ಸಮಾಜಕ್ಕಾಗಿ ಬದುಕುವ ಗುಣ ಮೈಗೂಡಿಸಿ: ಶ್ರೀ ಶಿವಕುಮಾರ ಸ್ವಾಮೀಜಿ

Upayuktha
0

ಕಲಬುರಗಿ: ವಿಕೆಜಿ "ಟುಲಿಪ್ ಇನ್" ಹೋಟೆಲ್ ಶುಭಾರಂಭ




ಕಲಬುರಗಿ: ಬದುಕಿನ ಸಾರ್ಥಕತೆಗಾಗಿ ಉತ್ತಮ ಗುಣಗಳನ್ನು ಮೈಗೂಡಿಸಿಕೊಂಡು ಬದುಕು ಮಾಡಿದಾಗ ಮಾತ್ರ ಜೀವನಕ್ಕೆ ಅರ್ಥ ಮತ್ತು ಮೌಲ್ಯ ಲಭಿಸುತ್ತದೆ ಎಂದು ಬೀದರ ಶ್ರೀ ಸಿದ್ಧಾರೂಢ ಮಠ ಚಿದಂಬರ ಆಶ್ರಮದ ಡಾ. ಶಿವಕುಮಾರ ಮಹಾಸ್ವಾಮೀಜಿ ಹೇಳಿದರು. 


ಕಲಬುರ್ಗಿಯ ಸೇಡಂ ರಸ್ತೆಯಲ್ಲಿ ವಿಕೆಜಿ ಗ್ರೂಪ್ ನಿಂದ ಆರಂಭವಾದ "ಟುಲಿಪ್ ಇನ್" ಹೋಟೆಲ್ ನ್ನು ಡಿಸೆಂಬರ್ 12ರಂದು ದೀಪ ಬೆಳಗಿಸಿ ಉದ್ಘಾಟನೆ ಮಾಡಿ ಮಾತನಾಡಿದರು.


ಜೀವನದಲ್ಲಿ ದೊಡ್ಡವನಾಗುವುದು ಖುಷಿಯ ವ್ಯಕ್ತಿಯಾಗುವುದು ಶ್ರೀಮಂತನಾಗುವುದು ಅಥವಾ ನಾಮ ವಂತನಾಗಬೇಕೆ ಎನ್ನುವುದು ಎಲ್ಲರ ಆಸೆಯಾದರೂ ಅದಕ್ಕಾಗಿ ಸಾಮರ್ಥ್ಯವನ್ನು ಕೂಡ ಗಳಿಸಬೇಕಾಗುತ್ತದೆ. ಬದುಕಿನ ಸಾರ್ಥಕತೆಯ ಗುಣಲಕ್ಷಣಗಳಾದ ದೈಹಿಕ ಶಕ್ತಿ, ಭೌತಿಕ ಶಕ್ತಿ, ನೈತಿಕ ಶಕ್ತಿ, ಮತ್ತು ಆಧ್ಯಾತ್ಮಿಕ ಶಕ್ತಿ ಇವುಗಳಲ್ಲಿ ಯಾವುದಾದರೂ ಒಂದನ್ನು ಪಡೆದಾಗ ಮಾತ್ರ ಬದುಕು ಸಾರ್ಥಕವಾಗುತ್ತದೆ ಇಲ್ಲವಾದರೆ  ಹುಟ್ಟಿದ ಮನುಷ್ಯ ಕೇವಲ ಜೀವಿಸುತ್ತಾನೆ ಅಷ್ಟೇ. ವೆಂಕಯ್ಯ ಗುತ್ತೇದಾರ್ ಅವರನ್ನು ನಾನು 20 ವರ್ಷದವನಿದ್ದಾಗಿನಿಂದ ಪೂರ್ಣವಾಗಿ ಬಲ್ಲೆ. ಅವರ ಆದರ್ಶದ ಬದುಕು ಎಲ್ಲರಿಗೂ ಅನುಕರಣೀ ಯವಾದದ್ದು ಮತ್ತು ಅವರೊಬ್ಬ ಅಧಿಕಾರ ಇಲ್ಲದ ಮಂತ್ರಿಯಂತೆ ಮೆರೆದು ಕೊಡುಗೈ ದಾನಿಯಾಗಿ ಇತರರಿಗಾಗಿ ಬದುಕನ್ನು ಮಾಡಿ ಜೀವನದ ಸಾರ್ಥಕತೆಯನ್ನು ಕಂಡವರು. ಅವರ ಕುಟುಂಬದವರು ಕೂಡ ಅದೇ ಹಾದಿಯಲ್ಲಿ ಮುನ್ನಡೆಯುತ್ತಿರುವುದು ಹೆಮ್ಮೆಯ ಸಂಗತಿ. ಹೊಸ ಉದ್ಯಮಕ್ಕೆ ಕಾಲಿಟ್ಟ ಗುತ್ತೇದಾರ್ ಬಳಗಕ್ಕೆ ಪೂರ್ಣ ಯಶಸ್ಸು ಸಿಗಲಿ ಎಂದು ಶುಭ ಹಾರೈಸಿದರು.


ಹೋಟೆಲ್ ನ ಮಾಲಕರಾದ ಚಂದ್ರಕಾಂತ್ ಗುತ್ತೇದಾರ್ ಸರ್ವರನ್ನು ಸ್ವಾಗತಿಸಿದರು. ಈ ಸಂದರ್ಭದಲ್ಲಿ ಪುಣೆಯ ಶಿರ್ಕೆ ಅಸೋಸಿಯೇಟ್ಸ್ ನ ಅಜಯ್ ಶಿರ್ಕೆ, ಕಲ್ಬುರ್ಗಿ ವಿಮಾನ ನಿಲ್ದಾಣದ ನಿರ್ದೇಶಕರಾದ ಮಹೇಶ್ ಚಿಲ್ಕಾ , ಯುವ ಮುಖಂಡ ನಿತಿನ್ ಗುತ್ತೇದಾರ್, ಬಿಎಸ್ಎನ್ಎಲ್ ನ ಡಿಜಿಎಂ ಅನಂತರಾಮ್ ಚೌಧರಿ, ಮಾಜಿ ಶಾಸಕ ಸುಭಾಷ್ ಆರ್ ಗುತ್ತೇದಾರ್, ಉದ್ಯಮಿಗಳಾದ ಅಶೋಕ ಗುತ್ತೇದಾರ್ ಬಡದಾಳ, ಭೀಮರಾವ್ ಸಿಂಧಗಿ, ಜೆಡಿಎಸ್ ಜಿಲ್ಲಾಧ್ಯಕ್ಷ ಬಾಲರಾಜ ಗುತ್ತೇದಾರ್, ಗಣೇಶ್ ಮಂಗಳೂರು, ಸತೀಶ್ ವಿ .ಗುತ್ತೇದಾರ್, ಆಕಾಶವಾಣಿಯ ವಿಶ್ರಾಂತ ಕಾರ್ಯಕ್ರಮ ನಿರ್ವಹಣಾಧಿಕಾರಿ ಡಾ. ಸದಾನಂದ ಪೆರ್ಲ, ಉದ್ಯಮಿ ಕಿರಣ ಶೆಟಕಾರ, ಸಂತೋಷ್ ವಿ. ಗುತ್ತೇದಾರ್, ವನಿತಾ ಮಾಲಿಕಯ್ಯ ಗುತ್ತೇದಾರ್, ಲತಾ ಚಂದ್ರಕಾಂತ್ ಗುತ್ತೇದಾರ್, ಜಮುನಾ ಗುತ್ತೇದಾರ್, ನ್ಯಾಯವಾದಿ ಗಿರಿಜಾ ಶಂಕರ್ ಶೆಟ್ಟಿ, ಸವಿತಾ ಗುತ್ತೇದಾರ್, ವಿನಾಯಕ ಗುತ್ತೇದಾರ್, ಡಾ. ಸುಶೀಲ್ ಗುತ್ತೇದಾರ್ ವಾಸವಿ ವಿಕಾಸ್ ಗುತ್ತೇದಾರ್, ಸನ್ನಿ ಸಿ. ಗುತ್ತೇದಾರ್, ಸುರೇಶ್ ಸಜ್ಜನ, ವೆಂಕಟೇಶ ಎಂ. ಕಡೇಚೂರ್, ಮಹಾದೇವ ಗುತ್ತೇದಾರ್, ನಾರಾಯಣ ಗುತ್ತೇದಾರ್ ಬೆಳಗಾವಿ ಮತ್ತಿತರರು ಉಪಸ್ಥಿತರಿದ್ದರು.


ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್‌ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್‌ ಆಗಿ

ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಉಪಯುಕ್ತ ನ್ಯೂಸ್‌ ವಾಟ್ಸಪ್‌  ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ


web counter 

إرسال تعليق

0 تعليقات
إرسال تعليق (0)
Mandovi Motors Presents MONSOON BONANZA
Mandovi Motors Presents MONSOON BONANZA
To Top