ಸ್ಫೂರ್ತಿ ಸೆಲೆ: ಇಲ್ಲ ಎನ್ನುವ ಅಭ್ಯಾಸವನ್ನು ಬೆಳೆಸಿಕೊಳ್ಳಿ

Upayuktha
0


ಹಾಯ್ ಹೇಗಿದ್ದೀರಾ? ನಾವು ನಮಗೆ ಗೊತ್ತಿಲ್ಲದಂತೆ ಕೆಲವೊಂದು ಅಭ್ಯಾಸವನ್ನು ಬೆಳೆಸಿಕೊಂಡಿರು ತ್ತೇವೆ. ಆದರೆ ಪ್ರಜ್ಞಾಪೂರ್ವಕವಾಗಿ ಬೆಳೆಸಿ ಕೊಳ್ಳುವ ಅಭ್ಯಾಸಗಳಲ್ಲಿ ಇದೂ ಕೂಡ ಒಂದಾಗಿದೆ.


ನಮ್ಮ ಜೀವನವು "ಹೌದು" ಮತ್ತು "ಇಲ್ಲ"ಗಳಲ್ಲಿ ಕಳೆದು ಹೋಗುತ್ತದೆ. ಕೆಲವೊಂದು ಸಾರೆ ನಾವು ಇನ್ನೊಬ್ಬರ ದಾಕ್ಷಿಣ್ಯಕ್ಕೆ ಸಿಕ್ಕು ಅವರ ಬೇಡಿಕೆಗಳಿಗೆ "ಹೌದು" ಎಂದು ತಲೆ ಅಲ್ಲಾಡಿಸಿ ಆಮೇಲೆ ಚಕ್ರವ್ಯೂಹದೊಳಗೆ ಸಿಕ್ಕ ಅಭಿಮನ್ಯುವಿನಂತೆ ನಮ್ಮ ಪರಿಸ್ಥಿತಿ ಆಗಿರುತ್ತದೆ. ಆದರೆ ನಮ್ಮ ಮಿತಿಗಳನ್ನು ಅರಿತುಕೊಂಡು ನಾವು ಇಲ್ಲ ಎಂದು ಹೇಳುವುದನ್ನು ರೂಢಿ ಮಾಡಿಕೊಂಡರೆ ಎರಡು ರೀತಿಯ ಉಪಯೋಗಗಳನ್ನು ಪಡೆಯಬಹುದು.


ನಾವು ನಿರ್ದಾಕ್ಷಿಣ್ಯವಾಗಿ "ಇಲ್ಲ" ಎಂದರೆ ಜನ ನಮ್ಮ ಉಸಾಬರಿಯನ್ನು ಬಿಟ್ಟು ಬೇರೊಂದು ಹಾದಿಯನ್ನು ಹುಡುಕಿಕೊಳ್ಳುತ್ತಾರೆ ಮತ್ತು ನಮಗೆ ಒಂದು big relief ಸಿಕ್ಕಂತೆ ಆಗುತ್ತದೆ.


ಅದಕ್ಕೆ ಇಂಗ್ಲಿಷಿನಲ್ಲಿ ಹೇಳುತ್ತಾರೆ "You cannot please Evey one" ಅದಕ್ಕಾಗಿಯೇ ಎಷ್ಟೋ ಯಶಸ್ವೀ ಸಾಧಕರು "ಇಲ್ಲ" ಎಂದು ಹೇಳುವ ಅಭ್ಯಾಸವನ್ನು ಬೆಳೆಸಿಕೊಂಡಿರುತ್ತಾರೆ. ಇದರಿಂದಾಗಿಯೇ ಅವರು ಇನ್ನೊಬ್ಬರ ದಾಕ್ಷಿಣ್ಯಕ್ಕೆ ಸಿಗದೇ ನೇರ ಸ್ವಭಾವವನ್ನು ಬೆಳೆಸಿಕ್ಕೊಂಡು ಸಾಕಷ್ಟು ಅಭಿಮಾನಿಗಳನ್ನು ಸಂಪಾದಿಸಿರುತ್ತಾರೆ. ಆದರೆ ಇದಕ್ಕೆ ತದ್ವಿರುದ್ಧವಾಗಿ ಜನರಿಗೆ ಇಲ್ಲವೆನ್ನಲಾಗದೆ ಭರವಸೆಗಳನ್ನು ಕೊಟ್ಟು ತಮ್ಮ busy schedule ಗೆ ಸಿಕ್ಕು ಪೂರೈಸಲಾಗದೆ ಟ್ರೋಲಿಗೆ ಒಳಗಾದ ರಾಜಕಾರಣಿಗಳನ್ನು ನಾವು ಕಾಣಬಹುದು. ಇಲ್ಲದ ದಾಕ್ಷಿಣ್ಯಕ್ಕೆ ಸಿಕ್ಕು ಒದ್ದಾಡುವ ಜನರ ಪರಿಸ್ಥಿತಿ ಜೇಡರ ಬಲೆಯಲ್ಲಿ ಸಿಕ್ಕು ಹೊರಗೆ ಬರಲಾಗದ ಜೇಡರ ಹುಳುವಿನಂತೆ ಆಗಿರುತ್ತದೆ.


ನಮ್ಮ ಮಿತಿಯನ್ನು ಅರಿತು ವ್ಯವಹರಿಸಿದರೆ ಇಂತಹ ಯಾವ ಗೋಜಲು ನಮ್ಮನ್ನು ಸಿಕ್ಕಿಸುವುದಿಲ್ಲ. ಏನಂತೀರಾ?

- ಗಾಯತ್ರಿ ಸುಂಕದ, ಬದಾಮಿ

إرسال تعليق

0 تعليقات
إرسال تعليق (0)
Mandovi Motors Presents MONSOON BONANZA
Mandovi Motors Presents MONSOON BONANZA
To Top