ಪುತ್ತೂರು: ವಿವೇಕಾನಂದ ಮಹಾವಿದ್ಯಾಲಯ (ಸ್ವಾಯತ್ತ) ಪುತ್ತೂರು ಮತ್ತು ಬಾಬಿ ಫಿಶರ್ ಚೆಸ್ ಅಸೋಸಿಯೇಷನ್ (ರಿ) ಇದರ ಆಶ್ರಯದಲ್ಲಿ ಕಾಲೇಜಿನ ಸುವರ್ಣ ಮಹೋತ್ಸವ ಸಭಾಭವನದಲ್ಲಿ ಡಿಸೆಂಬರ್ 16 ರಂದು ಪ್ರಾಥಮಿಕ, ಪ್ರೌಢ ಮತ್ತು ಪದವಿ ಪೂರ್ವ ವಿಭಾಗದ ವಿದ್ಯಾರ್ಥಿಗಳಿಗೆ ಜಿಲ್ಲಾ ಮಟ್ಟದ ಚೆಸ್ ಸ್ಪರ್ಧೆ ನಡೆಯಲಿದೆ.
ಮೂರು ವಿಭಾಗಗಳಲ್ಲಿ ಸ್ಪರ್ಧೆ ನಡೆಯಲಿದ್ದು, ಕಿರಿಯ ಪ್ರಾಥಮಿಕ ವಿಭಾಗ (1ರಿಂದ 5ನೇ ತರಗತಿ ) ಹಿರಿಯ ಪ್ರಾಥಮಿಕ ವಿಭಾಗ (6 ರಿಂದ 8 ನೇ ತರಗತಿ ) ಮತ್ತು ಪ್ರೌಢ ಹಾಗೂ ಪದವಿಪೂರ್ವ ವಿಭಾಗ (9 ರಿಂದ 12ನೇ ತರಗತಿ) ದಲ್ಲಿ ನಡೆಯಲಿದೆ.
ಪ್ರತಿ ವಿಭಾಗದಲ್ಲಿಯೂ ಪ್ರಥಮ ಮೂರು ಸ್ಥಾನ ವಿಜೇತರಿಗೆ ನಗದು ಬಹುಮಾನ ಮತ್ತು ಉತ್ತಮ 5 ಸ್ಥಾನ ಪಡೆದವರಿಗೆ ಟ್ರೋಫಿಯನ್ನು ನೀಡಲಾಗುವುದು. ಭಾಗವಹಿಸುವ ಎಲ್ಲಾ ವಿದ್ಯಾರ್ಥಿಗಳು ಸ್ವತಃ ಚೆಸ್ ಬೋರ್ಡ್ ಹಾಗೂ ಶಾಲಾ ಐ ಡಿ. ಕಾರ್ಡ್ ಅಥವಾ ಗುರುತಿನ ಪತ್ರ ಅನ್ನು ತರುವುದು. ಈ ಪಂದ್ಯಾಟಕ್ಕೆ ಪ್ರವೇಶ ಶುಲ್ಕವಿದ್ದು ಪ್ರಾಥಮಿಕ ಶಾಲಾ ವಿಭಾಗ 200 ರೂ. ಮತ್ತು ಹೈಸ್ಕೂಲ್ ಹಾಗೂ ಪದವಿ ಪೂರ್ವ ವಿಭಾಗಕ್ಕೆ ರೂ 300 ಆಗಿರುತ್ತದೆ. ಭಾಗವಹಿಸುವ ಸ್ಪರ್ಧಿಗಳು ದಿನಾಂಕ 13.12.2024ರ ಮೊದಲು ಹೆಸರು ನೋಂದಾಯಿಸಬೇಕೆಂದು ಕಾಲೇಜಿನ ಪ್ರಕಟಣೆ ತಿಳಿಸಿದೆ.
ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್ ಆಗಿ
ಉಪಯುಕ್ತ ನ್ಯೂಸ್’ ಫೇಸ್‌ಬುಕ್ ಪುಟ ಲೈಕ್ ಮಾಡಿ
ಉಪಯುಕ್ತ ನ್ಯೂಸ್ ವಾಟ್ಸಪ್ ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ