ಪುತ್ತೂರಿನಲ್ಲಿ ಡಿ.29 ರಂದು ಅಂತರ್ ಜಿಲ್ಲಾ ಮಟ್ಟದ ಚೆಸ್ ಸ್ಪರ್ಧೆ

Upayuktha
0





ಪುತ್ತೂರು: ವಿವೇಕಾನಂದ ಮಹಾವಿದ್ಯಾಲಯ (ಸ್ವಾಯತ್ತ ) ಪುತ್ತೂರು, ಮತ್ತು ದಕ್ಷಿಣ ಕನ್ನಡ ಜಿಲ್ಲಾ ಚೆಸ್   ಅಸೋಸಿಯೇಷನ್ ಇದರ ಆಶ್ರಯದಲ್ಲಿ ಐದನೇ ಅಂತರ್ ಜಿಲ್ಲಾ ಮಟ್ಟದ ಚೆಸ್ ಸ್ಪರ್ಧೆಯು ದಿನಾಂಕ 29.12.2024ರಂದು ಸಂಸ್ಥೆಯ ಕೇಶವ ಸಂಕಲ್ಪ ಸಭಾಭವನದಲ್ಲಿ ನಡೆಯಲಿದೆ. ಮುಕ್ತ ವಿಭಾಗ ಮತ್ತು ವಯೋಮಿತಿ ವಿಭಾಗದಲ್ಲಿ ಪ್ರತ್ಯೇಕವಾಗಿ ಸ್ಪರ್ಧೆ ನಡೆಯಲಿದೆ .ಪ್ರವೇಶ ಶುಲ್ಕ 700  ರೂ, (ಮುಕ್ತ ವಿಭಾಗ) ಮತ್ತು 600 ರೂ, (ವಯೋಮಿತಿ ವಿಭಾಗ) ಇರುತ್ತದೆ.


ಮುಕ್ತ ವಿಭಾಗದಲ್ಲಿ ಪ್ರಥಮ ಬಹುಮಾನ ರೂ 5000 ಮತ್ತು ಟ್ರೋಫಿ , ಎರಡನೇ ಬಹುಮಾನ ರೂ 4,000 ಮತ್ತು ಟ್ರೋಫಿ , ಹಾಗೂ ಮೂರನೆಯ ಬಹುಮಾನ ರೂ 3000 ಮತ್ತು ಟ್ರೋಫಿ, ಅದಲ್ಲದೆ 4,5 ,6 ಮತ್ತು 7ನೇ ಸ್ಥಾನ ಪಡೆದವರಿಗೆ ನಗದು ಬಹುಮಾನವಿರುತ್ತದೆ.


ಉತ್ತಮ ಹಿರಿಯ ಆಟಗಾರ ಮತ್ತು ಉತ್ತಮ ಮಹಿಳಾ ಆಟಗಾರರಿಗೆ ನಗದು ಬಹುಮಾನವಿರುತ್ತದೆ. ವಯೋಮಿತಿ ವಿಭಾಗದಲ್ಲಿ 7,9,11,13 ಮತ್ತು 15 ವರ್ಷ ವಿಭಾಗದಲ್ಲಿ ಸ್ಪರ್ಧೆ ಇರಲಿದ್ದು ಹುಡುಗರಿಗೆ 10 ಟ್ರೋಫಿ ಮತ್ತು ಹುಡುಗಿಯರಿಗೆ 7 ಟ್ರೋಫಿ ಇರುತ್ತದೆ. ಭಾಗವಹಿಸಲು ಇಚ್ಛಿಸುವವರು ದಿನಾಂಕ 28ರ ಒಳಗಾಗಿ ಹೆಸರನ್ನು www.criclechess.com ನಲ್ಲಿ ನೊಂದಾಯಿಸಬೇಕಾಗಿ   ಎಂದು ಸಂಸ್ಥೆಯು ಪ್ರಕಟಣೆಯಲ್ಲಿ ತಿಳಿಸಿದೆ.


  ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್‌ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್‌ ಆಗಿ

ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಉಪಯುಕ್ತ ನ್ಯೂಸ್‌ ವಾಟ್ಸಪ್‌  ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ


web counter 

Post a Comment

0 Comments
Post a Comment (0)
Mandovi Motors Presents MONSOON BONANZA
Mandovi Motors Presents MONSOON BONANZA
To Top