ಇದನ್ನೇ in circulation ಎಂದು ಬಿಂಬಿಸಲಾಗುತ್ತಿದೆ. ಹೇಗೆ ಯಾವುದೇ ಹಣವು ಚಲಾವಣೆಯಲ್ಲಿ ಇದ್ದರೆ ಮಾತ್ರ ಅದಕ್ಕೆ ಬೆಳೆಯು ಹಾಗೆ ನಾವು ಡಿಮ್ಯಾಂಡ್ ನಲ್ಲಿ ಇದ್ದರೆ ಮಾತ್ರ ನಾವು ನಮ್ಮದೇ ಆದ ಸ್ಥಾನದಲ್ಲಿರುತ್ತೇವೆ.
ಬದುಕು ನಮಗೆ ಎಲ್ಲವನ್ನೂ ಕಲಿಸುತ್ತದೆ. ಸಿನಿಮಾದಲ್ಲಿ ಸೂಪರ್ ಸ್ಟಾರ್ ಆದ ನಟರು ಕೂಡ ವಯಸ್ಸಾದಂತೆ ಬೇಡಿಕೆ ಕಳೆದು ಕೊಂಡ ಮೇಲೆ ಪೋಷಕ ಪಾತ್ರಕ್ಕೆ ಪ್ರಮೋಷನ್ ಪಡೆದು ಕೊಂಡು ಚಲಾವಣೆಯಲ್ಲಿರಲು ಯತ್ನಿಸುತ್ತಾರೆ. ಕ್ರಿಕೆಟ್ ಆಟಗಾರರು ಕೂಡ ವಯಸ್ಸಾದಂತೆ ಕೋಚ್ ಆಗಿ, ಅಂಪೈರ್ ಆಗಿ. ವೀಕ್ಷಕ ವಿವರಣೆ ಕಾರರಾಗಿ ತಮ್ಮದೇ ಆದ ಸ್ಥಾನವನ್ನು ಕಾಪಾಡಿಕೊಳ್ಳಲು ಯತ್ನಿಸುತ್ತಾರೆ. ಅವರಿಗೆ ಗೊತ್ತು ಇಲ್ಲವಾದರೆ ಐಡೆಂಟಿಟಿ ಕ್ರೈಸಿಸ್ ಗೆ ಗುರಿಯಾಗಬೇಕೆಂದು.
ಅದಕ್ಕಾಗಿಯೇ ಎಷ್ಟೋ ಸಾರಿ ಫಿಸಿಕಲ್ ಫಿಟ್ನೆಸ್ ಕಾಯ್ದುಕೊಂಡು ಫಾರಂನಲ್ಲಿ ಇರಲು ಬಯಸುತ್ತಾರೆ. ಇಲ್ಲದಿದ್ದರೆ ಬಿಸಿಸಿಐ ಕೃಪಾ ಕಟಾಕ್ಷ ಕಳೆದುಕೊಂಡು ಬೆಂಚ್ ಕಾಯುವ ಪ್ರಸಂಗ ಬರುತ್ತದೆ ಎಂದು ಗೊತ್ತು. ಅದಕ್ಕಾಗಿಯೇ ಶತಾಯ ಗತಾಯ ಉತ್ತಮ ಫಾಮ್ ಕಾಯ್ದುಕೊಂಡು ಚಲಾವಣೆಯಲ್ಲಿರಲು ಯತ್ನಿಸುತ್ತಾರೆ.
ರಾಜಕಾರಣಿಗಳು ಕೂಡ ತಮ್ಮ ವಯಸ್ಸು, ಶರೀರವನ್ನು ಲೆಕ್ಕಿಸದೆ ಪ್ರತಿಭಟನೆಗಳು. ಪಾದಯಾತ್ರೆಯಲ್ಲಿ ಭಾಗವಹಿಸುತ್ತಾ, panneel discuussion ಗಳಲ್ಲಿ ಭಾಗವಹಿಸಿ ದಿನಕ್ಕೊಂದು ಹೇಳಿಕೆ ಕೊಡುತ್ತಾ ಚಲಾವಣೆಯಲ್ಲಿ ಇರಲು ಯತ್ನಿಸುತ್ತಾರೆ.
ಹಣ್ಣು ಕೊಡುವ ಮರಕ್ಕಷ್ಟೇ ಬೆಲೆ, ಹಾಲು ಕೊಡುವ ಹಸುವಿಗಷ್ಟೇ ಬೆಲೆ ಎಂಬುದನ್ನು ಅರಿತುಕೊಂಡು ನಾವು ಕೂಡ ನಮಗೆ ಲಭ್ಯ ವಾದ ಸಂಪನ್ಮೂಲಗಳನ್ನು ಅರಿತುಕೊಂಡು ಸದಾ ಚಲಾವಣೆಯಲ್ಲಿ ಇರೋಣ. ಮತ್ತೆ ಸಿಗೋಣ.
- ಗಾಯತ್ರಿ ಸುಂಕದ ಬಾದಾಮಿ
ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್ ಆಗಿ
ಉಪಯುಕ್ತ ನ್ಯೂಸ್’ ಫೇಸ್‌ಬುಕ್ ಪುಟ ಲೈಕ್ ಮಾಡಿ
ಉಪಯುಕ್ತ ನ್ಯೂಸ್ ವಾಟ್ಸಪ್ ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ