ಕ್ಯಾಟ್ಕದ ನೂತನ ಅಧ್ಯಕ್ಷರಾಗಿ ಲಂಚುಲಾಲ್ ಅವಿರೋಧ ಆಯ್ಕೆ

Upayuktha
0


ಮಂಗಳೂರು: ಕೋಸ್ಟಲ್ ವುಡ್ ಕಲಾವಿದರ ಮತ್ತು ತಂತ್ರಜ್ಞರ ಸಹಕಾರಿ ಒಕ್ಕೂಟ (ಕ್ಯಾಟ್ಕ)) ಇದರ ನೂತನ ಅಧ್ಯಕ್ಷರಾಗಿ ಯುವ ನಿರ್ಮಾಪಕ ನಟ  ಲಂಚುಲಾಲ್ ಕೆ‌.ಎಸ್ ರವರು ಆಯ್ಕೆ ಆಗಿದ್ದಾರೆ.


ಉರ್ವಸ್ಟೋರ್ ಅಶೋಕನಗರದಲ್ಲಿರುವ ದೇವಾಂಗ ಭವನದಲ್ಲಿ ನಡೆದ ಕೋಸ್ಟಲ್ ವುಡ್ ಕಲಾವಿದರ ಮತ್ತು ತಂತ್ರಜ್ಞರ ಸಹಕಾರಿ ಒಕ್ಕೂಟದ ವಾರ್ಷಿಕ ಮಹಾಸಭೆಯಲ್ಲಿ ಲಂಚುಲಾಲ್ ಕೆ.ಎಸ್ ಅಧ್ಯಕ್ಷರಾಗಿ, ಸಂದೀಪ್ ಶೆಟ್ಟಿ ಸುರತ್ಕಲ್ ಹಾಗೂ ನಾಯಕ ನಟ ಅನೂಪ್ ಸಾಗರ್ ಉಪಾಧ್ಯಕ್ಷರಾಗಿ ಆಯ್ಕೆಯಾದರು.


ಸುಧಾಕರ್ ಶೆಟ್ಟಿ ಬೆದ್ರ ಪ್ರಧಾನ ಕಾರ್ಯದರ್ಶಿಯಾಗಿ, ಅನಿಲ್ ಕರ್ಕೇರ ಖಜಾಂಜಿಯಾಗಿ, ವಿನಾಯಕ್ ಜಪ್ಪು ಜತೆ ಕಾರ್ಯದರ್ಶಿಯಾಗಿ ಆಯ್ಕೆಯಾದರೆ, ಯತೀಶ್ ಪೂಜಾರಿ, ತಾರನಾಥ್ ಉರ್ವ ಸಾಂಸ್ಕೃತಿಕ ಕಾರ್ಯದರ್ಶಿಗಳಾಗಿ ಆಯ್ಕೆಯಾದರು.


ಮಹಮ್ಮದ್ ಅಸ್ಗರ್, ಅಜೀತ್ ಶೆಟ್ಟಿ ಕಾವೂರ್ ಸಂಘಟನಾ ಕಾರ್ಯದರ್ಶಿಗಳಾಗಿ ಆಯ್ಕೆಯಾದರೆ, ಚರಣ್ ರಾಜ್, ರಂಜನ್ ಬೋಳೂರು, ವಿಜಯ್ ಪಂಜಿಮೊಗೆರ್, ಸುಕೇಶ್ ಶೆಟ್ಟಿ ಪಡುಪದವು, ಸಚ್ಚಿಂದ್ರ ಶೆಟ್ಟಿ ಉಡುಪಿ, ಮಂಜುನಾಥ್ ಚೆರ್ಕಾಡಿ ಕಾರ್ಯಕಾರಿ ಸಮಿತಿ ಸದಸ್ಯರಾಗಿ ಆಯ್ಕೆಯಾದರು.

ಕೋಸ್ಟಲ್ ವುಡ್ ನ ಪ್ರತಿಷ್ಠಿತ CPL ನ ಕಮಿಟಿ BCCC ಚಯರ್ ಮ್ಯಾನ್ ಆಗಿ ಪ್ರಕಾಶ್ ಶೆಟ್ಟಿ ಧರ್ಮನಗರ ಆಯ್ಕೆ ಆಗಿದ್ದಾರೆ.


ಇದೇ ಸಂದರ್ಭ ನೂತನ ಅಧ್ಯಕ್ಷ ಲಂಚುಲಾಲ್ ತಮ್ಮ ಭಾಷಣದಲ್ಲಿ ಮುಂದಿನ 2ವರ್ಷದ ಅವಧಿಯಲ್ಲಿ ಕಲಾವಿದರಿಗಾಗಿ ಹಾಗೂ ತುಳುಚಿತ್ರರಂಗದ ಅಭಿವೃದ್ಧಿಗೆ ಅನೇಕ ಯೋಜನೆಗಳನ್ನು ರೂಪಿಸಿ ಸಂಸ್ಥೆಯ ಹೆಸರನ್ನು ಇನ್ನೂ ಉತ್ತುಂಗಕ್ಕೆ ಏರಿಸುವುದಾಗಿ ಭರವಸೆ ನೀಡಿದರು.


ವಾರ್ಪಿಕ ಮಹಾಸಭೆಯಲ್ಲಿ ಒಕ್ಕೂಟದ ಸ್ಥಾಪಕ ಅಧ್ಯಕ್ಷರಾದ ಅಶ್ವಿನಿ ಕೋಟ್ಯಾನ್, ಮಾಜಿ ಅಧ್ಯಕ್ಷರಾದ ಮೋಹನ್ ಕೊಪ್ಪಳ ಕದ್ರಿ, ಪಮ್ಮಿ ಕೊಡಿಯಾಲ್ ಬೈಲ್, ಮಹಮ್ಮದ್ ಅಸ್ಗರ್, ಅನೂಪ್ ಸಾಗರ್ ಉಪಸ್ಥಿತರಿದ್ದರು.


Post a Comment

0 Comments
Post a Comment (0)
Maruti Suzuki Festival of Colours
Maruti Suzuki Festival of Colours
To Top