ಕ್ರಿಸ್‌ಮಸ್ ಸಂಭ್ರಮಕ್ಕೆ ಪೋಲಾರ್ ಎಕ್ಸ್ ಪ್ಲೋರರ್

Upayuktha
0


ಮಂಗಳೂರು: ಫಿಜಾ ಬೈ ನೆಕ್ಸಸ್ ಮಾಲ್‍ನಲ್ಲಿ ಕ್ರಿಸ್‍ಮಸ್ ಸಂಭ್ರಮದೊಂದಿಗೆ ಚಳಿಗಾಲದ ಸ್ವರ್ಗ 'ಪೋಲಾರ್ ಎಕ್ಸ್ ಪ್ಲೋರರ್'  ವರ್ಚುವಲ್ ರಿಯಾಲಿಟಿ ಅನ್ವೇಷಣೆಯಲ್ಲಿ ಪಾಲ್ಗೊಳ್ಳಲು ಉತ್ಸಾಹಿಗಳಿಗೆ ಅವಕಾಶ ಕಲ್ಪಿಸಲಾಗಿದೆ. ವರ್ಷಾಂತ್ಯದವರೆಗೂ ಈ ಸೌಲಭ್ಯ ಇರುತ್ತದೆ.


ಈ ಆಕ್ರ್ಟಿಕ್ ಸಾಹಸ ಚಟುವಟಿಕೆ ಎಲ್ಲ ವಯಸ್ಸಿನವರಿಗೂ ಕುಟುಂಬದೊಂದಿಗೆ ಸಮಯ ಕಳೆಯಲು ಅವಕಾಶ, ಮೋಜು ಮತ್ತು ಆಕರ್ಷಕ ನೆನಪುಗಳನ್ನು ನೀಡಲಿದೆ. ಮಂಜುಗಡ್ಡೆಯ ಹೊಳೆಯುವ ಶಿಲ್ಪಗಳನ್ನು ಒಳಗೊಂಡಿರುವ ಹಿಮದಿಂದ ಆವೃತವಾದ ಪ್ರದೇಶ, ಹಬ್ಬದ ಸಂಭ್ರಮ ಹೆಚ್ಚಿಸುವ ಅಲಂಕಾರಗಳಿಂದ ಸುತ್ತುವರಿದ ಮನೆಗಳು ಮತ್ತು ಉತ್ತರದ ಅತ್ಯಾಕರ್ಷಕ ದೀಪಗಳಿಂದ ಪ್ರೇರಿತವಾದ ರೋಮಾಂಚಕ ಬಣ್ಣಗಳ ದೀಪಗಳು ಇವು ಆಕ್ರ್ಟಿಕ್ ಅನುಭವ ನೀಡುವ ಕೆಲವು ಬೆರಗುಗೊಳಿಸುವ ಪ್ರಮುಖ ಅಂಶಗಳಾಗಿವೆ ಎಂದು ಪ್ರಕಟಣೆ ಹೇಳಿದೆ.


ಫೈಂಡ್ ಮೈ ಬೇಬಿ ಪೆಂಗ್ವಿನ್ ಹಂಟ್ಸ್, ಸ್ನೋಮ್ಯಾನ್ ಬೌಲಿಂಗ್, ಸಾಂತಾ ಕ್ಲಾಸ್ ಮತ್ತು ಮೆರ್ರಿ ಸಹಾಯಕರನ್ನು ಭೇಟಿ ಮಾಡಿ ಮತ್ತು ಶುಭಾಶಯ ಕೋರುವುದು, ಹಿಮಪಾತದ ಅನುಭವ, ವಿಆರ್ ವಲಯದಲ್ಲಿ ಆಕ್ರ್ಟಿಕ್ ವಿಆರ್ ಸಾಹಸ ಮತ್ತು ಇತರ ಕೆಲವು ಚಟುವಟಿಕೆಗಳ ಅನುಭವ ಪಡೆಯಬಹುದಾಗಿದೆ.


ಮಾಲ್‌ನಲ್ಲಿ ಬಹುನಿರೀಕ್ಷಿತ ಸಾಂತಾ ಪೆರೇಡ್ ಡಿಸೆಂಬರ್ 24-25 ರಂದು ನಡೆಯಲಿದೆ. ಡಿಸೆಂಬರ್ 27-29 ರ ನಡುವೆ ಹಬ್ಬದ ಉತ್ಸಾಹವನ್ನು ಹೆಚ್ಚಿಸಲು ಸಂಗೀತ, ಅತ್ಯಾಕರ್ಷಕ ಆಟಗಳು ಮತ್ತು ರುಚಿಕರವಾದ ಆಹಾರ ಮಳಿಗೆಗಳನ್ನು ಒಳಗೊಂಡ ಹಬ್ಬದ ಆಚರಣೆಯಾದ 'ಕ್ರಿಸ್ಮಸ್ ಫನ್ ಫಿಯೆಸ್ಟಾ' ನಡೆಯಲಿದೆ. 'ಸ್ಪೆಶಲ್ ವಿಂಟರ್ ಫ್ಲೀ ಮಾರ್ಕೆಟ್' ಆಚರಣೆಯ ಒಂದು ಭಾಗವಾಗಿರುತ್ತದೆ ಎಂದು ಪ್ರಕಟಣೆ ವಿವರಿಸಿದೆ.


ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್‌ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್‌ ಆಗಿ

ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಉಪಯುಕ್ತ ನ್ಯೂಸ್‌ ವಾಟ್ಸಪ್‌  ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ


web counter 

Post a Comment

0 Comments
Post a Comment (0)
Mandovi Motors Presents MONSOON BONANZA
Mandovi Motors Presents MONSOON BONANZA
To Top