ಬೆಂಗಳೂರು: ಕೋಣನಕುಂಟೆಯ ಜೆಎಸ್‌ಎಸ್ ಶಾಲೆಯ ಮಕ್ಕಳಿಗೆ ಶ್ರೀ ಬಾಲಾಜಿ ಧರ್ಮಜಾಗೃತಿ ಸಮಿತಿ ವತಿಯಿಂದ ಸಮಾಜ ಸಹಾಯ ಅಭಿಯಾನದ ಅಡಿಯಲ್ಲಿ ’ಸಂಸ್ಕಾರ ನೋಟ್ ಬುಕ್’ಗಳನ್ನು ವಿತರಿಸಲಾಯಿತು. 250ಕ್ಕೂ ಹೆಚ್ಚು ಮಕ್ಕಳು ಇದರ ಲಾಭ ಪಡೆದುಕೊಂಡರು.
ಈ ಸಂದರ್ಭದಲ್ಲಿ ಮಾತನಾಡಿದ ಸಮಿತಿಯ ಕಾರ್ಯಕರ್ತರಾದ ಸೌ. ವತ್ಸಲಕಾಶಿ ಇವರು ಧರ್ಮಾಚರಣೆಯನ್ನು ನಾವು ದಿನನಿತ್ಯ ಮಾಡುವುದರಿಂದ ನಮ್ಮ ಆತ್ಮಸ್ಥರ್ಯ ಹೆಚ್ಚಾಗುತ್ತದೆ ಮತ್ತು ಕುಂಕುಮ ಧಾರಣೆ ಮಾಡಿಕೊಳ್ಳುವುದರಿಂದ ನಮ್ಮಲ್ಲಿ ಶಿವ - ಶಕ್ತಿ ತತ್ವ ಜಾಗೃತವಾಗುತ್ತದೆ. ಮೊದಲು ನಾವು ರಾಷ್ಟ್ರ ಪ್ರೇಮಿಗಳಾಗಬೇಕು, ಇದರಿಂದ ನಮ್ಮ ದೇಶದ ಬಗ್ಗೆ ಸತ್ ಚಿಂತನೆ ಮಾಡಲು ಸಹಕಾರಿಯಾಗುತ್ತದೆ. ಸಮಾಜದಲ್ಲಿ ಸತ್ಪ್ರಜೆಯಾಗಿ ಬದುಕಲು ನಮಗೆ ನೈತಿಕ ಮೌಲ್ಯ ಶಿಕ್ಷಣದ ಅಗತ್ಯ ಇದೆ ಎಂದರು.
ಮುಂದೆ ಅವರು ಮಾತನಾಡುತ್ತಾ ಈ ಸಂಸ್ಕಾರ ನೋಟ್ ಬುಕ್ಕಿನಲ್ಲಿ ನಮ್ಮ ರಾಷ್ಟ್ರಪುರುಷರ, ಸ್ವಾತಂತ್ರ್ಯ ಹೋರಾಟಗಾರರ ಹಾಗೂ ಸಂತರ ಭಾವಚಿತ್ರದ ಜೊತೆಗೆ ಅವರ ಮಾಹಿತಿಗಳು ಇರುತ್ತದೆ ಅದರಿಂದ ನಮಗೆ ಅವರ ಶಕ್ತಿ ಸಾಮರ್ಥ್ಯಗಳ ಅರಿವಾಗಿ ನಮಗೆ ಅದನ್ನು ಅಳವಡಿಸಿಕೊಳ್ಳಲು ಸಹಾಯವಾಗುತ್ತದೆ ಎಂದರು. ಈ ವೇಳೆ ಸಮಿತಿಯ ಕಾರ್ಯಕರ್ತರಾದ ಸೌ. ಕೋಮಲಕಾಶಿ, ಸೌ. ಅನುರಾಧ ಸಿಂಗ್, ಸೋಮಶೇಖರ್ ಹಾಗೂ ಶಾಲೆಯ ಮುಖ್ಯೋಪಧ್ಯಾಯರಾದ ಡಿ. ನಾಗರಾಜಪ್ಪ ಹಾಗೂ ಸಿಬ್ಬಂದಿ ವರ್ಗದವರು ಉಪಸ್ಥಿತರಿದ್ದರು.
ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್ ಆಗಿ
ಉಪಯುಕ್ತ ನ್ಯೂಸ್’ ಫೇಸ್‌ಬುಕ್ ಪುಟ ಲೈಕ್ ಮಾಡಿ
ಉಪಯುಕ್ತ ನ್ಯೂಸ್ ವಾಟ್ಸಪ್ ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ