ಸೇವೆಯಿಂದ ಸಂತೃಪ್ತಿ ಸಿಕ್ಕಿದೆ : ಡಾ ಚೂಂತಾರು

Upayuktha
0

ಡಾ ಚೂಂತಾರು ಅವರಿಗೆ ಬೀಳ್ಕೊಡುಗೆ



ಮಂಗಳೂರು: ನಿನ್ನೆ ಭಾನುವಾರದಂದು ಪುತ್ತೂರು ಗೃಹ ರಕ್ಷಕ ದಳ ಘಟಕದ ವತಿಯಿಂದ ಮುಂದಿನ ಭಾನುವಾರ ಸೇವಾ ನಿವೃತ್ತಿ ಹೊಂದಲಿರುವ ದ ಕ ಜಿಲ್ಲಾ ಗೃಹರಕ್ಷಕ ದಳದ ಸಮಾದೇಷ್ಟರಿಗೆ ಶ್ರೀ ಮಹಾಲಿಂಗೇಶ್ವರ ದೇವಾಲಯ ಪುತ್ತೂರು ಇದರ ಆವರಣದಲ್ಲಿ ಬೀಳ್ಕೊಡುಗೆ ಸಮಾರಂಭ ಮತ್ತು ಸನ್ಮಾನ ಸಮಾರಂಭ ಹಮ್ಮಿಕೊಳ್ಳಲಾಗಿತ್ತು. 


ಈ ಕಾರ್ಯಕ್ರಮಕ್ಕೆ ಆಗಮಿಸಿದ ಡಾ.ಮುರಲೀ ಮೋಹನ  ಚೂಂತಾರು  ಅವರಿಗೆ ಪುತ್ತೂರು ಘಟಕದ ಗೃಹರಕ್ಷಕ- ರಕ್ಷಕಿಯರಿಂದ ಆತ್ಮೀಯವಾಗಿ ಸನ್ಮಾನ ಹಾಗೂ ಬೀಳ್ಕೊಡುಗೆ ಸಮಾರಂಭ ನೆರವೇರಿತು. ಈ ಕಾರ್ಯಕ್ರಮಕ್ಕೆ ಆಗಮಿಸಿದ್ದ ಶ್ರೀ ಮಹಾಲಿಂಗೇಶ್ವರ ದೇವಸ್ಥಾನ ಕಾರ್ಯನಿರ್ವವಣಾ ಅಧಿಕಾರಿ ಶ್ರೀನಿವಾಸ ಹಾಗೂ ವ್ಯವಸ್ಥಾಪಕ ಸಮಿತಿಯ ಸದಸ್ಯ ಈಶ್ವರ್ ನಾಯ್ಕ ಮತ್ತು ಪುತ್ತೂರು ನಗರ ಠಾಣೆಯ ಬರಹಗಾರ ಚಂದ್ರಶೇಖರ ರವರ ಹಾಗೂ ಗೃಹರಕ್ಷಕ ರಕ್ಷಕಿಯರ  ಸಮ್ಮುಖದಲ್ಲಿ ಈ ಬೀಳ್ಕೊಡುಗೆ ಸಮಾರಂಭ ನೆರವೇರಿತು. ಮೊದಲಿಗೆ ಪ್ರಾರ್ಥನೆ ಜಯಲಕ್ಶ್ಮೀ ರವರು ನೆರವೇರಿಸಿದರು. ಪುತ್ತೂರು ಘಟಕಧಿಕಾರಿಯಾದ ಅಭಿಮನ್ಯು ರೈ ಮತ್ತು ಸಾರ್ಜೆಂಟ್ ಜಗನ್ನಾಥ ಅವರು ಶುಭ ಹಾರೈಸಿದರು. ನಂತರ ಗೀತಾ ರವರು ಅನಿಸಿಕೆಗಳನ್ನು ಹಂಚಿಕೊಂಡರು. 


ತದನಂತರ ಡಾ. ಮುರಲೀ ಮೋಹನ  ಚೂಂತಾರುರವರು ಮನದಾಳದ ಮಾತು ಆಡಿದರು.  ಕಳೆದಹತ್ತು ವರುಷಗಳಿಂದ   ದ.ಕ ಜಿಲ್ಲಾ ಕಮಾಂಡೆಂಟಾಗಿ ಇಲ್ಲಿಯವರೆಗೆ ಕಾರ್ಯನಿರ್ವಹಿಸುತ್ತಿದ್ದೇನೆ. ನನ್ನ ಅಧಿಕಾರ ಸಮಯದಲ್ಲಿ ನಾನು ಕೆಲವೊಮ್ಮೆ ಕಠಿಣವಾಗಿ ವರ್ತಿಸಿರಬಹುದು.


ಆದರೆ ಅದು ಶಿಸ್ತಿನ ಕ್ರಮಕ್ಕಾಗಿ ಮಾಡಿದ್ದೇನೆ. ಹಳೆ ಎಲೆ ಚದುರಿ ಹೋಗಿ ಹೊಸ ಚಿಗುರು ಬರುವ ಹಾಗೇ ನಿಮ್ಮ ಅಕ್ಕಪಕ್ಕದ ಸದಸ್ಯರನ್ನು ಗೃಹರಕ್ಷಕ ಸಂಸ್ಥೆಗೆ ಸೇರಿಸಿ ಇಲಾಖೆಯನ್ನು ಬಲಿಷ್ಟಗೊಳಿಸಿ ಎಂದು ಮನದಾಳದ ಮಾತನಾಡಿದರು. ನಂತರ ಪುತ್ತೂರು ಘಟಕ ಅಧಿಕಾರಿಯಾದ ಅಭಿಮನ್ಯು ರೈ ರವರು ಧನ್ಯವಾದ ಭಾಷಣ ಮಾಡಿದರು. ಸುಮಾರು ಮೂವತ್ತು ಗೃಹರಕ್ಷಕರು ಈ  ಕಾರ್ಯಕ್ರಮದಲ್ಲಿ ಬಾಗವಹಿಸಿದ್ದರು.


 ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್‌ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್‌ ಆಗಿ

ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಉಪಯುಕ್ತ ನ್ಯೂಸ್‌ ವಾಟ್ಸಪ್‌  ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ


web counter 

Post a Comment

0 Comments
Post a Comment (0)
Maruti Suzuki Festival of Colours
Maruti Suzuki Festival of Colours
To Top