ಸ್ಫೂರ್ತಿ ಸೆಲೆ: ಸದಾ ಹೊಳೆಯುತ್ತಿರಿ

Upayuktha
0




ದನ್ನು ನೋಡಿದಾಗ ಸಾಬೂನಿನ ಜಾಹೀರಾತು ನೆನಪಾಗುತ್ತದೆ. ಇದನ್ನೇ ಇಂಗ್ಲಿಷಿನಲ್ಲಿ Keep Shining ಎಂದು ಹೇಳಬಹುದು. ಇದು ನಮಗೆ ಇರಬೇಕಾದ ಚಲನಶೀಲ ವ್ಯಕ್ತಿತ್ವವನ್ನು ತೋರಿಸುತ್ತದೆ.ಎಲೆಯ ಮೇಲೆ ಬಿದ್ದ ಇಬ್ಬನಿಯ ಹನಿ ಸೂರ್ಯೋದಯದ ಕಾಲಕ್ಕೆ ಹೊಳೆಯುವಂತೆ ನಾವು ನಮಗೆ ಸಿಕ್ಕ ಅವಕಾಶಗಳಲ್ಲಿ ಮತ್ತು ಸ್ಥಳಗಳಲ್ಲಿ ನಮ್ಮ ಕ್ರಿಯಾ ಶೀಲ ವ್ಯಕ್ತಿತ್ವವನ್ನು ತೋರಿಸುವ ರೂಢಿಯನ್ನು ಬೆಳೆಸಿ ಕೊಳ್ಳಬೇಕು. ಇದನ್ನೇ "ಇದ್ದಲ್ಲಿ ಚಿಗಿ, ಬಿದ್ದ್ದಲ್ಲಿ ನೆಗಿ" ಎಂದು ಹೇಳಲಾಗುತ್ತಿದೆ. ನೆಲಕ್ಕೆ ಬಿದ್ದ ಬೀಜ ಹೇಗೆ ಸಿಕ್ಕ ಗಾಳಿ, ನೀರು, ಮತ್ತು ಮಣ್ಣನ್ನು ಉಪಯೋಗಿಸಿಕೊಂಡು ಕಲ್ಲಿನ ಸಂದಿ, ಗುಡ್ಡಗಾಡಿನಲ್ಲಿಯೂ ಕೂಡ ಹೇಗೆ ಬೆಳೆದು ಹೆಮ್ಮರವಾಗುತ್ತದೆಯೋ ಹಾಗೆ ಪ್ರತಿಕೂಲ ಪರಿಸ್ಥಿತಿಯಲ್ಲಿಯೂ ಕೂಡ ನಾವು ಬೆಳೆದು ತೋರಿಸಬೇಕು.



ನಮಗೆ ಸಿಕ್ಕ ಸಿಕ್ಕ ಚಿಕ್ಕಚಿಕ್ಕ ಅವಕಾಶಗಳನ್ನು ಸದುಪಯೋಗ ಮಾಡಿಕೊಂಡು ನಮ್ಮ ವ್ಯಕ್ತಿತ್ವದ ಅನಾವರಣ ಮಾಡಿಕೊಳ್ಳಬೇಕು. ನಾವು ಮೊಬೈಲ್ ರೀಚಾರ್ಜ್ ಮಾಡಿದ ಹಾಗೆ ನಮ್ಮ ವ್ಯಕ್ತಿತ್ವದ ರೀಚಾರ್ಜ್ ಮಾಡುವುದನ್ನು ರೂಢಿಸಿ ಕೊಳ್ಳಬೇಕು.



ನಮ್ಮ ಬದುಕನ್ನು ಒಂದು ಮೊಬೈಲ್ ಗೆ ಹೋಲಿಸಬಹುದು. ನಾವು ನಿಂತ ನೀರಿನಂತಹ ಜಡ್ಡು ಗಟ್ಟಿದ ವ್ಯಕ್ತಿತ್ವ ಇದ್ದರೆ ಅದನ್ನು Switch off'' ಎಂದು ಹೇಳಬಹುದು. ನಾವು ನಮ್ಮ ಕ್ರಿಯಾಶೀಲ ವ್ಯಕ್ತಿತ್ವದಲ್ಲಿ ಇದ್ದರೆ "ಚಂದಾದಾರರು ಬ್ಯುಸಿ ಇದ್ದಾರೆ" ಎಂದು ಹೇಳಬಹುದು. ನಾವು ಇನ್ನೊಬ್ಬರ ಬಗ್ಗೆ ಮೂಗು ತೂರಿಸದೆ ಇದ್ದರೆ "ಚಂದಾದಾರರು ವ್ಯಾಪ್ತಿ ಪ್ರದೇಶದ ಹೊರಗೆ ಇದ್ದಾರೆ" ಎಂದು ಹೇಳಬಹುದು.



ನಾವು ನಮ್ಮ ಕೆಲಸಗಳಲ್ಲಿ ನಿರತರಾಗಿ ಇನ್ನೊಬ್ಬರ ಬಗ್ಗೆ ತಲೆ ಕೆಡಿಸಿಕೊಳ್ಳದೇ ಇದ್ದರೆ "Not answering the call" ಎಂದು ಹೇಳಬಹುದು. ನಾವು ಏನೂ ಮಾಡದೇ ಸೋಮಾರಿಯಾಗಿ ಇದ್ದು ಬಿಟ್ಟರೆ "This number does not exist" ಎಂದು ಹೇಳಬಹುದು.


ತೀರ್ಮಾನ ನಮಗೇ ಬಿಟ್ಟಿದ್ದು. ಏನಂತೀರಾ?


-ಗಾಯತ್ರಿ ಸುಂಕದ, ಬದಾಮಿ 


ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್‌ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್‌ ಆಗಿ

ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಉಪಯುಕ್ತ ನ್ಯೂಸ್‌ ವಾಟ್ಸಪ್‌  ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ


web counter 

Post a Comment

0 Comments
Post a Comment (0)
Maruti Suzuki Festival of Colours
Maruti Suzuki Festival of Colours
To Top