ಎಳೆ ಹಲಸಿನಕಾಯಿ ದೋಸೆ ಬಗ್ಗೆ ಕೇಳಿದ್ದೀರಾ? ತಿಂದಿದ್ದೀರಾ?

Upayuktha
0


ಕೇರಳದಲ್ಲೀಗ ಎಳೆ ಹಲಸಿನ ಕಾಯಿಯ ದೋಸೆಯ ಪ್ರಯೋಗ ಶುರುವಾಗಿದೆ. ಇದಕ್ಕಾಗಿ ಕೃತಜ್ಞತೆ ಹೇಳಬೇಕಿರುವುದು ಒಡಿಶಾಗೆ. ಯಾಕೆ ಅಂತೀರಾ? ಮುಂದೆ ಓದಿ...


ಇಂದು ಬೆಳಿಗ್ಗೆ ನಾನು ಒಡಿಶಾದ ಶ್ರೀಮತಿ ಪುಷ್ಪಾ ಪಾಂಡಾ ಅವರಿಂದ ನಾವು ಮೊದಲ ಬಾರಿಗೆ ಕೇಳಿದ ಎಳೆ ಹಲಸಿನ ಕಾಯಿಯ ದೋಸೆಯ ಕುರಿತು ಪರಿಚಯಸ್ಥರ ಜತೆ ಹಂಚಿಕೊಂಡೆ. ಕೇರಳ, ಕರ್ನಾಟಕದಲ್ಲಿ ಇದುವರೆಗೆ ಯಾರೂ ಎಳೆ ಹಲಸಿನ ಕಾಯಿಯ ದೋಸೆಯನ್ನು ಮಾಡಿಲ್ಲ!

ಆದರೆ ಈಗ, ನಾನು ಈ ವಿಷಯವನ್ನು ಸ್ನೇಹಿತರ ಜತೆಗೆ ಹಂಚಿಕೊಂಡ ಕೆಲವೇ ಗಂಟೆಗಳಲ್ಲಿ ಕೇರಳದ ಕಾಸರಗೋಡಿನ ರೈತ ಮತ್ತು ಉದ್ಯಮಿ ಮಹೇಶ್ ಕಾಣಿಯೂರು ಎಳೆ ಹಲಸಿನ ಕಾಯಿಯ ದೋಸೆ ಪ್ರಯೋಗ ಮಾಡಿದರು.


"ಇದು ಬಹಳ ರುಚಿಯಾಗಿದೆ. ನಾವು ಅದನ್ನು ಇಷ್ಟಪಟ್ಟಿದ್ದೇವೆ" ಎನ್ನುತ್ತಾರೆ ಮಹೇಶ್ ಕಣಿಯೂರು.

ಹಲಸಿನ ಹಣ್ಣಿನಿಂದ, ಬಲಿತ ಹಸಲಿನ ಕಾಯಿಯಿಂದ ದೋಸೆ ಮಾಡುವುದು ಎಲ್ಲರಿಗೂ ಗೊತ್ತು. ಆದರೆ ಈ ಎಳೆ ಹಲಸಿನ ಕಾಯಿಯಿಂದಲೂ ರುಚಿಕರ ದೋಸೆ ಮಾಡಬಹುದು ಅನ್ನುವ ವಿಚಾರ ಮೊದಲ ಬಾರಿಗೆ ಗೊತ್ತಾಗಿದ್ದು ಒಡಿಶಾದ ಪುಷ್ಪಾ ಪಾಂಡಾ ಅವರಿಂದ.

ಒಡಿಶಾ ಮತ್ತು ಕೇರಳ ನಡುವಿನ ತಂತ್ರಜ್ಞಾನ ವರ್ಗಾವಣೆಯ ಒಂದು ಶ್ರೇಷ್ಠ ನಿದರ್ಶನವಿದು. ಹಲಸಿನ ಮೌಲ್ಯವರ್ಧನೆ ಮತ್ತು ವಿವಿಧ ರೀತಿಯ ಬಳಕೆಗೆ ಇದೊಂದು ಹೊಸ ಸೇರ್ಪಡೆ.


ಚಿತ್ರ, ಬರಹ: ಶ್ರೀ ಪಡ್ರೆ,

ಅಡಿಕೆ ಪತ್ರಿಕೆ ಸಂಪಾದಕರು


ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್‌ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್‌ ಆಗಿ

ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಉಪಯುಕ್ತ ನ್ಯೂಸ್‌ ವಾಟ್ಸಪ್‌  ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ


web counter 

Post a Comment

0 Comments
Post a Comment (0)
Maruti Suzuki Festival of Colours
Maruti Suzuki Festival of Colours
To Top