ಬೆಂಗಳೂರು: ನಾಟ್ಯೇಶ್ವರ ನೃತ್ಯ ಶಾಲೆಯ ಗುರುಗಳಾದ ಕಲಾಯೋಗಿ ಶ್ರೀ ಕೆ.ಪಿ. ಸತೀಶ ಬಾಬು ಹಾಗೂ ಶ್ರೀಮತಿ ವಾಣಿ ಸತೀಶ ಬಾಬು ಆಯೋಜಿಸಿದ್ದ "ನಾಟ್ಯೇಶ್ವರ ನೃತ್ಯ-ಸಂಗೀತ ಉತ್ಸವ-2024" ನವೆಂಬರ್ 30, ಹಾಗೂ ಡಿಸೆಂಬರ್ 1, ಎರಡು ದಿನಗಳ ಕಾರ್ಯಕ್ರಮವು ಬೆಂಗಳೂರಿನ ಮಲ್ಲೇಶ್ವರದ "ಕೇಶವ ಕಲ್ಪ" ಸಭಾಂಗಣದಲ್ಲಿ ಯಶಸ್ವಿಯಾಗಿ ನಡೆಯಿತು.
ನವೆಂಬರ್ 30, ಶನಿವಾರ : ಕುಮಾರ ಅಪೂರ್ವ ಗಂಗಟಕರ್ ರವರಿಂದ ವಯೊಲಿನ್ ವಾದನದೊಂದಿಗೆ ಪ್ರಾರಂಭವಾಗಿ, ನಾಟ್ಯೇಶ್ವರ ನೃತ್ಯ ಶಾಲೆಯ ಹಿರಿಯ ವಿದ್ಯಾರ್ಥಿನಿ ಶ್ರೀಮತಿ ಭುವನಾ ಪ್ರಕಾಶ್ ರವರಿಂದ ಭರತನಾಟ್ಯ, ವಿದ್ವಾನ್ ಚೇತನ್ ಗಂಗಟಕರ್, ವಿದುಷಿ ಚಂದ್ರಪ್ರಭಾ ಚೇತನ್, ವಿದುಷಿ ರೂಪಾ ಗಿರೀಶ್ ಹಾಗೂ ವಿದುಷಿ ರಕ್ಷಾ ರಾಂ ಕುಡ್ವಾರವರ ಶಿಷ್ಯ ವೃಂದದವರಿಂದ ಭರತನಾಟ್ಯ ನೃತ್ಯ ಕಾರ್ಯಕ್ರಮ ಅತ್ಯುತ್ತಮವಾಗಿ ಮೂಡಿಬಂತು. ಕಾರ್ಯಕ್ರಮದ ಅತಿಥಿಯಾಗಿ ಕರ್ನಾಟಕ ನೃತ್ಯ ಸಂಗೀತ ಅಕಾಡೆಮಿಯ ಸದಸ್ಯರಾದ ಶ್ರೀಮತಿ ಉಷಾ ಬಸಪ್ಪರವರ ಉಪಸ್ಥಿತಿಯಲ್ಲಿ ಯಶಸ್ವಿಯಾಗಿ ಮೂಡಿಬಂತು.
ಡಿಸೆಂಬರ್ 1, ಭಾನುವಾರ : ನಾಟ್ಯೇಶ್ವರ ನೃತ್ಯ ಶಾಲೆಯ ಕಿರಿಯ ಶಿಷ್ಯ ವೃಂದದವರಿಂದ ಗಣಪತಿ ಸ್ತುತಿಯೊಂದಿಗೆ ಪ್ರಾರಂಭವಾಗಿ, ಹಿರಿಯ ವಿದ್ಯಾರ್ಥಿನಿ ಶ್ರೀಮತಿ ಭಾವನಾ ಭಾಗವತ್, ವಿದುಷಿ ರೇಖಾ ಜಗದೀಶ್, ವಿದುಷಿ ಸೀತಾ ಗುರುಪ್ರಸಾದ್ ಹಾಗೂ ಡಾ॥ ಸಾಧನಾಶ್ರೀ ಶಿಷ್ಯ ವೃಂದದವರಿಂದ ಭರತನಾಟ್ಯ ನೃತ್ಯ ಕಾರ್ಯಕ್ರಮ ಅತ್ಯುತ್ತಮವಾಗಿ ಮೂಡಿಬಂತು. ಕಾರ್ಯಕ್ರಮದ ಅತಿಥಿಯಾಗಿ ಶ್ರೀ ಎ.ವಿ.ಸತ್ಯನಾರಾಯಣ, ಸೃಷ್ಟಿ ನೃತ್ಯ ಕಲಾಕೇಂದ್ರ , ಬೆಂಗಳೂರು ಉಪಸ್ಥಿತಿಯಲ್ಲಿ ಯಶಸ್ವಿಯಾಗಿ ಮೂಡಿಬಂತು.
ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್ ಆಗಿ
ಉಪಯುಕ್ತ ನ್ಯೂಸ್’ ಫೇಸ್‌ಬುಕ್ ಪುಟ ಲೈಕ್ ಮಾಡಿ
ಉಪಯುಕ್ತ ನ್ಯೂಸ್ ವಾಟ್ಸಪ್ ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ