ಮಹಾಕುಂಭಮೇಳ 2025: ಮಂಗಳೂರು-ವಾರಾಣಸಿ ವಿಶೇಷ ರೈಲು

Upayuktha
0


ಮಂಗಳೂರು: ದಕ್ಷಿಣ ರೈಲ್ವೇಯಿಂದ ಮಹಾಕುಂಭ ಮೇಳ 2025 ರ ಅಂಗವಾಗಿ ಮಂಗಳೂರು ಸೆಂಟ್ರಲ್-ವಾರಾಣಸಿ ಮಧ್ಯೆ ವಿಶೇಷ ರೈಲು ಸಂಚರಿಸಲಿದೆ.


ನಂ.06019 ಮಂಗಳೂರು ಸೆಂಟ್ರಲ್-ವಾರಾಣಸಿ ವಿಶೇಷ ರೈಲು ಮಂಗಳೂರಿನಿಂದ ಜನವರಿ 18 ಹಾಗೂ ಫೆಬ್ರವರಿ 15 ರಂದು ಶನಿವಾರ ಬೆಳಗಿನ ಜಾವ 4.15ಕ್ಕೆ ಹೊರಟು ವಾರಾಣಸಿಗೆ ಮೂರನೇ ದಿನ ಅಪರಾಹ್ನ 2.50 ಕ್ಕೆ ತಲಪುವುದು.ನಂ.06020 ವಾರಾಣಸಿ- ಮಂಗಳೂರು ಸೆಂಟ್ರಲ್‌ ರೈಲು ವಾರಾಣಸಿಯಿಂದ ಜನವರಿ 21 ಹಾಗೂ ಫೆಬ್ರವರಿ 18ರಂದು ಮಂಗಳವಾರಗಳಂದು ಸಂಜೆ 6.20 ಕ್ಕೆ ಹೊರಟು ಮಂಗಳೂರು ಸೆಂಟ್ರಲ್‌ಗೆ ನಾಲ್ಕನೇ ದಿನದಂದು ಬೆಳಗಿನ ಜಾವ 2.30 ಕ್ಕೆ ತಲಪುವುದು.


ಈ ರೈಲುಗಳು ಕಾಸರಗೋಡು, ನೀಲೇಶ್ವರ, ಪಯ್ಯನ್ನೂರು, ಕೋಝಿಕೋಡ್‌, ಶೋರ್ನೂರು ಜಂಕ್ಷನ್‌, ಅರಕೋಣಂ, ವಿಜಯವಾಡ,ವಾರಂಗಲ್‌, ನಾಗಪುರ್‌, ಇಟಾರ್ಸಿ, ಜಬಲ್ಪುರ ಮಾರ್ಗವಾಗಿ ಸಂಚರಿಸಲಿವೆ ಎಂದು ರೈಲ್ವೇ ಪ್ರಕಟಣೆ ತಿಳಿಸಿದೆ.


ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್‌ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್‌ ಆಗಿ

ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಉಪಯುಕ್ತ ನ್ಯೂಸ್‌ ವಾಟ್ಸಪ್‌  ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ


web counter 

Post a Comment

0 Comments
Post a Comment (0)
To Top