ಮಂಗಳೂರು: ಸೈಂಟ್ ಆನ್ನಾ ಚರ್ಚ್, ಕೆಲರಾಯ್- ಇಲ್ಲಿಯ ಚರ್ಚ್ ಪಾಲನಾ ಮಂಡಳಿ ಆಯೋಜಿಸಿದ ‘ಬಂಧುತ್ವ ಕ್ರಿಸ್ಮಸ್ 2024, ಭಾನುವಾರ ಸಂಜೆಯ 6ರಿಂದ 7.30ರ ವರೆಗೆ ಕೆಲರಾಯ್ ಗೋಲ್ಡನ್ ಜ್ಯುಬಿಲಿ ಸಭಾಂಗಣದಲ್ಲಿ ನೆರವೇರಿತು.
ಸಭೆಯ ಅಧ್ಯಕ್ಷತೆಯನ್ನು ಕೆಲರಾಯ್ ಚರ್ಚ್ ಧರ್ಮಗುರು ಫಾದರ್ ಸಿಲ್ವೆಸ್ಟರ್ ಡಿಕೊಸ್ಟಾ ವಹಿಸಿದ್ದು, ಅತಿಥಿಗಳಾಗಿ ಬಿಜೈ ಲೂಡ್ರ್ಸ್ ಶಾಲೆಯ ನಿವೃತ್ತ ಶಿಕ್ಷಕ, ನೀರುಮಾರ್ಗ ನಿವಾಸಿ ಆನಂದ ಮಾಸ್ಟರ್ ಹಾಗೂ ಇನ್ನೋರ್ವ ಮುಖ್ಯ ಅತಿಥಿಯಾಗಿ ಮೊಹಮ್ಮದ್ ಶಫೀಖ್, ಕೌಸರಿ ಕುಕ್ಕಾಜೆ (ಧರ್ಮಗುರುಗಳು, ಆಲ್-ಮುಬಾರಕ್ ಜುಮಾ ಮಸ್ಜೀದ್ ಮಲಾರ್),
ನೀರುಮಾರ್ಗ ಗ್ರಾಮ ಪಂಚಾಯತ್ ಅಧ್ಯಕ್ಷರಾದ ಶ್ರೀಧರ್, ಪಾಲನಾ ಮಂಡಳಿಯ ಉಪಾಧ್ಯಕ್ಷರಾದ ಸಂತೋಷ್ ಡಿಕೊಸ್ಟಾ, ಕಾರ್ಯದರ್ಶಿ ಸೆಲಿನ್ ಡಿಮೆಲ್ಲೊ, ಆಯೋಗಗಳ ಸಂಯೋಜಕಿ ಲೂಸಿ ರೊಡ್ರಿಗಸ್, ಫಾತಿಮಾ ಕಾನ್ವೆಂಟಿನ ಸುಪೀರಿಯರ್ ಸಿಸ್ಟರ್ ಸಿಸಿಲಿಯಾ ಕ್ರಾಸ್ತಾ ಹಾಗೂ ಆರೋಗ್ಯಮಾತಾ ಕಾನ್ವೆಂಟಿನ ಸಿಸ್ಟರ್ ಜಿಜಿ ಮುಂತಾದವರು ವೇದಿಕೆಯಲ್ಲಿ ಉಪಸ್ಥಿತರಿದ್ದು, ಕಾರ್ಯಕ್ರಮಕ್ಕೆ ನೀರುಮಾರ್ಗ ಗ್ರಾಮ ಪಂಚಾಯತ್ ಸದಸ್ಯರು ಹಾಜರಿದ್ದರು.
ವೇದಿಕೆಯಲ್ಲಿರುವ ಗಣ್ಯರು ಸೌಹಾರ್ಧತೆಯ ಸಂದೇಶ ನೀಡಿ ಅದರ ದ್ಯೋತಕವಾಗಿ ಕ್ರಿಸ್ಮಸ್ ಕೇಕ್ ಕತ್ತರಿಸಿ ಸಿಹಿ ಹಂಚಿಕೊಂಡರು. ಐಸಿವೈಎಮ್ ಸದಸ್ಯರು ಪ್ರಾರ್ಥನಾ ಗೀತೆಯೊಂದಿಗೆ ಕಾರ್ಯಕ್ರಮಕ್ಕೆ ದೇವರ ಅನುಗ್ರಹ ಬೇಡಿದರು.
ಬಳಿಕ ‘ಮೇರಿಸ್ ಬಾಯ್ ಚೈಲ್ಡ್’ ಎಂಬ ಹಾಡನ್ನು ಭರತನಾಟ್ಯ ರೂಪದಲ್ಲಿ ಸುಂದರವಾಗಿ ನಡೆಸಿದರು ಮತ್ತು ಸೈಂಟ್ ಆನ್ನಾ ಶಾಲಾ ಮಕ್ಕಳು ವಿವಿಧ ಧರ್ಮಗಳ ನೃತ್ಯ ಹಾಗೂ ಕ್ರಿಸ್ಮಸ್ ಟ್ಯಾಬ್ಲೊ ಪ್ರದರ್ಶಿಸಿದರು.
ಕಾರ್ಯಕ್ರಮಕ್ಕೆ ಹಿಂದು, ಮುಸ್ಲಿಂ ಹಾಗೂ ಕ್ರೈಸ್ತ ಧರ್ಮದವರು ಭಾಗಿಯಾಗಿದ್ದರು. ಅಧ್ಯಕ್ಷರು ವೇದಿಕೆಯಲ್ಲಿರುವ ಗಣ್ಯರಿಗೆ ಹಾಗೂ ಎಲ್ಲಾ ಆಹ್ವಾನಿತರಿಗೆ ಕುಸ್ವಾರ್ ಬಾಕ್ಸ್ ವಿತರಿಸಿ ಶುಭ ಹಾರೈಸಿದರು.
ದೀಪಾವಳಿ, ಗಣೇಶೋತ್ಸವ, ಬಕ್ರೀದ್ ಈ ಹಬ್ಬಗಳಲ್ಲಿ ನಾವು ಮತ್ತೆ ಸೇರುವ, ಈ ಬಂಧುತ್ವ ಇಲ್ಲಿಗೇ ನಿಲ್ಲಿಸದೆ ನಿರಂತರವಾಗಿ ಆಚರಿಸಿಕೊಂಡು ಬರುವ, ಎಂದು ಅಧ್ಯಕ್ಷರು ತಮ್ಮ ಸಂದೇಶದಲ್ಲಿ ನುಡಿದರು.
ನಿರಂತರ ಅಪ್ಡೇಟ್ಗಳಿಗಾಗಿ ಉಪಯುಕ್ತ ನ್ಯೂಸ್ ಟೆಲಿಗ್ರಾಂ ಚಾನೆಲ್ಗೆ ಜಾಯಿನ್ ಆಗಿ
ಉಪಯುಕ್ತ ನ್ಯೂಸ್’ ಫೇಸ್ಬುಕ್ ಪುಟ ಲೈಕ್ ಮಾಡಿ
ಉಪಯುಕ್ತ ನ್ಯೂಸ್ ವಾಟ್ಸಪ್ ಗ್ರೂಪ್ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ