ಪುತ್ತೂರು: ದೆಹಲಿಯ ಗಣರಾಜ್ಯೋತ್ಸವ ಪರೇಡ್ ನ ಪ್ರಯುಕ್ತ ಬಳ್ಳಾರಿಯಲ್ಲಿ ಆಯೋಜಿಸಿದ ಇಂಟರ್ ಗ್ರೂಪ್ ಸ್ಪರ್ಧೆಯಲ್ಲಿ ಇಲ್ಲಿನ ವಿವೇಕಾನಂದ ಕಲಾ,ವಿಜ್ಞಾನ ಮತ್ತು ವಾಣಿಜ್ಯ ಮಹಾವಿದ್ಯಾಲಯ (ಸ್ವಾಯತ್ತ)ದ ಎನ್.ಸಿ.ಸಿ ಘಟಕದ ವಿದ್ಯಾರ್ಥಿಗಳಾದ ಜೆಯುಒ ಲಹರಿ, ಜೆಯುಒ ಸುಜಿತ್, ಸಿಪಿಎಲ್ ದರ್ಷಿಣಿ, ಎಲ್‍ಸಿಪಿಎಲ್ ಶುಭದ ಆರ್ ಪ್ರಕಾಶ್, ಕೆಡೆಟ್ ಆದಿತ್ಯ ಎ.ಐ, ಕೆಡೆಟ್ ಪ್ರಜ್ವಲ್ ಎಸ್.ಕೆ. ಸಾಂಸ್ಕೃತಿಕ ಹಾಗೂ ಕರ್ತವ್ಯಪಥ್‍ನಲ್ಲಿ ಪಾಲ್ಗೊಂಡಿದ್ದಾರೆ.
ಸತತ ಐದು ವರ್ಷಗಳಿಂದ ಕರ್ನಾಟಕ ಮತ್ತು ಗೋವಾ ಡೈರೆಕ್ಟರೇಟ್ ನಲ್ಲಿ ಮಂಗಳೂರು ಗ್ರೂಪ್ ಚಾಂಪಿಯನ್ ಶೀಪ್ ಪಡೆದುಕೊಂಡಿದೆ. ಇದೀಗ ದೆಹಲಿಯ ಗಣರಾಜ್ಯೋತ್ಸವ ಪರೇಡ್ ನ ಮುಂದಿನ ಹಂತದ ಆರ್‍ಡಿಸಿ 1 ಕ್ಯಾಂಪ್ ಬೆಂಗಳೂರಿನಲ್ಲಿ ಪ್ರಾರಂಭವಾಗಿದ್ದು ಇದಕ್ಕೆ ಆಯ್ಕೆಯಾದ ಜೆಯುಒ ಲಹರಿ, ಎಲ್‍ಸಿಪಿಎಲ್ ಶುಭದ ಆರ್ ಪ್ರಕಾಶ್ ಮತ್ತು ಕೆಡೆಟ್ ಪ್ರಜ್ವಲ್ ಎಸ್.ಕೆ ಆಯ್ಕೆಯಾಗಿರುತ್ತಾರೆ.
ಇವರಿಗೆ ಕಾಲೇಜಿನ ಎನ್‍ಸಿಸಿ ಘಟಕದ ಅಧಿಕಾರಿ ಲೆ.ಭಾಮಿ ಅತುಲ್ ಶೆಣೈ ತರಬೇತಿ ನೀಡಿರುತ್ತಾರೆ. ಕಾಲೇಜಿನ ಪ್ರಾಂಶುಪಾಲ ಪ್ರೊ.ವಿಷ್ಣು ಗಣಪತಿ ಭಟ್ ಮತ್ತು ಎನ್‍ಸಿಸಿ ಘಟಕ, ಆಡಳಿತ ಮಂಡಳಿ, ಐಕ್ಯೂಎಸಿ ಘಟಕ, ಉಪನ್ಯಾಸಕ ಮತ್ತು ಉಪನ್ಯಾಸಕೇತರ ವೃಂದ ವಿದ್ಯಾರ್ಥಿಗಳಿಗೆ ಶುಭಹಾರೈಸಿದ್ದಾರೆ.
ನಿರಂತರ ಅಪ್ಡೇಟ್ಗಳಿಗಾಗಿ ಉಪಯುಕ್ತ ನ್ಯೂಸ್ ಟೆಲಿಗ್ರಾಂ ಚಾನೆಲ್ಗೆ ಜಾಯಿನ್ ಆಗಿ
ಉಪಯುಕ್ತ ನ್ಯೂಸ್’ ಫೇಸ್ಬುಕ್ ಪುಟ ಲೈಕ್ ಮಾಡಿ
ಉಪಯುಕ್ತ ನ್ಯೂಸ್ ವಾಟ್ಸಪ್ ಗ್ರೂಪ್ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ