ಕೊಕ್ಕಡ ದೇವಸ್ಥಾನದ ನಂದಿ 'ಶ್ಯಾಮ' ಇನ್ನಿಲ್ಲ

Upayuktha
0

ಅಲ್ಪಕಾಲದ ಅನಾರೋಗ್ಯದಿಂದ ಹಲ್ಲಿಂಗೇರಿ ಗೋಶಾಲೆಯಲ್ಲಿ ದೇಹಾಂತ್ಯ 




ಬೆಳ್ತಂಗಡಿ: ಕಳೆದ ಸುಮಾರು 15 ವರ್ಷಗಳಿಂದ ಶ್ಯಾಮ ಬಸವ (ನಂದಿ) ಶ್ರೀ ಧನ್ವಂತರಿ ಕ್ಷೇತ್ರ ಶ್ರೀ ವೈದ್ಯನಾಥೇಶ್ವರ ವಿಷ್ಣುಮೂರ್ತಿ ದೇವಸ್ಥಾನ ಕೊಕ್ಕಡ ಇಲ್ಲಿ ಜಾತ್ರಾ ಸಂದರ್ಭಗಳಲ್ಲಿ ಭಾಗವಹಿಸಿ ಶ್ರೀ ದೇವರಿಗೆ ಸೇವೆಯನ್ನು ಸಲ್ಲಿಸಿರುತ್ತಾನೆ.


ಇವನನ್ನು ಪುರುಷೋತ್ತಮ ಟೈಲರ್ ಮಡ್ಯಾಳಗುಂಡಿ ಆರೈಕೆಯನ್ನು ಮಾಡುತ್ತಿದ್ದರು ಹಾಗೂ ಕಳೆದ 7 ವರ್ಷಗಳಿಂದ ಶ್ರೀ ಕ್ಷೇತ್ರ ಧರ್ಮಸ್ಥಳದ ಕಾಮಧೇನು ಗೋಶಾಲೆ ಹಲ್ಲಿಂಗೇರಿಯಲ್ಲಿ ಆರೈಕೆಯನ್ನು ಮಾಡುತ್ತಿದ್ದರು. ಇಂದು ಅಲ್ಪಕಾಲಿಕ ಅನಾರೋಗ್ಯದ ಕಾರಣ ಹಲ್ಲಿಂಗೇರಿ ಗೋಶಾಲೆಯಲ್ಲಿ ದೇವರ ಪಾದ ಸೇರಿದ್ದಾನೆ.


إرسال تعليق

0 تعليقات
إرسال تعليق (0)
To Top