ಡಿ.31 ರಿಂದ ಜ.03 ಆಳ್ವಾಸ್ ನಲ್ಲಿ ನೀನಾಸಂ ನಾಟಕೋತ್ಸವ

Upayuktha
0


ಮೂಡುಬಿದಿರೆ: ಆಳ್ವಾಸ್ ಶಿಕ್ಷಣ ಪ್ರತಿಷ್ಠಾನ (ರಿ.) ಮೂಡುಬಿದಿರೆ, ಆಳ್ವಾಸ್ ರಂಗ ಅಧ್ಯಯನ ಕೇಂದ್ರದ ಆಶ್ರಯದಲ್ಲಿ ಡಿಸೆಂಬರ್ 31 ಜನವರಿ 03 ರವರೆಗೆ ಪ್ರತಿದಿನ ಸಂಜೆ 6.45 ಕ್ಕೆ ಮೂಡುಬಿದ್ರೆ ವಿದ್ಯಾಗಿರಿಯ ವಿ.ಎಸ್.ಆಚಾರ್ಯ ಸಭಾಂಗಣದಲ್ಲಿ ನೀನಾಸಂ ತಿರುಗಾಟ ತಂಡದ ನಾಟಕೋತ್ಸವವನ್ನು ಏರ್ಪಡಿಸಲಾಗಿದೆ.


ಡಿ.31 ಮತ್ತು ಜ.01 ರಂದು ಮೂಲ ಭವಭೂತಿಯ, ಅಕ್ಷರ ಕೆ.ವಿ.ಇವರು ನಿರ್ದೇಶಿಸಿದ ಮಾಲತಿ ಮಾಧವ  ಹಾಗೂ ಜ.02 ಮತ್ತು 03 ರಂದು  ಜಯಂತ್ ಕಾಯ್ಕಿಣಿ ಕನ್ನಡಕ್ಕೆ ಅನುವಾದಿಸಿದ, ಮೂಲ ಅಭಿರಾಮ್ ಭಡ್ಕಮ್ಕರ್ ರಚಿಸಿದ, ವಿದ್ಯಾನಿಧಿ ವನಾರಸ್ ನಿರ್ದೇಶಿಸಿದ ಅಂಕದ ಪರದೆ ನಾಟಕಗಳ ಪ್ರದರ್ಶನ ನಡೆಯಲಿದೆ.


ಈ ವರ್ಷದ ಅತ್ಯುತ್ತಮ ನಾಟಕ ಎಂಬ ಹೆಗ್ಗಳಿಕೆಗೆ ಪಾತ್ರವಾದ ನೀನಾಸಂ ತಿರುಗಾಟದ ನಾಟಕಗಳ್ನು ಹೆಚ್ಚು ಜನರು ನೋಡಬೇಕೆಂಬ ಕಾರಣಕ್ಕೆ ಎರಡೆರಡು ಪ್ರದರ್ಶನವನ್ನು ಏರ್ಪಡಿಸಲಾಗಿದೆ.


ಯಾವುದೇ ಸಭಾ ಕಾರ್ಯಕ್ರಮ ಇಲ್ಲದೆ ಪ್ರತಿದಿನ ನಾಟಕವು ಸಮಯಕ್ಕೆ  ಸರಿಯಾಗಿ ಆರಂಭವಾಗಲಿದ್ದು  ಪ್ರವೇಶ ಉಚಿತವಾಗಿರುತ್ತದೆ ಎಂದು ಸಂಸ್ಥೆಯ ಅಧ್ಯಕ್ಷರಾದ ಡಾ.ಎಂ.ಮೋಹನ ಆಳ್ವರು ತಿಳಿಸಿದ್ದಾರೆ.



 ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್‌ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್‌ ಆಗಿ

ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಉಪಯುಕ್ತ ನ್ಯೂಸ್‌ ವಾಟ್ಸಪ್‌  ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ


web counter 

إرسال تعليق

0 تعليقات
إرسال تعليق (0)
Mandovi Motors Presents MONSOON BONANZA
Mandovi Motors Presents MONSOON BONANZA
To Top