ಸುಬ್ರಹ್ಮಣ್ಯ ಷಷ್ಠೀ ದಿನ ನಾಲ್ಕೂ ಸ್ಕಂದಾಲಯಗಳಿಗೆ ಪೇಜಾವರ ಶ್ರೀಗಳ ಭೇಟಿ

Upayuktha
0

 ಶ್ರೀ ವಿಶ್ವಪ್ರಸನ್ನತೀರ್ಥ ಶ್ರೀಪಾದರ ಅನನ್ಯತೆಯ ಒಂದು ಝಲಕ್




ರ್ಷಪೂರ್ತಿ ಬ್ಯುಸಿ ಬ್ಯುಸಿ ಬ್ಯುಸಿ... ಇನ್ಯಾವ ಯತಿಗಳೂ ಇಲ್ಲದಷ್ಟು ದೇಶ ಸಂಚಾರ, ಧರ್ಮ ಜಾಗೃತಿಯ ಕಾರ್ಯ, ಶ್ರೀಮಠದ ಕಾರ್ಯಭಾರ ನೂರಾರು ಸಂಸ್ಥೆಗಳ ನಿರ್ವಹಣೆಯ ಜವಾಬ್ದಾರಿ, ಯತಿವಿಹಿತವಾದ ನಿತ್ಯಕರ್ಮಾನುಷ್ಠಾನಗಳು, ಅಧ್ಯಯನ ಅಧ್ಯಾಪನಗಳು ಹೀಗೆ ನಿತ್ಯನಿರಂತರ ಅನೇಕ ಕಾರ್ಯಕ್ರಮಗಳಲ್ಲಿ ನಿರತರಾಗಿರುವವರು ಶ್ರೀ ಪೇಜಾವರ ಶ್ರೀ ವಿಶ್ವಪ್ರಸನ್ನ ತೀರ್ಥ ಶ್ರೀಪಾದರು.


ಆದರೂ ಈ ನಡುವೆಯೂ ಕೆಲವು ಕಾರ್ಯಕ್ರಮಗಳನ್ನು ಅತೀ ಅವಶ್ಯ ಕರ್ತವ್ಯವೆಂಬಂತೆ ಶ್ರೀಗಳು ನಡೆಸಿಕೊಂಡು ಬರೋದು ಅಚ್ಚರಿಯ ಸಂಗತಿ. ಅದೇ ಶ್ರೀಗಳ ಅನನ್ಯತೆಯೂ...!! ಅವುಗಳಲ್ಲಿ ಉಲ್ಲೇಖಿಸಬಹುದಾದ ಕೆಲವು ಇಲ್ಲಿವೆ:


ಕಳೆದ ಎಂಟು ವರ್ಷಗಳಿಂದ ವರ್ಷಕ್ಕೊಂದು ದಿನ ನೂರಾರು ಭಕ್ತರೊಂದಿಗೆ ಉಡುಪಿಯಿಂದ ನೀಲಾವರ ಗೋಶಾಲೆಗೆ ಪಾದಯಾತ್ರೆ.


ಶರನ್ನವರಾತ್ರಿಯ ಪರ್ವಕಾಲದಲ್ಲಿ ಉಡುಪಿಯ ಶ್ರೀ ಅನಂತೇಶ್ವರ ದೇವಳಕ್ಕೆ ಸಂಬಂಧಿಸಿದ ಉಡುಪಿಯ ಪ್ರಾಚೀನ ನಾಲ್ಕು ದುರ್ಗಾಲಯಗಳೂ ಸೇರಿದಂತೆ ಆಸುಪಾಸಿನ ಹಲವು ದುರ್ಗಾ ಸನ್ನಿಧಿಯ ಸಂದರ್ಶನ.


ಸುಬ್ರಹ್ಮಣ್ಯ ಷಷ್ಠೀ ಸಂದರ್ಭದಲ್ಲಿ ಉಡುಪಿಯ ಶ್ರೀ ಮದನಂತೇಶ್ವರ ದೇವಳಕ್ಕೆ ಸಂಬಂಧಿಸಿದ ನಾಲ್ಕು ಸ್ಕಂದಾಲಯಗಳೂ ಸೇರಿದಂತೆ ಕೆಲವು ಸುಬ್ರಹ್ಮಣ್ಯ ದೇವಸ್ಥಾನಗಳ ಸಂದರ್ಶನ.


ಗಮನಿಸಬೇಕಾದ ಸಂಗತಿ ಎಂದರೆ ಇವೆಲ್ಲ ಶ್ರೀಗಳು ಭೇಟಿ ಕೊಡಲೇ ಬೇಕಾದ ಅನಿವಾರ್ಯತೆಗಳೇನಿಲ್ಲ. ಅಲ್ಲದೇ ಈ ದೇವಳಕ್ಕೆ ಸಂಬಂಧಿಸಿದವರು ತಮಗೆ ಆಮಂತ್ರಣ ನೀಡಲೇಬೇಕೆಂಬ ಹಮ್ಮಿನ ಧೋರಣೆಯೂ ಇಲ್ಲ. ತಾವೇ ತಾವಾಗಿ ತಮ್ಮ ಅವಶ್ಯ ಕರ್ತವ್ಯ ಎಂಬಂತೆ ಕಳೆದ ಅನೇಕ ವರ್ಷಗಳಿಂದ ತಪ್ಪದೆ ನಡೆಸುತ್ತಿರುವ ಶ್ರೀಗಳು ಆ ದೇವಳಗಳ ಆಡಳಿತ ಮಂಡಳಿಗೆ, ನೂರಾರು ಭಕ್ತ ಸಮುದಾಯಕ್ಕೆ ಸ್ಫೂರ್ತಿ ಪ್ರೋತ್ಸಾಹ ನೀಡುತ್ತಿರುವುದು ಉಲ್ಲೇಖನಿಯ.


ಕೆಲವು ಸಲ ನಾಲ್ಕೂ ಸ್ಕಂದಾಲಯಗಳಿಗೆ ಸುಬ್ರಹ್ಮಣ್ಯ ಷಷ್ಟೀ ದಿನ ಶ್ರೀಗಳು ನಡೆದೇ ಹೋದದ್ದೂ ಇದೆ. ಉಡುಪಿ ನಗರದ ಆಗ್ನೇಯಾದಿ ದಿಕ್ಕುಗಳಲ್ಲಿರುವ ಈ ನಾಲ್ಕು ಸ್ಕಂದಾಲಯಗಳಿಗೆ ಇರುವ ಒಟ್ಟು ದೂರ ಸುಮಾರು 12 ರಿಂದ 14 ಕಿಮೀ! 


ಸನಾತನ ಧರ್ಮ ರಕ್ಷಣೆಯ ಕಾರ್ಯದಲ್ಲಿ ಓರ್ವ ಯತಿಯಾಗಿ ಗರಿಷ್ಠ ಸಾಧ್ಯ ತ್ರಿಕರಣ ಪೂರ್ವಕ ಕಾರ್ಯಗಳನ್ನು ನಿರ್ವಂಚನೆಯಿಂದ ನಿರ್ವಹಿಸುತ್ತಿರುವ ಶ್ರೀ ಶ್ರೀ ವಿಶ್ವಪ್ರಸನ್ನ ತೀರ್ಥ ಶ್ರೀಪಾದರ ಅನನ್ಯತೆಗೆ ಇಂತಹ ಸಣ್ಣ ಸಣ್ಣ ಸಂಗತಿಗಳೂ ನಿದರ್ಶನವಾಗ್ತವೆ. 


-ಜಿ ವಾಸುದೇವ ಭಟ್ ಪೆರಂಪಳ್ಳಿ


ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್‌ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್‌ ಆಗಿ

ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಉಪಯುಕ್ತ ನ್ಯೂಸ್‌ ವಾಟ್ಸಪ್‌  ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ


web counter 

Post a Comment

0 Comments
Post a Comment (0)
Maruti Suzuki Festival of Colours
Maruti Suzuki Festival of Colours
To Top