ನಮ್ಮ ಭಾಷೆ ಉಳಿದಿರುವುದು ಕನ್ನಡ ಶಾಲೆಗಳಿಂದ: ಭಾಸ್ಕರ ರೈ ಕುಕ್ಕುವಳ್ಳಿ

Upayuktha
1

ಕುದುರೆಮುಖ ಕನ್ನಡ ಸಂಘದ 69ನೇ ಕನ್ನಡ ರಾಜ್ಯೋತ್ಸವ ಸಮಾರೋಪ 




ಮಂಗಳೂರು: 'ಕನ್ನಡ ಮಾಧ್ಯಮದಲ್ಲಿ ಕಲಿತ ಅದೆಷ್ಟೋ ಮಂದಿ ರಾಷ್ಟ್ರ- ಅಂತಾರಾಷ್ಟ್ರೀಯ ಮಟ್ಟದಲ್ಲಿ ಹೆಸರು ಮಾಡಿದ್ದಾರೆ. ಎಲ್ಲಿಯೂ ಅವರನ್ನು ಭಾಷೆಯ ತೊಡಕು ಕಾಡಲಿಲ್ಲ. ಈಗಲೂ ನಮ್ಮ ಮಾತೃಭಾಷೆ ಉಳಿದಿದ್ದರೆ ಅದು ಕನ್ನಡ ಶಾಲೆಗಳಿಂದಲೇ. ಕರ್ನಾಟಕ ಮರು ನಾಮಕರಣಗೊಂಡ ಸುವರ್ಣ ಸಂಭ್ರಮದಲ್ಲಾದರೂ ಸರಕಾರ ಈ ಬಗ್ಗೆ ಗಂಭೀರವಾಗಿ ಚಿಂತಿಸಿ ಕನ್ನಡ ಶಾಲೆ, ವಿ.ವಿ.ಗಳನ್ನು ಸದೃಢಗೊಳಿಸಬೇಕು' ಎಂದು ಸಾಹಿತಿ ಹಾಗೂ ಯಕ್ಷಗಾನ ಮತ್ತು ತುಳು ಸಾಹಿತ್ಯ ಅಕಾಡೆಮಿ ಮಾಜಿ ಸದಸ್ಯ, ಪ್ರೊ.ಭಾಸ್ಕರ ರೈ ಕುಕ್ಕುವಳ್ಳಿ ಹೇಳಿdru.


ಕುದುರೆಮುಖ ಕನ್ನಡ ಸಂಘ ಹಾಗೂ ಕುದುರೆಮುಖ ಕ್ರೀಡಾ ಮತ್ತು ಮನೋರಂಜನಾ ಸಮಿತಿ ಇವರ ಸಹಯೋಗದಲ್ಲಿ ನಗರದ ಕಾವೂರು ನೆಹರೂ ಭವನದಲ್ಲಿ ಜರಗಿದ 69ನೇ ಕನ್ನಡ ರಾಜ್ಯೋತ್ಸವ ಸಮಾರೋಪ ಸಮಾರಂಭವನ್ನು ಉದ್ಘಾಟಿಸಿ ಅವರು ಪ್ರಧಾನ ಭಾಷಣ ಮಾಡಿದರು.


'ಕನ್ನಡಕ್ಕೆ ಗಡಿ ರೇಖೆಗಳಿಲ್ಲ; ಪಂಚ ದ್ರಾವಿಡ ಭಾಷೆಗಳಲ್ಲಿ ಅದು ಅತ್ಯಂತ ಶ್ರೀಮಂತವಾದುದು. ಹುಲುಸಾದ ಸಾಹಿತ್ಯ ಕೃಷಿಯೊಂದಿಗೆ ವಿಸ್ತಾರವಾದ ಜಾನಪದ ಹಾಗೂ ಮೌಖಿಕ ಪರಂಪರೆ ಕನ್ನಡದಲ್ಲಿದೆ. ಎಳೆಯ ತಲೆಮಾರು ಅದರಲ್ಲಿ ಆಸಕ್ತಿ ವಹಿಸುವಂತೆ ಮಾಡಬೇಕಾಗಿದೆ' ಎಂದವರು ಕರೆ ನೀಡಿದರು. ಕೆ ಐ ಓ ಸಿ ಎಲ್ ಮುಖ್ಯ ಮಹಾ ಪ್ರಬಂಧಕ ಪಿ.ಪಳನಿ ಸಮಾರಂಭದ ಅಧ್ಯಕ್ಷತೆ ವಹಿಸಿದ್ದರು.


ರಾಜ್ಯೋತ್ಸವ ಪುರಸ್ಕಾರ ಪ್ರದಾನ:

ಇದೇ ಸಂದರ್ಭದಲ್ಲಿ ಕನ್ನಡ ನಾಡು- ನುಡಿ, ಸಂಸ್ಕೃತಿಗಾಗಿ ಸೇವೆ ಸಲ್ಲಿಸಿದ ಪ್ರೊ.ಭಾಸ್ಕರ ರೈ ಕುಕ್ಕುವಳ್ಳಿ, ಯಲ್ಲಪ್ಪ ಎಸ್.ಕಟ್ಟೀಮನಿ ಮತ್ತು ಕಂಪೆನಿಯ ರಾಷ್ಟ್ರೀಯ ಕ್ರೀಡಾಪಟು ಸುರೇಶ್ ಅವರಿಗೆ ಕುದುರೆಮುಖ ಕನ್ನಡ ಸಂಘದ 'ರಾಜ್ಯೋತ್ಸವ ಪುರಸ್ಕಾರ'ವನ್ನು ಪ್ರದಾನ ಮಾಡಲಾಯಿತು. ಕೆ ಎಸ್ ಆರ್ ಸಿ ಅಧ್ಯಕ್ಷ ಯು. ಮನೋಹರ್, ಕುದುರೆಮುಖ ಕನ್ನಡ ಸಂಘದ ಗೌರವಾಧ್ಯಕ್ಷ ದೀಪಕ್ ಪೂಜಾರಿ ಉಪಸ್ಥಿತರಿದ್ದರು. ಮಾನವ ಸಂಪನ್ಮೂಲ ಹಾಗೂ ಆಡಳಿತ ವಿಭಾಗದ ಸಹಾಯಕ ಪ್ರಧಾನ ವ್ಯವಸ್ಥಾಪಕ ಚೇತನ್ ಕುಮಾರ್ ಶೆಟ್ಟಿ ಕಾರ್ಯಕ್ರಮ ಸಂಯೋಜಿಸಿದ್ದರು.


ಸಾಂಸ್ಕೃತಿಕ ಸ್ಪರ್ಧೆ:

ಕಾರ್ಯಕ್ರಮದಲ್ಲಿ ಪರಿಸರದ ಸರಕಾರಿ ಶಾಲಾ ವಿದ್ಯಾರ್ಥಿಗಳಿಂದ 'ನೃತ್ಯ ವೈಭವ' ಸಾಂಸ್ಕೃತಿಕ ಸ್ಪರ್ಧೆ ಜರಗಿತು. ಸುಮಾರು ಏಳು ತಂಡಗಳು ಭಾಗವಹಿಸಿದ್ದು ವಿಜೇತರಿಗೆ ನಗದು ಸಹಿತ ಬಹುಮಾನ ವಿತರಣೆ ಮಾಡಲಾಯಿತು‌. ಸಂಘದ ಸದಸ್ಯ- ಸದಸ್ಯೆಯರಿಂದ ನಾಡಗೀತೆ ಮತ್ತು ಜಾನಪದ ಗೀತೆಗಳ ಗಾಯನ ನೆರವೇರಿತು.


ಕುದುರೆಮುಖ ಕನ್ನಡ ಸಂಘದ ಅಧ್ಯಕ್ಷ ಅವಿನಾಶ್ ಎನ್.ಎ. ಸ್ವಾಗತಿಸಿದರು. ಪ್ರಧಾನ ಕಾರ್ಯದರ್ಶಿ ವೈ.ಎಸ್‌. ಕಟ್ಟೀಮನಿ ವಂದಿಸಿದರು. ಕಾರ್ಯದರ್ಶಿ ತಾರಾನಾಥ ರೈ ಸಹಕರಿಸಿದರು‌‌. ಕನ್ನಡ ಸಂಘದ ಉಪಾಧ್ಯಕ್ಷ ದೇಜಪ್ಪ ಬಂಗೇರ ಮತ್ತು ಜಂಟಿ ಕಾರ್ಯದರ್ಶಿ ಗೀತಾ ಸಿ.ವಿ. ನಾಯ್ಕ ಕಾರ್ಯಕ್ರಮ ನಿರೂಪಿಸಿದರು.


ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್‌ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್‌ ಆಗಿ

ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಉಪಯುಕ್ತ ನ್ಯೂಸ್‌ ವಾಟ್ಸಪ್‌  ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ


web counter 

Post a Comment

1 Comments
  1. ಸದೃಢಗೊಳಿಸುವ ಮಾತು ದೂರ ಇರಲಿ, ಇದ್ದ ಕನ್ನಡ ಮಾಧ್ಯಮವನ್ನು ಮುಚ್ಚಿ ಆಂಗ್ಲ ಮಾಧ್ಯಮ ಶಾಲೆ ಮಾಡಿದ್ದಾರೆ. ಇಂದು ಯಾರಿಗೂ ಕನ್ನಡ ಬೇಡ. ಹಣ ಬೇಕು ಅಷ್ಟೇ. ವಿಚಿತ್ರ ಮನೋಸ್ಥಿತಿಯನ್ನು ನಮ್ಮ ಸಮಾಜ ಹೊಂದಿದೆ. ಕನ್ನಡ ಹೋರಾಟವನ್ನು ಬೇರೆ ಯಾರೋ ಮಾಡಬೇಕು. ಕನ್ನಡವನ್ನು ಬೇರೆ ಯಾರೋ ಉಳಿಸಲಿ. ನನ್ನ ಮಕ್ಕಳು ದೊಡ್ಡ ಶಾಲೆಯಲ್ಲಿ ಒಳ್ಳೆಯ(?!) ಎಜುಕೇಶನ್ ಪಡೆದು ಬೆಂಗಳೂರಿಗೋ, ವಿದೇಶಕ್ಕೋ ಹೋಗಲಿ. ಆಮೇಲೆ ಅವರು ದುಡ್ಡು ಸಂಪಾದಿಸಲಿ. ಈ ಥರದ ಮನೋಸ್ಥಿತಿ. ಇಂದು ಎಲ್ಲಿಯಾದರೂ ಮಕ್ಕಳು ಆಡುವುದನ್ನು ನೋಡಿ. ತಪ್ಪಿಯೂ ಅವರು ಕನ್ನಡದಲ್ಲಿ ಮಾತನಾಡುವುದಿಲ್ಲ. ಮಾತನಾಡಿದರೂ ಬಣ್ಣಗಳು ರೆಡ್, ಪಿಂಕ್ ಇತ್ಯಾದಿ, ಸಂಖ್ಯೆಗಳು ವನ್, ಟೂ ಥ್ರೀ ಇತ್ಯಾದಿ. ನಮ್ಮ ಸ್ವಾತಂತ್ರ್ಯ ಹೋರಾಟಗಾರರ ಬಲಿದಾನ ನೀರ ಮೇಲಣ ಹೋಮ ಆಯಿತು ಅಷ್ಟೇ. ಪಾಪ ಅವರಾದರೂ ದೊಡ್ಡ ದೊಡ್ಡ ಜಾಬುಗಳಿಗೆ ಹೋಗಿ ಆರಾಮವಾಗಿ ಬದುಕಬಹುದಾಗಿತ್ತು. ಅವರಲ್ಲಿ ಎಷ್ಟೋ ಜನರಿಗೆ ಮಾಡುವೆ ಆಗಿ ಮಕ್ಕಳಾಗಿ, ಈಗ ಮರಿ ಮೊಮ್ಮಕ್ಕಳು ಇರುತ್ತಿದ್ದರು. ಎಲ್ಲವನ್ನೂ ದೇಶ, ಭಾಷೆಗೋಸ್ಕರ ಅನ್ಯಾಯವಾಗಿ ಕಳೆದುಕೊಂಡು ನೇಣಿಗೆ ಕೊರಳು ಒಡ್ಡಿದರು. ಅಲ್ಲವೇ?

    ReplyDelete
Post a Comment
Maruti Suzuki Festival of Colours
Maruti Suzuki Festival of Colours
To Top