ಗುರುತಿಸಿ ಗೌರವಿಸಲಾಯಿತು.


ವಿದ್ವಾನ್ ಎಸ್ ಆರ್ ಕೃಷ್ಣಮೂರ್ತಿಯವರು ಮೂಲತಃ ತಮಿಳುನಾಡಿನ ಕೊಯಂಬತ್ತೂರ್ ನಿವಾಸಿ, ಹುಟ್ಟಿನಿಂದಲೇ ದಿವ್ಯಾಂಗರು. ವಯಸ್ಸು 79 ವರ್ಷ, ಬಾಲ್ಯದಿಂದಲೇ ಸಂಗೀತದಲ್ಲಿ ಆಸಕ್ತಿಯುಳ್ಳವ ರಾಗಿದ್ದ ಇವರು ಹತ್ತು ಹಲವು ರಾಜ್ಯ ಮತ್ತು ರಾಷ್ಟ್ರಮಟ್ಟದ ಪ್ರಶಸ್ತಿಗೆ ಭಾಜನರಾಗಿದ್ದಾರೆ. ಇವರ ವಿಶೇಷ ಹೆಗ್ಗಳಿಕೆ ರಾಷ್ಟ್ರಪತಿ ಎಪಿಜೆ ಅಬ್ದುಲ್ ಕಲಾಂ ರವರು ತಮ್ಮ ಆಡಳಿತದ ಅವಧಿಯಲ್ಲಿ ಇವರನ್ನು ರಾಷ್ಟ್ರಪತಿ ಭವನಕ್ಕೆ ಆಹ್ವಾನಿಸಿ ಸಂಗೀತ ಕಾರ್ಯಕ್ರಮವನ್ನು ಏರ್ಪಡಿಸಿದ್ದರು.


ಎಸ್ ಆರ್ ಕೃಷ್ಣಮೂರ್ತಿಯವರು ತಮ್ಮ ಅಭಿನಯದ ಸಾಮರ್ಥ್ಯವನ್ನು ಪ್ರಸಿದ್ಧ ತಮಿಳು ಚಲನಚಿತ್ರ ನಾನು ಕಡವುಲ್ ಮೂಲಕ ಸಮಾಜಕ್ಕೆ ತೋರಿಸಿಕೊಟ್ಟಿದ್ದಾರೆ. ಇವರು ಆಕಾಶವಾಣಿಯ ಕರ್ನಾಟಕ ಸಂಗೀತದ ಎ ಗ್ರೇಡ್ ಕಲಾವಿದರಾಗಿರುತ್ತಾರೆ. ರಾಷ್ಟ್ರಪತಿ ಅಬ್ದುಲ್ ಕಲಾಂ ರವರು ಕೂಡ ಇವರಿಂದ ಪ್ರಭಾವಿತರಾದವರು ಎಂದು ತಮ್ಮ ಸಂದರ್ಶನ ಒಂದರಲ್ಲಿ ತಿಳಿಸಿದ್ದಾರೆ.


ಇವರು ತಮ್ಮೆಲ್ಲ ದಿನಚರಿಯನ್ನು ಯಾರೊಬ್ಬರ ಸಹಾಯವಿಲ್ಲದೆ ನಿರ್ವಹಿಸುವುದರೊಂದಿಗೆ ಅಭೂತಪೂರ್ವ ಚಿತ್ರಕಲಾ ಪ್ರವೀಣರಾಗಿದ್ದಾರೆ. ಅವರ ಜೀವನ ಸಾಧನೆಗಳು, ಮನುಷ್ಯನಿಗೆ ಮನಸ್ಸಿದ್ದರೆ ಏನನ್ನು ಸಾಧಿಸಭಲ್ಲ ಎಂದು ಸಾರಿ ಹೇಳುತ್ತಿದೆ. ಇವರು ಸಮಾಜಕ್ಕೆ ಸ್ಪೂರ್ತಿಯ ಚಿಲುಮೆಯಾಗಿದ್ದಾರೆ.  ಗೌರವ ಸಮರ್ಪಣಾ ಸಂದರ್ಭದಲ್ಲಿ ಸಕ್ಷಮ ದಕ್ಷಿಣ ಕನ್ನಡ ಜಿಲ್ಲೆಯ ಅಧ್ಯಕ್ಷ ರಾಜಶೇಖರ್ ಭಟ್ ಕಾಕುಂಜೆ, ಕಾರ್ಯದರ್ಶಿ ಹರೀಶ್ ಪ್ರಭು, ಸಹ ಕಾರ್ಯದರ್ಶಿ ಭಾಸ್ಕರ್ ಹೊಸಮನೆ, ಖಜಾಂಚಿ ಸತೀಶ್ ರಾವ್, ಮತ್ತು ಸದಸ್ಯರಾದ ಶ್ರೀಮತಿ ಶ್ಯಾಮಲ ಭಟ್ ಕಾಕುಂಜೆ, ಶ್ರೀಮತಿ ಗೀತಾ ಲಕ್ಷ್ಮೀಶ್, ಕುಮಾರಿ ಅನುಷಾ ಭಟ್ ಕಾಕುಂಜೆ ಉಪಸ್ಥಿತರಿದ್ದರು.


ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್‌ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್‌ ಆಗಿ

ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಉಪಯುಕ್ತ ನ್ಯೂಸ್‌ ವಾಟ್ಸಪ್‌  ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ


web counter 

إرسال تعليق

0 تعليقات
إرسال تعليق (0)
Mandovi Motors Presents MONSOON BONANZA
Mandovi Motors Presents MONSOON BONANZA
To Top