ಹೆಬ್ರಿ ಶ್ರೀ ವಿಶ್ವೇಶ ಕೃಷ್ಣ ಗೋಶಾಲೆಗೆ ಒಣಹುಲ್ಲು ಹಸ್ತಾಂತರ

Upayuktha
0


ಹೆಬ್ರಿ: ಗೆಳೆಯರ ಬಳಗದ ವತಿಯಿಂದ ಕಾರ್ಕಡ ಗ್ರಾಮಸ್ಥರಿಂದ ಸಂಗ್ರಹಿಸಿದ ಎರಡು ಲೋಡ್ ಒಣಹುಲ್ಲನ್ನು ಹೆಬ್ರಿ ಶ್ರೀ ವಿಶ್ವೇಶ ಕೃಷ್ಣ ಗೋಶಾಲೆಗೆ ಹಸ್ತಾಂತರಿಸಲಾಯಿತು. ಈ ಕೊಡುಗೆಯನ್ನು ಸ್ವೀಕರಿಸಿ, ಕೃತಜ್ಞತೆ ಸಲ್ಲಿಸಿದ ಗೋಶಾಲೆಯ ವ್ಯವಸ್ಥಾಪಕ ಸುಬ್ರಹ್ಮಣ್ಯ ಹಾಗೂ ವಿಶ್ವಸ್ಥ ಮಂಡಳಿಯ CA ರವಿರಾವ್ ಇವರುಗಳು ಬಳಗದ ಅಧ್ಯಕ್ಷ ಕೆ. ತಾರಾನಾಥ ಹೊಳ್ಳರದ್ದು ಸಮಾಜ ಸೇವೆಯನ್ನು ಹಾಗೂ ಗೆಳೆಯರ ಬಳಗದ ಸದಸ್ಯರಿಗೆ ಗೋವಿನ ಮೇಲಿರುವ ಪ್ರೀತಿ- ಭಕ್ತಿ ಅವರ ಈ ಸೇವೆಗೆ ಸಾಕ್ಷಿ. ಹುಲ್ಲು ನೀಡಿದ ಹಾಗೂ ಈ ಬಗ್ಗೆ ಕಾರ್ಯಾಚರಿಸಿದ ತಾರಾನಾಥ ಹೊಳ್ಳರು ಮತ್ತು ಗೆಳೆಯರ ಬಳಗದ ಎಲ್ಲ ಸದಸ್ಯರಿಗೂ ಗೋಮಾತೆ ಮತ್ತು ಶ್ರೀ ಕೃಷ್ಣ ಮುಖ್ಯಪ್ರಾಣರು ಅನುಗ್ರಹಿಸಲಿ ಎಂದು ಹರಸಿದರು.


ಈ ಸಂದರ್ಭದಲ್ಲಿ ಗೆಳೆಯರ ಬಳಗದ ಉಪಾಧ್ಯಕ್ಷ ಕೆ. ಶಶಿಧರ ಮಯ್ಯ, ಕಾರ್ಯದರ್ಶಿ ಕೆ. ಶೀನ, ಕೆ. ಜಗದೀಶ ಆಚಾರ್ಯ, ಕೆ. ಶೇಖರ ಬಡಾಹೋಳಿ, ಹಾಗೂ ಕೆ. ರಾಘವೇಂದ್ರಇನ್ನಿತರರು ಉಪಸ್ಥಿತರಿದ್ದರು.


ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್‌ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್‌ ಆಗಿ

ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಉಪಯುಕ್ತ ನ್ಯೂಸ್‌ ವಾಟ್ಸಪ್‌  ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ


web counter 

Post a Comment

0 Comments
Post a Comment (0)
Mandovi Motors Presents MONSOON BONANZA
Mandovi Motors Presents MONSOON BONANZA
To Top