ವಾರ್ಡ್-15 ಕುಂಜತ್ ಬೈಲ್ ದಕ್ಷಿಣದಲ್ಲಿ 39 ಲಕ್ಷ ಮೊತ್ತದ ರಸ್ತೆ ಕಾಮಗಾರಿಗೆ ಗುದ್ದಲಿ ಪೂಜೆ

Upayuktha
0

ಮಂಗಳೂರು: ವಾರ್ಡ್ -15 ಕುಂಜತ್ ಬೈಲ್ ದಕ್ಷಿಣದಲ್ಲಿ 39 ಲಕ್ಷ ಮೊತ್ತದ ರಸ್ತೆ ಕಾಮಗಾರಿ ಅಭಿವೃದ್ಧಿಗೆ ಗುದ್ದಲಿ ಪೂಜೆಯನ್ನು ಶಾಸಕ ಡಾ.ವೈ ಭರತ್ ಶೆಟ್ಟಿಯವರು ನೆರವೇರಿಸಿದರು.


ವಾರ್ಡ್ ವ್ಯಾಪ್ತಿಯ ಗಾಂಧಿನಗರ ಅಡ್ಡರಸ್ತೆ 20 ಲಕ್ಷ, ಗಾಂಧಿನಗರ- ಪಳನೀರು ರಸ್ತೆ-ಕಾಲೇಜು ಅಭಿವೃದ್ಧಿ ರಸ್ತೆ 10 ಲಕ್ಷ, ಗಾಂಧಿನಗರ ಪ್ರಮೋದ್ ಮನೆ ಬಳಿ ಇಂಟರ್ ಲಾಕ್ ವ್ಯವಸ್ಥೆ ಮತ್ತು ಪಳನೀರು ನಾರಾಯಣ ಗುರು ಮಂದಿರ ಬಳಿಯ ರಸ್ತೆ ಅಭಿವೃದ್ಧಿ 9 ಲಕ್ಷ ಮೊತ್ತದ ಕಾಮಗಾರಿಗೆ ಮಂಗಳೂರು ಮಹಾನಗರ ಪಾಲಿಕೆ ಮೇಯರ್ ಮನೋಜ್ ಕುಮಾರ್ ಜೊತೆಗೂಡಿ ಅಭಿವೃದ್ಧಿ ಕಾಮಗಾರಿಗಳಿಗೆ ಚಾಲನೆ ನೀಡಿದರು.


ಕಾರ್ಯಕ್ರಮದಲ್ಲಿ ಮನಪಾ ಸದಸ್ಯೆ ಸುಮಂಗಳ ರಾವ್, ಮಂಡಲ ಕಾರ್ಯದರ್ಶಿ ರಂದೀಪ್ ಕಾಂಚನ್, ಕಾವೂರು ಮಹಾ ಶಕ್ತಿ ಕೇಂದ್ರ ಅಧ್ಯಕ್ಷ ಶೀತೇಶ್ ಕೊಂಡೆ, ಮಂಡಲ ಯುವ ಮೋರ್ಚಾ ಪ್ರಧಾನ ಕಾರ್ಯದರ್ಶಿ ಸಾಕ್ಷಾತ್ ಶೆಟ್ಟಿ, ಕಾವೂರು ವಾರ್ಡ್ ಅಧ್ಯಕ್ಷ ಅಜಿತ್ ಕಾವೂರು, ಕಾರ್ಯದರ್ಶಿ ಉದಯಚಂದ್ರ ನವೀನ್ ಶಾಂತಿನಗರ, ಪ್ರಕಾಶ್, ಸದಾಶಿವ ಪೂಜಾರಿ, ದೀಕ್ಷಿತ್ ರವರು ಉಪಸ್ಥಿತರಿದ್ದರು.


ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್‌ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್‌ ಆಗಿ

ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಉಪಯುಕ್ತ ನ್ಯೂಸ್‌ ವಾಟ್ಸಪ್‌  ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ


web counter 

Post a Comment

0 Comments
Post a Comment (0)
To Top