ಮಹಾರಾಷ್ಟ್ರ ಮುಖ್ಯಮಂತ್ರಿ ದೇವೇಂದ್ರ ಫಡ್ನವಿಸ್‌ಗೆ ಪೇಜಾವರ ಶ್ರೀ ಅಭಿನಂದನೆ

Upayuktha
0

(ಸಾಂದರ್ಭಿಕ ಚಿತ್ರ: ದೆಹಲಿಯಲ್ಲಿ ಕಳೆದ ವರ್ಷ ನಡೆದ ಸಮಾರಂಭವೊಂದರಲ್ಲಿ ಫಡ್ನವಿಸ್ ರನ್ನು ಶ್ರೀಗಳು ಅಭಿನಂದಿಸುತ್ತಿರುವುದು.)


ಉಡುಪಿ: ಮಹಾರಾಷ್ಟ್ರದ  ನೂತನ ಮುಖ್ಯಮಂತ್ರಿಯಾಗಿ ಪದಗ್ರಹಣಗೈದ ಶ್ರೀ ದೇವೇಂದ್ರ ಫಡ್ನವಿಸ್ ರಿಗೆ ಶ್ರೀ ಪೇಜಾವರ ಶ್ರೀ ವಿಶ್ವಪ್ರಸನ್ನ ತೀರ್ಥ ಶ್ರೀಪಾದರು ಅಭಿನಂದನಪೂರ್ವಕ ಆಶೀರ್ವಾದಗೈದು ಸಂದೇಶ ಕಳುಹಿಸಿದ್ದಾರೆ.


ಇತ್ತೀಚೆಗೆ ನಡೆದ ಚುನಾವಣೆಯಲ್ಲಿ ಬಹುಮತದೊಂದಿಗೆ ಆಯ್ಕೆಗೊಂಡ ಮಹಾಯುತಿ ತಂಡದ ನಾಯಕರಾಗಿ ಆಯ್ಕೆಗೊಂಡು ಮಹಾರಾಷ್ಟ್ರ ರಾಜ್ಯದ ಮುಖ್ಯಮಂತ್ರಿಯಾಗಿ ಆಯ್ಕೆಯಾಗಿರುವುದಕ್ಕೆ ಅತೀವ ಸಂತಸವಾಗಿದೆ.‌ ತಮ್ಮ ಈ ತನಕದ ರಾಜಕೀಯ ಅನುಭವ, ಯುವ ಉತ್ಸಾಹ, ವಿಚಾರ ಶುದ್ಧತೆ ಮತ್ತು ಬದ್ಧತೆ ಹಾಗೂ, ಕಾರ್ಯ ನೈಪುಣ್ಯತೆಗಳು ಹೊಸ ಜವಾಬ್ದಾರಿಯನ್ನು ಅತ್ಯಂತ ಸಮರ್ಥವಾಗಿ ನಿರ್ವಹಿಸಲು ತಮಗೆ ನೆರವಾಗಲಿವೆ ಎಂಬ ಪೂರ್ಣ ವಿಶ್ವಾಸ ನಮಗಿದೆ.‌ ಉಡುಪಿ ಶ್ರೀ ಕೃಷ್ಣಮುಖ್ಯಪ್ರಾಣದೇವರ ಪೂರ್ಣ ಅನುಗ್ರಹದ ರಕ್ಷೆಯೂ ಸದಾ ತಮ್ಮೊಂದಿಗಿರಲಿ; ರಾಜ್ಯದ ಸರ್ವತೋಮುಖ ಏಳಿಗೆಗೆ ಕರ್ತವ್ಯ ನಿರ್ವಹಿಸುವ ಪೂರ್ಣ ಚೈತನ್ಯ ತಮಗೆ ಭಗವಂತನ ದಯೆಯಿಂದ ಒದಗಲಿ ಎಂದು ಪ್ರಾರ್ಥಿಸುತ್ತೇವೆ ಎಂಬ ಶುಭಸಂದೇಶವನ್ನು ಶ್ರೀಗಳು ಕಳುಹಿಸಿದ್ದಾರೆ.


ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್‌ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್‌ ಆಗಿ

ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಉಪಯುಕ್ತ ನ್ಯೂಸ್‌ ವಾಟ್ಸಪ್‌  ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ


web counter 

Post a Comment

0 Comments
Post a Comment (0)
Advt Slider:
To Top