ಫಿಲೋಮಿನಾ ಪ.ಪೂ ಕಾಲೇಜು - ವಾಣಿಜ್ಯ ಶಾಸ್ತ್ರ ವಿಭಾಗ - ಕೈಗಾರಿಕಾ ಘಟಕಕ್ಕೆ ಭೇಟಿ

Chandrashekhara Kulamarva
0


ಪುತ್ತೂರು: ಇಲ್ಲಿನ ಪುರುಷರ ಕಟ್ಟೆಯಲ್ಲಿರುವ ಪ್ರತಿಷ್ಠಿತ ಬಿಂದು ಫ್ಯಾಕ್ಟರಿ ಮತ್ತು 'ನಿತ್ಯ' ಆಹಾರ ಉತ್ಪನ್ನ ಘಟಕಕ್ಕೆ ನ.23 ರಂದು ಸಂತ ಫಿಲೋಮಿನಾ ಪ. ಪೂ ಕಾಲೇಜಿನ ವಾಣಿಜ್ಯ ಶಾಸ್ತ್ರ ವಿಭಾಗದ ವಿದ್ಯಾರ್ಥಿಗಳು ಭೇಟಿ ನೀಡಿದರು.


ಅವರನ್ನು ಸಂಸ್ಥೆಯ ಮ್ಯಾನೇಜರ್ ಆಗಿರುವ ಸುರೇಶ್ ಭಟ್ ಸ್ವಾಗತಿಸಿ, ಮಾತನಾಡಿ ಬಿಂದು ಪ್ಯಾಕೇಜ್ ಡ್ರಿಂಕಿಂಗ್ ವಾಟರ್, ಪಿಝ್ ಜೀರಾ ಮಸಾಲ, ಸಿಪ್ ಆನ್ ಉತ್ಪನ್ನಗಳ ಮೂಲಕ ದಕ್ಷಿಣ ಭಾರತದ ಮಾರುಕಟ್ಟೆಯಲ್ಲಿ ಅಧಿಪತ್ಯ ಹೊಂದಿರುವ ಬಿಂದು ಕಂಪನಿ ಸ್ಟಾಕ್ ಅಪ್ ಉತ್ತನಗಳ ಕುರಿತು ಮಾಹಿತಿಯನ್ನು ನೀಡಿದರು.  


ಪ್ರತಿಷ್ಠಿತ ಎಸ್‌.ಜಿ ಕಾರ್ಪೊರೇಟ್ಸ್ ಸಂಸ್ಥೆಯ ಎಂ.ಡಿ ಸತ್ಯಶಂಕರ್  ಭಟ್ ರವರು ಗ್ರಾಮೀಣ ಕನ್ನಡಿಗರಿಗೆ ಸಾವಿರಾರು ಸಂಖ್ಯೆಯಲ್ಲಿ ಉದ್ಯೋಗ ನೀಡಿದ್ದಾರೆ. ಎಸ್‌.ಜಿ ಗ್ರೂಪ್‌ ಕಂಪನಿಗಳಲ್ಲಿ 2,000 ಮಂದಿ ನೇರ ಉದ್ಯೋಗದಲ್ಲಿದ್ದರೆ, 10,000ಕ್ಕೂ ಅಧಿಕ ಮಂದಿ ಪರೋಕ್ಷ ಉದ್ಯೋಗ ಪಡೆದಿದ್ದಾರೆ ಎಂದು ಹೇಳಿದರು.


ಬಳಿಕ ಆಹಾರ ಉತ್ಪನ್ನ  ಘಟಕ 'ನಿತ್ಯ' ಕ್ಕೆ ಭೇಟಿ ನೀಡಿದ ವಿದ್ಯಾರ್ಥಿಗಳು ಅಲ್ಲಿನ ಕಾರ್ಯವೈಖರಿಯ  ಬಗ್ಗೆ ತಿಳಿದುಕೊಂಡರು. ಮ್ಯಾನೇಜರ್  ರಾಧಾಕೃಷ್ಣಗೌಡರು  ಉತ್ಪನ್ನಗಳ ಬಗ್ಗೆ ಮಾಹಿತಿಯನ್ನು ನೀಡಿದರು.


ಈ ಸಂದರ್ಭ ಕಾಲೇಜಿನ ವಾಣಿಜ್ಯ ಶಾಸ್ತ್ರ ವಿಭಾಗದ ವಿದ್ಯಾರ್ಥಿಗಳು ಹಾಗೂ ಬೋಧಕ ವರ್ಗದವರು ಉಪಸ್ಥಿತರಿದ್ದರು .


   ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್‌ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್‌ ಆಗಿ

ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಉಪಯುಕ್ತ ನ್ಯೂಸ್‌ ವಾಟ್ಸಪ್‌  ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ


web counter  

Post a Comment

0 Comments
Post a Comment (0)
To Top