ವಿನಾಶದ ಅಂಚಿನಲ್ಲಿರುವ ದೇಶಿಯ ಕುರಿ ತಳಿಗಳ ಸಂರಕ್ಷಣೆ ಕ್ರಮ: ಸಚಿವ ಕೆ. ವೆಂಕಟೇಶ್

Chandrashekhara Kulamarva
0


ಬೆಳಗಾವಿ ಸುವರ್ಣಸೌಧ: ರಾಜ್ಯದಲ್ಲಿ ವಿನಾಶದ ಅಂಚಿನಲ್ಲಿರುವ ದೇಶಿಯ ಕುರಿ ತಳಿಗಳನ್ನು ಸಂರಕ್ಷಿಸಲು ತಳಿ ಸಂವರ್ಧನಾ ಕೇಂದ್ರಗಳನ್ನು ಸ್ಥಾಪಿಸಲಾಗಿದೆ ಎಂದು ಪಶು ಸಂಗೋಪನೆ ಮತ್ತು ರೇಷ್ಮೆ ಸಚಿವ ಕೆ. ವೆಂಕಟೇಶ್ ಹೇಳಿದರು.


ಅವರು ಇಂದು ವಿಧಾನ ಪರಿಷತ್ತಿನಲ್ಲಿ ಸದಸ್ಯ ಯತೀಂದ್ರ ಎಸ್. ಅವರ ಚುಕ್ಕೆ ಗುರುತಿನ ಪ್ರಶ್ನೆಗೆ ಉತ್ತರಿಸಿದರು.


2019ನೇ ಜಾನುವಾರು ಗಣತಿ ಪ್ರಕಾರ ಕರ್ನಾಟಕ ರಾಜ್ಯದಲ್ಲಿ 110.51 ಲಕ್ಷ ಕುರಿಗಳು ಮತ್ತು 61.69 ಲಕ್ಷ ಮೇಕೆಗಳಿರುತ್ತವೆ. ಕರ್ನಾಟಕದಲ್ಲಿ ಮಂಡ್ಯ, ಹಾಸನ, ಕೆಂಗುರಿ, ಬಳ್ಳಾರಿ, ಡೆಕನಿ, ಯಳಗ ಕುರಿ ತಳಿಗಳು ಮತ್ತು ನಂದಿ ದುರ್ಗ, ಬಿದರಿ ಮೇಕೆ ತಳಿಗಳು ರಾಜ್ಯದಲ್ಲಿವೆ.


ವಿನಾಶದ ಅಂಚಿನಲ್ಲಿರುವ ದೇಶಿಯ ಕುರಿ ತಳಿಗಳನ್ನು ಸಂರಕ್ಷಿಸುವ ಉದ್ದೇಶದಿಂದ ರಾಜ್ಯದಲ್ಲಿ 5 ಕುರಿ/ಮೇಕೆ ತಳಿ ಸಂವರ್ಧನಾ ಕೇಂದ್ರಗಳನ್ನು ಸ್ಥಾಪಿಸಿ ರೈತರಿಗೆ ಕುರಿ/ಮೇಕೆ ಮರಿಗಳನ್ನು ತಳಿ ಉನ್ನತಿಗಾಗಿ ರಿಯಾಯಿತಿ ದರದಲ್ಲಿ ನೀಡಲಾಗುತ್ತಿದೆ ಎಂದು ತಿಳಿಸಿದರು.


ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್‌ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್‌ ಆಗಿ

ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಉಪಯುಕ್ತ ನ್ಯೂಸ್‌ ವಾಟ್ಸಪ್‌  ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ


web counter 

إرسال تعليق

0 تعليقات
إرسال تعليق (0)
To Top