ಮಲ್ಲೇಶ್ವರಂ ಸಂಗೀತ ಸಭಾ: ಇಂದಿನಿಂದ ಮೂರು ದಿನ

Upayuktha
0



ಬೆಂಗಳೂರು: ಮಲ್ಲೇಶ್ವರಂ ಸಂಗೀತ ಸಭಾ ಟ್ರಸ್ಟ್‌  ಹಾಗೂ ಶ್ರೀರಾಮ ಮಂದಿರದ ಸಹಯೋಗ ದೊಂದಿಗೆ ಆರನೇ ಸಂಗೀತ ಸಮ್ಮೇಳನ ಇಂದು, ನಾಳೆ, ನಾಡಿದ್ದು (ಡಿ.20, 21 ಮತ್ತು 22) ಮಲ್ಲೇಶ್ವರಂ ಶ್ರೀರಾಮ ಮಂದಿರದಲ್ಲಿ ನಡೆಯಲಿದೆ.


ವಿದುಷಿ ಡಾ. ಟಿ.ಎಸ್. ಸತ್ಯವತಿ ಸಂಗೀತ ಸಮ್ಮೇಳನದ ಅಧ್ಯಕ್ಷತೆ ವಹಿಸಲಿದ್ದಾರೆ. ವಿದ್ವಾನ್ ಬಿ. ಆರ್ ಸೋಮಶೇಖರ್ ಜೋಯಿಸ್ ಯುವ ಸಂಗೀತ ಸಮ್ಮೇಳನದ ಅಧ್ಯಕ್ಷತೆ ವಹಿಸಲಿದ್ದಾರೆ. ಗೌರವ ಅತಿಥಿಗಳಾಗಿ ಶ್ರೀರಾಮ ಮಂದಿರದ ಕಾರ್ಯದರ್ಶಿ ಸಿ. ಚಂದ್ರಶೇಖರ್ ಭಾಗವಹಿಸುತ್ತಿದ್ದಾರೆ.


ಅಧ್ಯಯನ ಮತ್ತು ವಿಚಾರಗೋಷ್ಠಿಗಳು ನಡೆಯಲಿದ್ದು, ಮೊದಲನೆಯ ಗೋಷ್ಠಿ- ಇಂದು ಬೆಳಗ್ಗೆ 10:00ರಿಂದ 11:30ರ ವರೆಗೆ ನಡೆಯಲಿದ್ದು ತಾಳ ವಾದ್ಯ ವಿಜ್ಞಾನದ ಕುರಿತು ನಡೆಯಲಿದೆ. ವಿದ್ವಾನ್ ಡಾ. ಕೆ. ವರದರಂಗನ್ ವಿಚಾರ ಪ್ರಸ್ತುತಪಡಿಸಲಿದ್ದಾರೆ.


ಪೂರ್ವಾಹ್ನ 11:45ರಿಂದ ಮಧ್ಯಾಹ್ನ 1:15ರ ವರೆಗೆ ನಡೆಯುವ ಎರಡನೆಯ ಗೋಷ್ಠಿಯಲ್ಲಿ- ಮುತ್ತುಸ್ವಾಮಿ ದೀಕ್ಷಿತರ ದೇವಿ ಕೃತಿಗಳಲ್ಲಿ ತಂತ್ರದ ಅಂಶಗಳ ಉಲ್ಲೇಖ ಕುರಿತು ವಿದುಷಿ ಡಾ. ಮೀರಾ ರಾಜರಾಂ ಪ್ರಾಣೇಶ್ ವಿಚಾರ ಮಂಡಸಲಿದ್ದಾರೆ.


ಇಂದು ಸಂಜೆ 5:30ರಿಂದ 6:15 ರ ವರೆಗೆ ಉದ್ಘಾಟನಾ ಕಾರ್ಯಕ್ರಮವಿದೆ. ಮಲ್ಲೇಶ್ವರಂ ಸಂಗೀತ ಸಭಭಾ ಟ್ರಸ್ಟ್‌ ಅಧ್ಯಕ್ಷ ಎಂ. ಅನಂತ್ ಅಧ್ಯಕ್ಷತೆ ವಹಿಸಲಿದ್ದು, ರಾಷ್ಟ್ರಪ್ರಶಸ್ತಿ ಪುರಸ್ಕೃತ ಎಲ್.ಎಸ್‌. ಶ್ಯಾಮ ಸುಂದರ ಶರ್ಮಾ ಮುಖ್ಯ ಅತಿಥಿಯಾಗಿರುತ್ತಾರೆ. ಗೌರವ ಅತಿಥಿಗಳಾಗಿ ಡಾ. ಅನಸೂಯ ಕುಲಕರ್ಣಿ ಮತ್ತು ರಾಮ ಮಂದಿರ ಅಧ್ಯಕ್ಷ ದಕ್ಷಿಣಾ ಮೂರ್ತಿ ಭಾಗವಹಿಸುತ್ತಾರೆ.


ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್‌ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್‌ ಆಗಿ

ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಉಪಯುಕ್ತ ನ್ಯೂಸ್‌ ವಾಟ್ಸಪ್‌  ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ


web counter 

إرسال تعليق

0 تعليقات
إرسال تعليق (0)
Mandovi Motors Presents MONSOON BONANZA
Mandovi Motors Presents MONSOON BONANZA
To Top