ಮೂಡುಬಿದಿರೆ: ಗೃಹರಕ್ಷಕ ದಳ ಪ್ರಭಾರ ಘಟಕಾಧಿಕಾರಿ ನೇಮಕ

Upayuktha
0


ಮಂಗಳೂರು: ಗೃಹರಕ್ಷಕ ಚಂದ್ರಶೇಖರ್ ಮೂಡಬಿದ್ರಿ ಘಟಕ ಅವರನ್ನು ಗೃಹರಕ್ಷಕ ದಳದ ಮೂಡಬಿದ್ರಿ ಘಟಕದ ಪ್ರಭಾರ ಘಟಕಾಧಿಕಾರಿಯಾಗಿ ನೇಮಿಸಿ ದ.ಕ. ಜಿಲ್ಲಾ ಗೃಹರಕ್ಷಕ ದಳದ ಸಮಾದೇಷ್ಟರಾದ ಡಾ|| ಮುರಲೀ ಮೋಹನ್ ಚೂಂತಾರು ಇವರು ಜಿಲ್ಲಾ ಕಛೇರಿಯಿಂದ ಪ್ರಮಾಣ ಪತ್ರವನ್ನು ಇಂದು (ಡಿ.19-ಗುರುವಾರ) ಹಸ್ತಾಂತರಿಸಿದರು.


ಮೂಡಬಿದ್ರಿ ಪ್ರಭಾರ ಘಟಕಾಧಿಕಾರಿಗಳಾಗಿ ಕೆಲಸ ನಿರ್ವಹಿಸುತ್ತಿದ್ದ ಪಾಂಡಿರಾಜ್ ಇವರು ವಯೋನಿವೃತ್ತಿ ಹೊಂದಿರುವ ಕಾರಣದಿಂದಾಗಿ ಪ್ರಭಾರ ಘಟಕಾಧಿಕಾರಿ ಹುದ್ದೆಗೆ ಅವರನ್ನು ತಕ್ಷಣದಿಂದ ಜಾರಿಗೆ ಬರುವಂತೆ ಮುಂದಿನ ಆದೇಶದವರೆಗೆ ನೇಮಿಸಿ ಜಿಲ್ಲಾ ಕಛೇರಿಯಿಂದ ಪ್ರಮಾಣ ಪತ್ರವನ್ನು ಹಸ್ತಾಂತರಿಸಿದರು.


ಚಂದ್ರಶೇಖರ್ ಇವರು ದಿನಾಂಕ: 01-02-2006 ರಿಂದ ಗೃಹರಕ್ಷಕ ದಳದ ಸದಸ್ಯರಾಗಿ ಸೇವೆ ಸಲ್ಲಿಸುತ್ತಿದ್ದಾರೆ. ಇವರು ಬೆಂಗಳೂರು ಪೌರ ರಕ್ಷಣಾ ಅಕಾಡೆಮಿಯಲ್ಲಿ ನಡೆದ ನಿಸ್ತಂತು ಚಾಲನಾ ತರಬೇತಿ, ಆಸ್ಕಾ ಲೈಟ್ ತರಬೇತಿ ನಡೆಸಿರುತ್ತಾರೆ.


ಈ ಸಂದರ್ಭದಲ್ಲಿ ಜಿಲ್ಲಾ ಗೃಹರಕ್ಷಕದಳ ಕಛೇರಿಯ ಪ್ರಥಮ ದರ್ಜೆ ಸಹಾಯಕಿ ಶ್ರೀಮತಿ ಶ್ಯಾಮಲ ಎ, ದಲಾಯತ್ ಶ್ರೀಮತಿ ಮಂಜುಳಾ ಲಮಾಣಿ, ಮಂಗಳೂರು ಘಟಕದ ಸಾರ್ಜಂಟ್ ಸುನಿಲ್ ಕುಮಾರ್, ಸಂತೋಷ್ ಜಾದವ್, ಸುರೇಖಾ, ಸಂಧ್ಯಾ, ಸುಲೋಚನಾ ಹಾಗೂ ಖತೀಜಾ ಉಪಸ್ಥಿತರಿದ್ದರು.


ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್‌ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್‌ ಆಗಿ

ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಉಪಯುಕ್ತ ನ್ಯೂಸ್‌ ವಾಟ್ಸಪ್‌  ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ


web counter 

إرسال تعليق

0 تعليقات
إرسال تعليق (0)
Mandovi Motors Presents MONSOON BONANZA
Mandovi Motors Presents MONSOON BONANZA
To Top