Perfection- ಪರಿಪೂರ್ಣತೆಯೆಡೆಗೆ ಪಯಣ

Upayuktha
0


Perfection is just a conception; but treading towards itself is the way of Life...!


ಪರಿಪೂರ್ಣತೆ ಎಂಬುದು, ಒಂದು ಗ್ರಹಿಕೆ ಮಾತ್ರ ಆಗಿರುತ್ತದೆ. ಆದರೆ ಅದರೆಡೆಗೆ ಸಾಗುತ್ತಿರುವುದು ಮಾತ್ರ ಜೀವನಮಾರ್ಗ ಆಗಿರುತ್ತದೆ. 


ಈ ಮಾರ್ಗದಲ್ಲಿ ಸಾಗುತ್ತಿರುವಂತೆಯೇ, ಒಂದು ಹಂತದಲ್ಲಿ ಪರಿಪೂರ್ಣತೆ ಎಂಬುದು ದೃಗ್ಗೋಚರವಾಗಿ, ನಂತರ ಅದರೆಡೆಗೆ ಸಾಗುವ ಮಾರ್ಗ ಅದೃಶ್ಯವಾಗಿ, ಮಾರ್ಗವಿಲ್ಲದೇ ಮಾರ್ಗಶೂನ್ಯವಾಗಿ, ಎಲ್ಲೆಡೆಗೆ ಪರಿಪೂರ್ಣತೆಯೇ ಅನುಭವಗಮ್ಯವಾಗುತ್ತದೆ, ಪರಿಪೂರ್ಣತೆ ಎಂಬುದು ಮಾರ್ಗರಹಿತ ಸತ್ಯವಾಗಿ ಪರಿಣಮಿಸುತ್ತದೆ, ಎಲ್ಲೆಡೆಗೂ ಅದೇ ಗೋಚರವಾಗುತ್ತದೆ, ಅಪೂರ್ಣತೆ ಎಂಬುದು ಆಗ ಮಾಯೆಯಾಗಿ ತೋರುತ್ತದೆ. ಹೀಗಾಗಿ ಅಪೂರ್ಣದ ಅನುಭವದಲ್ಲೂ ಪೂರ್ಣತೆಯೇ ತೋರತೊಡಗುತ್ತದೆ. ಸರ್ವತ್ರ, ಸರ್ವದಲ್ಲೂ ಪೂರ್ಣತೆಯೇ ಪೂರ್ಣತೆ...!


ಭಗವಂತ, ಅವನ ಸೃಷ್ಟಿ, ಅವನ ಪ್ರೇಮ-ಭಕ್ತಿ ಭಾವ, ಎಲ್ಲದರಲ್ಲೂ ಪರಿಪೂರ್ಣತೆಯೇ. ಪರಿ ಎಂದರೆ ಸುತ್ತಿಕೊಂಡಿರುವುದು. ಹೀಗಾಗಿ ಪರಿ-ಪೂರ್ಣತೆ ಎಂದರೆ ಪೂರ್ಣತೆಯನ್ನು ಸುತ್ತಿಕೊಂಡಿರುವುದು, ಆವರಿಸಿಕೊಂಡಿರುವುದು. ಈ ಸುತ್ತಿಕೊಂಡಿರುವುದನ್ನು, ಆವರಿಸಿಕೊಂಡಿರುವುದನ್ನು ತೆಗೆದಾಗ ಪೂರ್ಣತೆ ದೊರೆಯುತ್ತದೆ, ಆವರಣದಲ್ಲೂ ಸಹ ಅದು ಗೋಚರವಾಗುತ್ತದೆ, ಗೋಚರಕ್ಕೆ ಅನುಭವಗೊಳ್ಳುವ ವ್ಯಕ್ತಿ ಸಮೇತವಾಗಿ. ಹೀಗಾಗಿ ಸಾಧ್ಯ, ಸಾಧನೆ, ಸಾಧಕ ಎಲ್ಲವೂ ಏಕತ್ರವಾಗಿ ಪರಿಪೂರ್ಣತೆಯೇ ಎಲ್ಲೆಡೆಗೆ ಆವರಿಸಿಕೊಂಡಿರುವುದು ಕಂಡುಬರುತ್ತದೆ. ಅಂತೆಯೇ ನಮ್ಮ ಪೂರ್ವಿಕರು,

ಪೂರ್ಣಮದಃ, ಪೂರ್ಣಮಿದಂ, ಪೂರ್ಣಾತ್ ಪೂರ್ಣಮುದಚ್ಯತೆ; ಪೂರ್ಣಸ್ಯ ಪೂರ್ಣಮಾದಾಯ, ಪೂರ್ಣಮೇವಾವಶಿಷ್ಯತೆ ಎಂದು ಉದ್ಘೋಷಿಸಿರುವುದು ನಿಜವೆಂದು ಕಂಡುಬರುತ್ತದೆ. ಇದನ್ನು ನಾವೆಲ್ಲ ನಿಧಾನವಾಗಿ ಪರ್ಯಾವಲೋಚಿಸಿ, ಗ್ರಹಿಸಬೇಕಾಗಿದೆ.


- ಕುರಾಜನ್.


ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್‌ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್‌ ಆಗಿ

ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಉಪಯುಕ್ತ ನ್ಯೂಸ್‌ ವಾಟ್ಸಪ್‌  ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ


web counter 

Post a Comment

0 Comments
Post a Comment (0)
Mandovi Motors Presents MONSOON BONANZA
Mandovi Motors Presents MONSOON BONANZA
To Top