ಮಂಗಳೂರು: ಕನ್ನಡ ಕಾಲೇಜಿನ ವ್ಯವಹಾರ ಆಡಳಿತ ವಿಭಾಗದ ಸಹ ಪ್ರಾಧ್ಯಾಪಕ ಹಾರ್ದಿಕ್ ಪಿ ಚೌಹಾಣ್ ಇವರು ರಾಜ್ಯ ಶಿಕ್ಷಣ ನೀತಿ ಪಠ್ಯಕ್ರಮಕ್ಕೆ ಅನ್ವಯಿಸುವಂತೆ ಪದವಿ ತರಗತಿಯ ವಾಣಿಜ್ಯ ವಿಭಾಗದ ಪ್ರಥಮ ಚತುರ್ಮಾಸಕ್ಕೆ ಸಂಬಂಧಿಸಿದ 'ಇಂಡಿವಿಜುವಲ್ ಅಂಡ್ ಟೀಮ್ ಮ್ಯಾನೇಜ್ಮೆಂಟ್' ಎಂಬ ಪಠ್ಯ ಪುಸ್ತಕವು ಲೋಕಾರ್ಪಣೆಗೊಂಡಿತು.
ಕಾಲೇಜಿನ ಸಂಚಾಲಕರಾದ ಸಿಎ ಎಂ ಜಗನ್ನಾಥ ಕಾಮತ್ ಹೊತ್ತಗೆಯನ್ನು ಅನಾವರಣಗೊಳಿಸಿ ಶುಭ ಹಾರೈಸಿ, ಪದವಿ ವಿದ್ಯಾರ್ಥಿಗಳ ಜ್ಞಾನ ವರ್ಧನೆಯ ಜೊತೆಗೆ ಈ ಪುಸ್ತಕವು ಈ ಶೈಕ್ಷಣಿಕ ವರ್ಷದ ಮೈಲುಗಲ್ಲಿನಂತಿದೆ ಎಂದು ಹೇಳಿದರು.
ಕಾಲೇಜಿನ ವ್ಯವಸ್ಥಾಪಕ ಕೆ. ಶಿವಾನಂದ ಶೆಣೈ, ಪ್ರಾಂಶುಪಾಲೆ ಡಾ. ಪ್ರೇಮಲತಾ. ವಿ, ಆಡಳಿತಾಧಿಕಾರಿ ಡಾ.ದೀಪ್ತಿ ನಾಯಕ್, ವಾಣಿಜ್ಯ ವಿಭಾಗದ ಮುಖ್ಯಸ್ಥೆ ಶ್ರೀಮತಿ ದೇಜಮ್ಮ, ವ್ಯವಹಾರ ಆಡಳಿತ ವಿಭಾಗದ ಮುಖ್ಯಸ್ಥೆ ಶ್ರೀಮತಿ ಸೀಮಾ ಪ್ರಭು ಎಸ್ ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.
ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್ ಆಗಿ
ಉಪಯುಕ್ತ ನ್ಯೂಸ್’ ಫೇಸ್‌ಬುಕ್ ಪುಟ ಲೈಕ್ ಮಾಡಿ
ಉಪಯುಕ್ತ ನ್ಯೂಸ್ ವಾಟ್ಸಪ್ ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ